2026-27ರಲ್ಲಿ ಸಕ್ಕರೆ ಆಧಾರಿತ ಎಥೆನಾಲ್‌ ಖರೀದಿಸದಿರಲು ಕೇಂದ್ರ ಸರ್ಕಾರ ನಿರ್ಧಾರ, ಸಕ್ಕರೆ ಅಭಾವದ ಕಾರಣ ಈ ಕ್ರಮ

Gowthami K   | Kannada Prabha
Published : Oct 19, 2026, 09:01 AM IST
Ethanol

ಸಾರಾಂಶ

ಮಳೆ ಅಭಾವ ಹಾಗೂ ಸಕ್ಕರೆ ಕೊರತೆಯ ಆತಂಕದಿಂದಾಗಿ 2026-27ನೇ ಸಾಲಿನಲ್ಲಿ ಸಕ್ಕರೆ ಆಧಾರಿತ ಎಥೆನಾಲ್ ಖರೀದಿಸದಿರಲು ತೈಲ ಕಂಪನಿಗಳು ನಿರ್ಧರಿಸಿವೆ. ಬದಲಾಗಿ ಮೆಕ್ಕೆಜೋಳ, ಅಕ್ಕಿ ಮತ್ತು ಸಿ-ದರ್ಜೆಯ ಕಾಕಂಬಿಯಿಂದ ಉತ್ಪಾದಿಸಿದ ಎಥೆನಾಲ್ ಖರೀದಿಗೆ ಟೆಂಡರ್ ಕರೆಯಲಾಗಿದೆ. ಅಲ್ಲದೆ, ಮೆಕ್ಕೆಜೋಳ ಆಧಾರಿತ ಎಥೆನಾಲ್ ಪ್ರೋತ್ಸಾಹ ಧನವನ್ನು ಕಡಿತಗೊಳಿಸಲಾಗಿದೆ.

ನವದೆಹಲಿ: 2026-27ನೇ ಸಾಲಿನಲ್ಲಿ ಕೇಂದ್ರ ಸರ್ಕಾರ ಅಧೀನದ ತೈಲ ಕಂಪನಿಗಳು ಸಕ್ಕರೆ ಆಧಾರಿತ ಕಚ್ಚಾವಸ್ತುಗಳಿಂದ ತಯಾರಿಸುವ ಎಥೆನಾಲ್‌ ಖರೀದಿಸದಿರಲು ನಿರ್ಧರಿಸಿವೆ. ಮಳೆ ಅಭಾವ ಹಾಗೂ ಮಾರುಕಟ್ಟೆಯಲ್ಲಿ ಸಕ್ಕರೆಯ ಆತಂಕ ಸರಿದೂಗಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ.

ಈ ಸಾಲಿನ ಟೆಂಡರ್‌ನಲ್ಲಿ ಕಬ್ಬಿನ ರಸ, ಸಕ್ಕರೆ ಶಿರಪ್‌ ಮತ್ತು ಕಾಕಂಬಿಯಿಂದ (ಬಿ-ಹೆವಿ ಮೊಲಾಸಿಸ್‌) ತಯಾರಿಸುವ ಎಥೆನಾಲ್‌ ಅನ್ನು ಟೆಂಡರ್‌ನಿಂದ ಹೊರಗಿಡಲು ಸರ್ಕಾರಿ ತೈಲ ಕಂಪನಿಗಳು ತೀರ್ಮಾನಿಸಿವೆ.

ಎಥೆನಾಲ್‌ ಪೂರೈಕೆದಾರ ಬಿಡ್‌ನಲ್ಲಿ ಪಾಲ್ಗೊಳ್ಳಬಹುದು

ತೈಲ ಕಂಪನಿಗಳ ಪರ ಭಾರತ್‌ ಪೆಟ್ರೋಲಿಯಂ ಕಾರ್ಪೋರೇಷನ್‌ (ಬಿಪಿಸಿಎಲ್‌) ಅ.16ರಂದು ಟೆಂಡರ್‌ ಆಹ್ವಾನಿಸಿದ್ದು, ಈ ನವೆಂಬರ್‌ನಿಂದ ಮುಂದಿನ ಅಕ್ಟೋಬರ್‌ ವರೆಗೆ 11 ಶತಕೋಟಿ ಲೀಟರ್‌ ಎಥೆನಾಲ್‌ ಖರೀದಿಗೆ ಉದ್ದೇಶಿಸಿದೆ. ಪೆಟ್ರೋಲ್‌ ಜತೆ ಶೇ.20ರಷ್ಟು ಎಥೆನಾಲ್‌ ಮಿಶ್ರಣ ಮಾಡುವ ಸರ್ಕಾರದ ನಿರ್ಧಾರದ ಭಾಗವಾಗಿ ಈ ಟೆಂಡರ್‌ ಆಹ್ವಾನಿಸಲಾಗಿದೆ. ಮೆಕ್ಕೆಜೋಳ, ಅಕ್ಕಿ, ಎಫ್‌ಸಿಐನಿಂದ ಖರೀದಿಸಿದ ಹೆಚ್ಚುವರಿ ಅಕ್ಕಿ, ಸಿ-ದರ್ಜೆಯ ಕಾಕಂಬಿಯಿಂದ ಉತ್ಪಾದಿಸಿದ ಎಥೆನಾಲ್‌ ಪೂರೈಕೆದಾರರಷ್ಟೇ ಈ ಬಿಡ್‌ನಲ್ಲಿ ಪಾಲ್ಗೊಳ್ಳಬಹುದಾಗಿದೆ.

ಇದೇ ವೇಳೆ ಮೆಕ್ಕೆಜೋಳ ಆಧಾರಿತ ಎಥೆನಾಲ್‌ಗೆ ನೀಡಲಾಗುವ ಪ್ರೋತ್ಸಾಹ ಧನವನ್ನು ಲೀಟರ್‌ಗೆ 71.86 ರು.ನಿಂದ 68.86 ರು.ಗೆ ಇಳಿಸಿದೆ. ಈವರೆಗೆ ಮೆಕ್ಕೆಜೋಳದಿಂದ ಉತ್ಪಾದಿಸುವ ಪ್ರತಿ ಲೀಟರ್‌ ಎಥೆನಾಲ್‌ಗೆ 5.79 ರು. ಪ್ರೋತ್ಸಾಹಧನ ನೀಡಲಾಗುತ್ತಿತ್ತು. ಅದನ್ನೀಗ 2.79 ರು.ಗೆ ಇಳಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸೌರವ್ ದಾಸ್‌, ರಾಂಕಾ ಬಿಡುಗಡೆ ಬಳಿಕ ಸಿಜೆಪಿಯಿಂದ ಹೊಸ ರಣತಂತ್ರ: ಅಭಿಜೀತ್‌ ದೀಪ್ಕೆ
India Latest News Live: 2026-27ರಲ್ಲಿ ಸಕ್ಕರೆ ಆಧಾರಿತ ಎಥೆನಾಲ್‌ ಖರೀದಿಸದಿರಲು ಕೇಂದ್ರ ಸರ್ಕಾರ ನಿರ್ಧಾರ, ಸಕ್ಕರೆ ಅಭಾವದ ಕಾರಣ ಈ ಕ್ರಮ