
ಕೊಚ್ಚಿ(ಸೆ. 05) ಕೇರಳದಲ್ಲಿ ಕೊರೋನಾ ವೈರಸ್ ಮಿತಿ ಮೀರಿ ಕಾಟ ಕೊಡುತ್ತಿರುವಾಗಲೇ ನಿಪ್ಪಾ ಹಾವಳಿಯೂ ಕಾಣಿಸಿಕೊಂಡಿದೆ. ಕೇರಳದ ಕೋಝಿಕ್ಕೋಡ್ ಜಿಲ್ಲೆಯಲ್ಲಿ 2018 ರಲ್ಲಿ ನಿಪ್ಪಾ ವೈರಸ್ ಪ್ರಕರಣ ಕಂಡುಬಂದಿತ್ತು.
ಇದೀಗ ಕೇರಳದ ಕೋಝಿಕ್ಕೋಡ್ ಮತ್ತು ಮಲಪ್ಪುರಂ ಜಿಲ್ಲೆಯಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಇದಕ್ಕೆ ಕಾರಣ 12 ವರ್ಷದ ಬಾಲಕ ನಿಪ್ಪಾ ಸೋಂಕಿನಿಂದ ಮೃತಪಪಟ್ಟಿದ್ದಾನೆ. ಭಾನುವಾರ ಮುಂಜಾನೆ ಬಾಲಕ ಮೃತಪಟ್ಟಿದ್ದು ಕೇಂದ್ರ ಸಹ ತಂಡ ಕಳುಹಿಸಿಕೊಟ್ಟಿದೆ.
ಕೊರೋನಾ ನಡುವೆ ಗಣೇಶ ಹಬ್ಬಕ್ಕೆ ಷರತ್ತು ಬದ್ಧ ಅನುಮತಿ; ಮಾರ್ಗಸೂಚಿ ಇಲ್ಲಿದೆ
ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ತೆಗೆದುಕೊಂಡಿದ್ದು ಬಾಲಕನ ಅತಿ ಹತ್ತಿರದ ಐವರು ಸಂಬಂಧಿಗಳ ಮೇಲೆ ನಿಗಾ ವಹಿಸಲಾಗಿದೆ. ಬಾಲಕನ ಜತೆ ಸಂಪರ್ಕದಲ್ಲಿ ಇದ್ದು ಎಂಬ ಹನ್ನೆರಡು ಜನರನ್ನು ಆಬ್ಸರ್ ವೇಶನ್ ನಲ್ಲಿ ಇಡಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಆರೋಗ್ಯ ಮಂತ್ರಿ ವೀಣಾ ಜಾರ್ಜ್ ಕೇರಳದಿಂದ ಮೂರು ಸ್ಯಾಂಪಲ್ ಗಳನ್ನು ಕಳುಹಿಸಿ ಕೊಡಲಾಗಿತ್ತು. ಅದರಲ್ಲೊಂದು ಪಾಸಿಟಿವ್ ಬಂದಿದೆ ಎಂದಿದ್ದಾರೆ.
ಜನರು ಆತಂಕಕ್ಕೆ ಒಳಗಾಗುವ ಅಗತ್ಯ ಇಲ್ಲ.. ಸರ್ಕಾರ ಎಲ್ಲ ಸುರಕ್ಷತಾ ಕ್ರಮ ತೆಗೆದುಕೊಂಡಿದೆ. ಜ್ವರ ಮತ್ತು ಮಿದುಳಿಗೆ ಸಂಬಂಧಿಸಿದ ತೊಂದರೆ ಯಿಂದ ಬಾಲಕ ನಾಲ್ಕು ದಿನಗಳ ಹಿಂದೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಎಂದು ತಿಳಿಸಿದ್ದಾರೆ. ತಜ್ಞರ ತಂಡ ಮಾಹಿತಿ ಕಲೆಹಾಕಿದ್ದು ವೀಣಾ ಸಹ ಉನ್ನತ ಅಧಿಕಾರಿಗಳ ಸಭೆ ನಡೆಸಿದ್ದಾರೆ. 2018 ರಲ್ಲಿ ನಿಪ್ಪಾ ಕಾಣಿಸಿಕೊಂಡಾಗ ಹದಿನಾರು ಪ್ರಕರಣ ದಾಖಲಾಗಿ ಅದರಲ್ಲಿ ಏಳು ಜನರು ಅಸುನೀಗಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