ಭಾರತೀಯನ ಮದುವೆಯಾದ ಬ್ರೆಜಿಲ್ ಬೆಡಗಿ: ಲವ್‌ ಸ್ಟೋರಿ ಭಾರಿ ವೈರಲ್

Published : Aug 18, 2025, 05:54 PM IST
Brazilian Woman and Indian Man's Cross-Cultural Love Story

ಸಾರಾಂಶ

ಮದುವೆ ಸ್ವರ್ಗದಲ್ಲೇ ನಿಗದಿಯಾಗಿರುತ್ತದೆ ಎಂಬ ಮಾತಿದೆ. ಅದರಂತೆ ಇಲ್ಲೊಂದು ಕಡೆ ಬ್ರೆಜಿಲ್ ಬೆಡಗಿಯೊಬ್ಬಳು ಭಾರತೀಯನ ಮದುವೆಯಾಗಿದ್ದು, ಈ ಜೋಡಿಯ ಪ್ರೇಮಕತೆ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ.

ಮದುವೆ ಸ್ವರ್ಗದಲ್ಲೇ ನಿಗದಿಯಾಗಿರುತ್ತದೆ ಎಂಬ ಮಾತಿದೆ. ಅದರಂತೆ ಎಲ್ಲೋ ಹುಟ್ಟಿ ಎಲ್ಲೋ ಬೆಳೆದ ವಧು ಮತ್ತಿನ್ನೆಲ್ಲೋ ಬೆಳೆದ ವರನ ಮದುವೆಯಾಗಿ ದಂಪತಿಗಳಾಗುತ್ತಾರೆ. ಅದೇ ರೀತಿ ಇಲ್ಲೊಂದು ಕಡೆ ಬ್ರೆಜಿಲ್ ಬೆಡಗಿಯೊಬ್ಬಳು ಭಾರತೀಯನ ಮದುವೆಯಾಗಿದ್ದು, ಈ ಜೋಡಿಯ ಪ್ರೇಮಕತೆ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ. ಬ್ರೆಜಿಲ್‌ನ ಮಹಿಳೆ ತೈನಾ ಶಾ, ತನ್ನ ಗುಜರಾತಿ ಪತಿಯೊಂದಿಗಿನ ಮದುವೆ ಹಾಗೂ ಪ್ರೇಮದ ಬಗ್ಗೆ ತಮ್ಮ ಇನ್ಸ್ಟಾದಲ್ಲಿ ಹಂಚಿಕೊಂಡ ನಂತರ ವೈರಲ್ ಆಗಿದ್ದಾರೆ. ಅನೇಕರು ಅವರ ಅಂತರ್ ಸಂಸ್ಕೃತಿಯ ಮದುವೆ ನೋಡಿ ಖುಷಿಯಾಗಿದ್ದಾರೆ.

ನಾವು ನಮ್ಮ ಬಹುಸಂಸ್ಕೃತಿಯ ಪ್ರೇಮಕಥೆಯನ್ನು ಹಂಚಿಕೊಳ್ಳುತ್ತಿದ್ದೇವೆ ನಿಷೇಧಗಳನ್ನು ಮುರಿಯುತ್ತೇವೆ ಮತ್ತು ವರ್ಣಭೇದ ನೀತಿಯ ಬಗ್ಗೆ ಮುಕ್ತ ಮನಸ್ಸಿನವರಾಗಿ ಮಾತನಾಡುತ್ತೇವೆ. ಸಂಸ್ಕೃತಿಗಳನ್ನು ದಾಟುವ, ಸಂಪ್ರದಾಯಗಳಿಗೆ ಸವಾಲು ಮಾಡುವ ಮತ್ತು ವೈವಿಧ್ಯತೆಯನ್ನು ಸ್ವೀಕರಿಸಲು ಇತರರನ್ನು ಪ್ರೇರೇಪಿಸುವ ಪ್ರೀತಿಯನ್ನು ನಾವು ಆಚರಿಸುತ್ತೇವೆ ಎಂದು ತೈನಾ ಶಾ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡು ತಮ್ಮಿಬ್ಬರ ಮೊದಲ ಭೇಟಿ ಹೇಗಾಯ್ತು ಎಂಬುದನ್ನು ಹೇಳಿಕೊಂಡಿದ್ದಾರೆ.

