ಇದೇನಾ ಅಚ್ಛೇ ದಿನ್? ಸೈಕಲ್‌ನಲ್ಲಿ ಸಂಸತ್ತು ತಲುಪಿದ ರಾಹುಲ್ ಗಾಂಧಿ!

Published : Aug 03, 2021, 04:23 PM IST
ಇದೇನಾ ಅಚ್ಛೇ ದಿನ್? ಸೈಕಲ್‌ನಲ್ಲಿ ಸಂಸತ್ತು ತಲುಪಿದ ರಾಹುಲ್ ಗಾಂಧಿ!

ಸಾರಾಂಶ

* ಸರ್ಕಾರದ ವಿರುದ್ಧ ವಿಪಕ್ಷಗಳ ಒಗ್ಗಟ್ಟು * ಸೈಕಲ್‌ನಲ್ಲಿ ಸಂಸತ್ತು ತಲುಪಿದ ರಾಹುಲ್ ಗಾಂಧಿ * ಹಣದುಬ್ಬರದ ಬಗ್ಗೆ ಧ್ವನಿ ಎತ್ತಿದ ನಾಯಕನಿಗೆ ನೆಟ್ಟಿಗರ ಕ್ಲಾಸ್‌

ನವದೆಹಲಿ(ಆ.03): ಸೈಕ್ಲಿಂಗ್ ಮಾಡುತ್ತಾ ರಾಹುಲ್ ಗಾಂಧಿ ಮಂಗಳವಾರ ಸಂಸತ್ ಭವನಕ್ಕೆ ತೆರಳಿದ್ದಾರೆ. ಆದರೆ ಅವರ ಈ ನಡೆ ಬೆನ್ನಲ್ಲೇ ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಅವರನ್ನುಮುಂದಿನ ಪ್ರಧಾನಿ ಎಂದು ಹೇಳಿದ್ದಾರೆ. ಇನ್ನು ಮಂಗಳವಾರದಂದು ರಾಹುಲ್ ಗಾಂಧಿ ವಿಪಕ್ಷ ನಾಯಕರೊಂದಿಗೆ ಸಭೆ ನಡೆಸಿದ್ದಾರೆ. ಈ ವೇಳೆ ವಿಭಿನ್ನ ವಿಚಾರಗಳಲ್ಲಿ ಕೇಂದ್ರ ಸರ್ಕಾರದ ಮೇಲೆ ಹೇಗೆ ವಾಗ್ದಾಳಿ ನಡೆಸವ ಬಗ್ಗೆಯೂ ಚರ್ಚೆ ನಡೆದಿದೆ ಎನ್ನಲಾಗಿದೆ.

ಹಣದುಬ್ಬರದ ವಿಚಾರದಲ್ಲಿ ಒಗ್ಗಟ್ಟು ಪ್ರದರ್ಶಿಸಲು ಮನವಿ

ರಾಹುಲ್ ಗಾಂಧಿ ಮಂಗಳವಾರ Constitution Club ನಲ್ಲಿ 17 ಸಮಾನ ಮನಸ್ಕ ರಾಜಕೀಯ ಪಕ್ಷಗಳೊಂದಿಗೆ ಉಪಹಾರ ಸೇವಿಸಿದರು. ಬಳಿಕ ಎಲ್ಲರೂ ಸೈಕಲ್ ಮೂಲಕ ಸಂಸತ್ ಭವನ ತಲುಪಿದರು. ಪ್ರಸ್ತುತ ಮುಂಗಾರು ಅಧಿವೇಶನ ನಡೆಯುತ್ತಿದೆ ಎಂಬುವುದು ಉಲ್ಲೇಖನೀಯ. ಸಭೆಯಲ್ಲಿ, ರಾಹುಲ್ ಗಾಂಧಿ ಅವರು ವಿರೋಧ ಪಕ್ಷಗಳು ತಮ್ಮ ನಡುವೆ ವಾದಿಸಬಹುದು, ಆದರೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ವಿಷಯದಲ್ಲಿ ಎಲ್ಲರೂ ಒಟ್ಟಾಗಿ ಧ್ವನಿ ಎತ್ತಬೇಕಾಗುತ್ತದೆ ಎಂದು ಹೇಳಿದ್ದಾರೆ. ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಕೂಡಾ ಸರ್ಕಾರ ತಮ್ಮ ಮಾತು ಕೇಳಿತ್ತಿಲ್ಲ. ಹೀಗಾಗಿ, ಬೀದಿಯಿಂದ ಸಂಸತ್ತಿನವರೆಗೆ ಹೋರಾಟ ಮಾಡಬೇಕಾಗುತ್ತದೆ ಎಂದಿದ್ದಾರೆ.

ಟ್ವಿಟರ್‌ನಲ್ಲಿ ಬೈಸಿಕಲ್ ಯಾತ್ರೆ ಚರ್ಚೆ

ಸೈಕಲ್ ಮೂಲಕ ಸಂಸತ್ ಭವನವನ್ನು ತಲುಪಿದ ನಂತರ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದು, ನಮ್ಮ ಮುಖಗಳು ಅಥವಾ ನಮ್ಮ ಹೆಸರುಗಳು ಮುಖ್ಯವಲ್ಲ. ನಾವು ಜನಪ್ರತಿನಿಧಿಗಳಾಗುವುದು ಅಗತ್ಯ, ಪ್ರತಿಯೊಂದು ಮುಖವೂ ಹಣದುಬ್ಬರದಿಂದ ತೊಂದರೆಗೊಳಗಾದ ದೇಶದ ಕೋಟಿ ಜನರ ಮುಖದ ಸಂಕೇತವಾಗಿದೆ. ಇದೇನಾ ಅಚ್ಛೇ ದಿನ್? ಎಂದು ಪ್ರಶ್ನಿಸಿದ್ದಾರೆ. 

