BRICS Summit 2026: ದೆಹಲಿ ಸುತ್ತ 300 ಕಿ.ಮೀ. ವಿಮಾನ ಹಾರಾಟಕ್ಕೆ ನಿರ್ಬಂಧ; ಇಲ್ಲಿದೆ ಸಂಪೂರ್ಣ ವಿವರ

Published : Sep 11, 2026, 12:09 AM IST
Delhi flight restrictions

ಸಾರಾಂಶ

BRICS Summit 2026: ಸೆ.11ರಿಂದ 13ರವರೆಗೆ ದೆಹಲಿ ಸುತ್ತ 300 ಕಿ.ಮೀ. ವ್ಯಾಪ್ತಿಯಲ್ಲಿ ವಿಮಾನ ಹಾರಾಟಕ್ಕೆ ವಿಶೇಷ ನಿರ್ಬಂಧ. ಏರ್‌ಪೋರ್ಟ್‌ ಹಾಗೂ ವಿಮಾನಗಳ ಹೊಸ ನಿಯಮಗಳ ಸಂಪೂರ್ಣ ಮಾಹಿತಿ.

ನವದೆಹಲಿ (ಸೆ.11): ಬ್ರಿಕ್ಸ್‌ ಶೃಂಗಸಭೆಯ ಹಿನ್ನೆಲೆಯಲ್ಲಿ ಸೆಪ್ಟೆಂಬರ್‌ 11ರಿಂದ 13ರವರೆಗೆ ದೆಹಲಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿಮಾನ ಹಾರಾಟಕ್ಕೆ ವಿಶೇಷ ಭದ್ರತಾ ನಿಯಮಗಳನ್ನು ಜಾರಿಗೊಳಿಸಲಾಗುತ್ತಿದೆ. ಸೆಪ್ಟೆಂಬರ್‌ 11ರಂದು ಭಾರತೀಯ ಕಾಲಮಾನ ಬೆಳಗ್ಗೆ 7 ಗಂಟೆಯಿಂದ ಸೆಪ್ಟೆಂಬರ್‌ 13ರಂದು ರಾತ್ರಿ 11 ಗಂಟೆಯವರೆಗೆ ಈ ನಿರ್ಬಂಧಗಳು ಜಾರಿಯಲ್ಲಿರಲಿವೆ ಎಂದು ಮೂಲಗಳು ತಿಳಿಸಿವೆ.

ಈ ಅವಧಿಯಲ್ಲಿ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿದಂತೆ ದೆಹಲಿಯಿಂದ 300 ಕಿ.ಮೀ. ವ್ಯಾಪ್ತಿಯಲ್ಲಿರುವ ವಿಮಾನ ನಿಲ್ದಾಣಗಳಲ್ಲಿ ಸಾಮಾನ್ಯ ವಿಮಾನಗಳ ಟೇಕ್‌ಆಫ್‌ ಮತ್ತು ಲ್ಯಾಂಡಿಂಗ್‌ಗೆ ನಿರ್ಬಂಧ ಇರಲಿದೆ.

ಆದರೆ ಕೆಳಗಿನ ವಿಮಾನಗಳಿಗೆ ಮಾತ್ರ ಅನುಮತಿ ನೀಡಲಾಗಿದೆ

* ನಿಯಮಿತವಾಗಿ ಸಂಚರಿಸುವ ನಿಗದಿತ ವಾಣಿಜ್ಯ ವಿಮಾನಗಳು.

* ಬ್ರಿಕ್ಸ್‌ ಶೃಂಗಸಭೆಯಲ್ಲಿ ಭಾಗವಹಿಸುವ ಗಣ್ಯರು ಹಾಗೂ ಅವರೊಂದಿಗೆ ಸಂಬಂಧಿಸಿದ ವಿಶೇಷ ವಿಮಾನಗಳು. ಇವುಗಳ ಫ್ಲೈಟ್‌ ಪ್ಲಾನ್‌ಗಳನ್ನು ಮುಂಚಿತವಾಗಿ ಎಟಿಸಿ ಅನುಮೋದಿಸಿರಬೇಕು. ಇಂತಹ ವಿಮಾನಗಳನ್ನು ನಿಗದಿತ ವಿಮಾನಗಳೆಂದು ಪರಿಗಣಿಸಲಾಗುತ್ತದೆ.

* ಭಾರತೀಯ ವಾಯುಪಡೆ (IAF), ಗಡಿ ಭದ್ರತಾ ಪಡೆ (BSF) ಮತ್ತು ಏವಿಯೇಷನ್‌ ರಿಸರ್ಚ್‌ ಸೆಂಟರ್‌ನ ವಿಮಾನಗಳು.

* ತ್ವರಿತ ಪ್ರತಿಕ್ರಿಯೆ ಅಥವಾ ತುರ್ತು ವೈದ್ಯಕೀಯ ಸ್ಥಳಾಂತರ ಕಾರ್ಯಾಚರಣೆಗಳಲ್ಲಿ ತೊಡಗಿರುವ ಸೇನಾ ಹೆಲಿಕಾಪ್ಟರ್‌ಗಳು.