2020 ರಲ್ಲಿ COVID-19 ಸಾಂಕ್ರಾಮಿಕ ರೋಗದ ಸಮಯದಲ್ಲಿ ಅವರು ಆನ್‌ಲೈನ್ ಮೂಲಕ ಪರಸ್ಪರ ಪರಿಚಯವಾಗಿದ್ದಾರೆ ಲಸಿಕೆಗಳು ಇನ್ನೂ ಲಭ್ಯವಿಲ್ಲದ ಸಮಯದಲ್ಲಿ, ಅವರ ಈಗ ಪತಿಯಾಗಿರುವ ವ್ಯಕ್ತಿ ಅವರನ್ನು ನೋಡಲು ಬ್ರೆಜಿಲ್‌ಗೆ ಹಾರಿದಾಗ ಅವರ ಮೊದಲ ಮುಖಾಮುಖಿ ಭೇಟಿ ಆಯ್ತು. ಹೀಗೆ ಭೇಟಿಯಾದ ಕೇವಲ ಐದು ತಿಂಗಳಲ್ಲಿ ಅವರಿಗೆ ಪ್ರೀತಿಯಾಗಿದ್ದು ಮದುವೆಯೂ ಆಗಿದ್ದಾರೆ.

ನಮ್ಮ ಸ್ಟೋರಿ ಹೀಗಿದೆ, ನಾನು ಬ್ರೆಜಿಲ್‌ನವಳು, ಆತ ಭಾರತದವ, ಜೀವನ ನಮ್ಮನ್ನು 2020ರಲ್ಲಿ ಒಟ್ಟಿಗೆ ತಂದಿತು. ಆತ ಕೋವಿಡ್ ಸಮಯದಲ್ಲಿ ಇನ್ನೂ ಲಸಿಕೆಗಳೇ ಪತ್ತೆಯಾಗದ ಸಮಯದಲ್ಲಿ ನನ್ನನ್ನು ನೋಡುವುದಕ್ಕೆ ಬ್ರೆಜಿಲ್‌ಗೆ ಹಾರಿ ಬಂದ.( When you know, you know ಅಂದರೆ ನಿಮಗೆ ತಿಳಿದಿರುವಾಗ, ನಿಮಗೆ ತಿಳಿದಿದೆ ಎಂಬುದು. ಅಂದರೆ ಇದರರ್ಥ, 'ಸಾಮಾನ್ಯವಾಗಿ ಸಂಬಂಧಗಳು ಅಥವಾ ಪ್ರಮುಖ ಜೀವನ ನಿರ್ಧಾರಗಳ ಸಂದರ್ಭದಲ್ಲಿ, ತಾರ್ಕಿಕ ವಿವರಣೆಯನ್ನು ಮೀರಿದ ಒಂದು ಖಚಿತತೆ ಮನಸ್ಸಿನ ಮಾತು.) ಅದರಂತೆ ನಾವು ಪ್ರೀತಿಯಲ್ಲಿ ಬಿದ್ದೆವು. ಹಾಗೆಯೇ ಭೇಟಿಯಾದ ಕೇವಲ 5 ತಿಂಗಳಲ್ಲಿ ಮದುವೆಯನ್ನು ಆದೆವು.