ಈ ಬಗ್ಗೆ ನೆಟ್ಟಿಗರ ಭರ್ಜರಿ ಪ್ರತಿಕ್ರಿಯೆ

ನೆಟ್ಟಿಗನೊಬ್ಬ ಈ ಬಗ್ಗೆ ಬರೆಯುತ್ತಾ, ದೇಶವಾಸಿಗಳೇ ವಿಪಕ್ಷಗಳ ಈ ನಡೆ ಸರಿ ಎನ್ನುತ್ತೀರೇ? ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುವುದು ಉತ್ತಮ. ಆದರೆ ಸಂಸತ್ ಕಲಾಪ ನಡೆಸಲು ಬಿಡದಿರುವುದು ಎಷ್ಟು ಸರಿ? ಇಂತಹ ಸಮಸ್ಯೆಗಳ ಚರ್ಚೆ ಸಂಸತ್ತಿನಲ್ಲಿ ನಡೆಯಬೇಕು ಎಂದಿದ್ದಾರೆ. 

ಮೇರಿ ಕೋಮ್ ಪದಕ ಗೆಲ್ಲದಿದ್ದಕ್ಕಾಗಿ ದೇಶದ ಕ್ಷಮೆ ಕೇಳಿದ್ದಾರೆ .. !! ಇಲ್ಲೊಬ್ಬ ವ್ಯಕ್ತಿ 40 ಚುನಾವಣೆಗಳಲ್ಲಿ ಸೋತ ನಂತರವೂ ಟ್ರ್ಯಾಕ್ಟರ್ ಸೈಕಲ್ ಓಡಿಸುತ್ತಿದ್ದಾನೆ .. !!

ಒಂದು ಕಾಲದಲ್ಲಿ ಜನರು ಆಂದೋಲನ ಮಾಡುತ್ತಿದ್ದರು, ಮತ್ತು ನಾಯಕರು ಮನೆಯಲ್ಲಿ ಕುಳಿತು ಇದನ್ನು ವೀಕ್ಷಿಸುತ್ತಿದ್ದರು. ಆದರೆ ಇಂದು ಮೋದಿ ಜೀಯವರು ತೆಗೆದುಕೊಂಡ ನಿರ್ಧಾರ ಹಾಗೂ ಯೋಜನೆಗಳಿಂದ ಭ್ರಷ್ಟ ನಾಯಕರು ಆಂದೋಲನ ಮಾಡುತ್ತಿದ್ದಾರೆ ಮತ್ತು ಜನರು ಮನೆಯಲ್ಲಿ ಸದ್ದಿಲ್ಲದೆ ಕುಳಿತು ಆನಂದಿಸುತ್ತಿದ್ದಾರೆ  ಎಂದೂ ಒಬ್ಬರು ಬರೆದಿದ್ದಾರೆ.

ನಿಮ್ಮ ಆಡಳಿತ ಅವಧಿಯಲ್ಲಿ ಎಲ್ಲವೂ ಉಚಿತವಾಗಿ ಲಭ್ಯವಿತ್ತು, ಹೀಗಾಗೇ ಡಾ. ಮನಮೋಹನ್ ಸಿಂಗ್ ಮರದಿಂದ ಹಣ ಉದುರುವುದಿಲ್ಲ, ದೇಶದ ಸಂಪನ್ಮೂಲಗಳ ಮೇಲೆ ಅಲ್ಪಸಂಖ್ಯಾತರಿಗೆ ಮೊದಲ ಹಕ್ಕಿದೆ ಎಂದು ಹೇಳುತ್ತಿದ್ದರು. ಎಲ್ಲಾ ಯುವಕರಿಗೆ ಸರ್ಕಾರಿ ಕೆಲಸ ಸಿಕ್ಕಿತು, ಅಸಂಬದ್ಧತೆಗೆ ಒಂದು ಮಿತಿ ಇದೆ. ದೇಶದ ಸಾಮಾನ್ಯ ಜನರು ಎಲ್ಲವನ್ನೂ ಅರ್ಥಮಾಡಿಕೊಳ್ಳುತ್ತಿದ್ದಾರೆ ಎಂದೂ ರಾಹುಲ್ ವಿರುದ್ಧ ಕಿಡಿ ಕಾರಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಆರ್ಥಿಕತೆ ಬಾಹುಬಲಿಯ ರೂಪಾಯಿ ಮೌಲ್ಯ ICUನಲ್ಲಿ; ಅಂದುಕೊಂಡಂಗಿಲ್ಲ ಭವಿಷ್ಯ!
India Latest News Live: ವಿರಾಟ್ ಕೊಹ್ಲಿಯಲ್ಲ, ಈ ಆಟಗಾರ ಹೆಚ್ಚು ಹಾರ್ಡ್‌ ವರ್ಕ್ ಮಾಡುವ ಆಟಗಾರ ಎಂದ ಯಶಸ್ವಿ ಜೈಸ್ವಾಲ್!