* ರಾಜ್ಯಪಾಲರು ಅಥವಾ ಮುಖ್ಯಮಂತ್ರಿಗಳನ್ನು ಕರೆದೊಯ್ಯುವ ರಾಜ್ಯ ಸರ್ಕಾರದ ವಿಮಾನಗಳು ಹಾಗೂ ಹೆಲಿಕಾಪ್ಟರ್‌ಗಳು.

300 ಕಿ.ಮೀ. ವ್ಯಾಪ್ತಿಯಲ್ಲಿ ಹಾರಾಟಕ್ಕೂ ಎತ್ತರದ ನಿಯಮ

ನಿಯಮಿತ ನಿಗದಿತ ವಿಮಾನಗಳು ಹಾಗೂ ಈ ವಲಯದ ಮೇಲ್ಭಾಗದಲ್ಲಿ ಹಾರುವ ಓವರ್‌ಫ್ಲೈಟ್‌ಗಳಿಗೆ ಸಾಮಾನ್ಯ ಮಾರ್ಗದಲ್ಲಿ ಸಂಚರಿಸಲು ಅವಕಾಶವಿರಲಿದೆ. ಆದರೆ ಇವುಗಳಿಗೆ ನಿರ್ದಿಷ್ಟ ಎತ್ತರದ ನಿಯಮಗಳನ್ನು ಪಾಲಿಸುವುದು ಕಡ್ಡಾಯ.

ಹಾರಾಟ ಆರಂಭಿಸುವ ವೇಳೆ (Climb): ದೆಹಲಿಯಿಂದ 200 ಕಿ.ಮೀ. ದೂರ ತಲುಪುವಷ್ಟರಲ್ಲಿ ವಿಮಾನವು FL290 ಎತ್ತರವನ್ನು ತಲುಪಿರಬೇಕು.

ಇಳಿಯುವ ವೇಳೆ (Descent): ವಿಮಾನವು ದೆಹಲಿಯಿಂದ ಕನಿಷ್ಠ 200 ಕಿ.ಮೀ. ದೂರದಲ್ಲಿರುವಾಗ ಮಾತ್ರ FL290ನಿಂದ ಕೆಳಕ್ಕೆ ಇಳಿಯಲು ಆರಂಭಿಸಬೇಕು.

ಸಫ್ದರ್‌ಜಂಗ್‌ ವಿಮಾನ ನಿಲ್ದಾಣವೂ ಬಂದ್‌

ಈ ಅವಧಿಯಲ್ಲಿ ಸಫ್ದರ್‌ಜಂಗ್‌ ವಿಮಾನ ನಿಲ್ದಾಣ (VIDD) ಕೂಡ ಮುಚ್ಚಿರಲಿದೆ. ತುರ್ತು ಅಥವಾ ವಿಐಪಿ ಕರ್ತವ್ಯದಲ್ಲಿರುವ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್‌ಗಳಿಗೆ ಮಾತ್ರ ಇಲ್ಲಿ ವಿನಾಯಿತಿ ನೀಡಲಾಗಿದೆ. ರಾಷ್ಟ್ರೀಯ ಭದ್ರತಾ ಪಡೆಯ (NSG) ಕೆಲವು ಕಾರ್ಯಾಚರಣೆಗಳಲ್ಲಿ ಬಳಸುವ BSF ಮತ್ತು IAF ಹೆಲಿಕಾಪ್ಟರ್‌ಗಳಿಗೂ ಅವಕಾಶ ಇರಲಿದೆ.

ಇದೇ ವೇಳೆ ರೋಹಿಣಿ ಹೆಲಿಪ್ಯಾಡ್‌ ಸಂಪೂರ್ಣವಾಗಿ ಮುಚ್ಚಿರಲಿದೆ. ಮೇಲಿನ ಅನುಮತಿಸಲಾದ ಪಟ್ಟಿಯಲ್ಲಿ ಸೇರದ ಯಾವುದೇ ವಿಮಾನ ಹಾರಾಟ ನಡೆಸಬೇಕಾದರೆ ಕೇಂದ್ರ ಗೃಹ ಸಚಿವಾಲಯದಿಂದ (Ministry of Home Affairs) ಮುಂಚಿತ ಭದ್ರತಾ ಅನುಮತಿ ಪಡೆಯುವುದು ಕಡ್ಡಾಯ ಎಂದು ಮೂಲಗಳು ತಿಳಿಸಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮತ್ತೆ ಆಂದೋಲನ ಮಾಡಬೇಕಾಗುತ್ತದೆ ಹುಷಾರ್, ಕೇಂದ್ರಕ್ಕೆ ವಾಂಗ್ಚುಕ್ ಮತ್ತೆ ಎಚ್ಚರಿಕೆ, ಈ ಬಾರಿ ವಿಷಯ ಏನು?
ದೇವಾಲಯದಲ್ಲಿ 12 ಅಡಿ ನಾಗರ ಪ್ರತ್ಯಕ್ಷ- ಡೋಲು ಬಾರಿಸಿದಾಗ ನಡೆದ ಪವಾಡ ನೋಡಿ ಪುಳಕಿತಗೊಂಡ ಭಕ್ತರು