ಕೋವಿಡ್ ಸಮಯದಲ್ಲೇ ನಾವು ಬ್ರೆಜಿಲ್‌ನಲ್ಲಿ ಮದುವೆಯಾದೆವು. ಆತನ ಮನೆಯವರು ನಮ್ಮ ಪ್ರೀತಿಗೆ ಆರಂಭದಿಂದಲೂ ಆಶೀರ್ವಾದ ಮಾಡಿತ್ತು. ಆದರೆ ತುಂಬ ಕಷ್ಟದ ವಿಚಾರ ಎಂದರೆ ನನ್ನ ತಂದೆಯೂ ನನ್ನ ಮದುವೆಗೆ ಆಶೀರ್ವದಿಸುವುದು ಆಗಿತ್ತು. ಕೊನೆಗೂ ಅವರು ಆಶೀರ್ವದಿಸಿದರು. ನನ್ನ ತಾಯಿ ಹಾಗೂ ಸೋದರನೂ ಈ ಮದುವೆಗೆ ಒಪ್ಪಿದರು, ಆಶೀರ್ವದಿಸಿದರು. ನಾವು ಬೇರೆ ಬೇರೆ ಸಂಪ್ರದಾಯದಿಂದ ಬಂದಿದ್ದೇವೆ. ಆದರೆ ನಮ್ಮ ಮೌಲ್ಯ ಒಂದೇ. ನಮ್ಮ ಪ್ರೀತಿ ಹಾಗೂ ಪರಸ್ಪರರ ನಡುವಿನ ಮೆಚ್ಚುಗೆ ದಿನ ಕಳೆದಂತೆ ಮತ್ತಷ್ಟು ಹೆಚ್ಚಾಗುತ್ತಿದೆ. ನಮ್ಮಿಬ್ಬರ ಆತ್ಮವನ್ನು ಜೊತೆಯಾಗಿ ಸೇರಿಸಿದ್ದಕ್ಕೆ ಈ ವಿಶ್ವಕ್ಕೆ ಧನ್ಯವಾದ ಹೇಳುತ್ತೇನೆ ಎಂದು ಬರೆದು ತೈನಾ ಶಾ ಫೋಟೋಗಳನ್ನು ಪೋಸ್ಟ್ ಮಾಡಿದ್ದು ಅದೀಗ ಭಾರಿ ವೈರಲ್ ಆಗಿದೆ. ಇವರ ಲವ್ ಸ್ಟೋರಿ ಕೇಳಿದ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಪೋಸ್ಟ್ ಸ್ವಲ್ಪ ಹೊತ್ತಲೇ ವೈರಲ್ ಆಗಿದ್ದು, ಸಾವಿರಾರು ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಅವರ ಜೀವನಕ್ಕೆ ಶುಭ ಹಾರೈಸಿದ್ದಾರೆ. ಪ್ರೀತಿ ಎಷ್ಟೇ ದೂರದಲ್ಲಿದ್ದರೂ ಪ್ರೀತಿ ಪ್ರೀತಿಯೇ ನಿಮಗಿಬ್ಬರಿಗೂ ಅಭಿನಂದನೆಗಳು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಚಿತ್ರಗಳಲ್ಲಿರುವ ಎಲ್ಲವೂ ಅತ್ಯಂತ ಸುಂದರವಾಗಿವೆ. ಎಂತಹ ಸುಂದರವಾದ ಅನುಗ್ರಹ. ಭಾರತದಿಂದ ನಿಮಗೆ ಆಶೀರ್ವಾದಗಳು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಎಂತಹಾ ಬೆಚ್ಚಗಿನ ಪ್ರೇಮಕಥೆ. ವರ್ಷ ಕಳೆದಂತೆ ಪ್ರೀತಿ ಬೆಳೆಯುತ್ತದೆ ಎಂದು ನಾನು ಭಾವಿಸುತ್ತೇನೆ. ಪ್ರೀತಿ, ನಗು ಮತ್ತು ಉತ್ತಮ ಆರೋಗ್ಯದಿಂದ ತುಂಬಿದ ದೀರ್ಘಾಯುಷ್ಯಕ್ಕಾಗಿ ಹಾರೈಸುತ್ತೇನೆ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ನೀವು ನಿಮ್ಮ ಮದುವೆಯ ದಿನದಂದು ತುಂಬಾ ಸುಂದರವಾಗಿ ಕಾಣುತ್ತಿದ್ದಿರಿ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಸಗುಲ್ಲಾ ಖಾಲಿ ಆಯ್ತು ಎಂದು ಮುರಿದು ಬಿತ್ತು ಮದ್ವೆ: ಮದುವೆ ಮನೆಯಾಯ್ತು ರಣಾಂಗಣ
ಮೋದಿ-ಪುಟಿನ್ ಆರ್ಮರ್ಡ್ ಬದಲು ಸಾಮಾನ್ಯ ಟೊಯೋಟಾ ಫಾರ್ಚೂನ್ ಕಾರಿನಲ್ಲಿ ಪ್ರಯಾಣಿಸಿದ್ದೇಕೆ?