ಅಕ್ಷಯ್ ಕುಮಾರ್ ಮೂರ್ಖ, ನನ್ನ ಪಾಲಿಗೆ ಅಕ್ಷಯ್ ಹಾಗೂ ಅಕ್ಬರ್ ಇಬ್ಬರೂ ಈ ದೇಶದವರು!

By Santosh NaikFirst Published Jun 3, 2022, 10:47 AM IST
Highlights

ದೇಶದ ಇತಿಹಾಸದ ಪುಸ್ತಕಗಳಲ್ಲಿ ಹಿಂದೂ ರಾಜರ ಬಗ್ಗೆ ಹೆಚ್ಚಾಗಿ ತಿಳಿಸಿಲ್ಲ ಎಂದು ಬಾಲಿವುಡ್ ನಟ ಅಕ್ಷಯ್ ಕುಮಾರ್ ನೀಡಿರುವ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ಪವನ್ ಖೇರಾ, ಅಕ್ಷಯ್ ಕುಮಾರ್ ಬಹುಶಃ ಅಲ್ಪವೇ ಓದಿದ್ದಾರೆ ಎಂದು ಕಾಣುತ್ತದೆ. ಇಂಥ ಹೇಳಿಕೆಗಳನ್ನು ನೀಡುವ ಮೂಲಕ ಸಾರ್ವಜನಿಕವಾಗಿ ತಮ್ಮನ್ನು ತಾವೇ ಮೂರ್ಖರನ್ನಾಗಿ ಮಾಡಿಕೊಳ್ಳಬಾರದು ಎಂದಿದ್ದಾರೆ.
 

ನವದೆಹಲಿ (ಜೂನ್ 3): ಇತಿಹಾಸದ ಪುಸ್ತಕಗಳಲ್ಲಿ ಹಿಂದೂ ರಾಜರ ಬಗ್ಗೆ ಹೆಚ್ಚಿನ ಮಾಹಿತಿಗಳಿಲ್ಲ ಎಂದು ಅಕ್ಷಯ್ ಕುಮಾರ್ ನೀಡಿದ ಹೇಳಿಕೆಗೆ ಅವರನ್ನು ಮೂರ್ಖ ಎಂದು ಹೇಳಿದ ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ಪವನ್ ಖೇರಾ (Congress national spokesperson Pawan Khera) ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ. ಮೊಘಲ್ ದಾಳಿಕೋರರನ್ನು('Mughal invaders)  ಹೀರೋಗಳು ಎಂದುಕೊಂಡಿರುವ ವ್ಯಕ್ತಿಗಳಿಗೆ ಅಕ್ಷಯ್ ಕುಮಾರ್ (Akshay Kumar) ನೀಡಿರುವ ಹೇಳಿಕೆ ಖಂಡಿತವಾಗಿ ನೋವುಂಟು ಮಾಡುತ್ತದೆ ಎಂದು ಪವನ್ ಖೇರಾ ಮಾತಿಗೆ  ಟೀಕೆ ವ್ಯಕ್ತಪಡಿಸಿದ್ದಾರೆ.

ಅಕ್ಷಯ್ ಕುಮಾರ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದ ಪವನ್ ಖೇರಾ, "ನನಗೆ ಅಕ್ಷಯ್ ಕುಮಾರ್ ಹಾಗೂ ಅಕ್ಬರ್ ಇಬ್ಬರೂ ಈ ದೇಶಕ್ಕೆ ಸೇರಿದವರಾಗಿದ್ದಾರೆ' ಎಂದು ಟ್ವೀಟ್ ಮಾಡಿದ್ದರು. ಸಾಮ್ರಾಟ್ ಪೃಥ್ವಿರಾಜ್ ಚಿತ್ರ ದೇಶಾದ್ಯಂತ ಬಿಡುಗಡೆಯಾಗುವ ಹೊತ್ತಿನಲ್ಲಿ ಸುದ್ದಿಸಂಸ್ಥೆಗಳಿಗೆ ಸಂದರ್ಶನ ನೀಡಿದ್ದ ಅಕ್ಷಯ್ ಕುಮಾರ್, ಮೊಘಲ್ ರಾಜರುಗಳು ಹಾಗೂ ಹಿಂದು ರಾಜರುಗಳ ನಡುವೆ ಇತಿಹಾಸ ಸಮತೋಲನ ಮಾಡುವ ಅಗತ್ಯವಿದೆ. ಈಗಿರುವ ಇತಿಹಾಸದ ಪುಸ್ತಕಗಳು ಹಿಂದೂ ರಾಜರ ಬಗ್ಗೆ ಹೆಚ್ಚಾಗಿ ತಿಳಿಸಿಲ್ಲ ಎಂದು ಹೇಳಿಕೆ ನೀಡಿದ್ದರು.

ನಾನು ಓದಿದ ಇತಿಹಾಸದ ಪುಸ್ತಕಗಳಲ್ಲಿ ಸಾಮ್ರಾಟ್ ಪೃಥ್ವಿರಾಜ್ ಕುರಿತಾಗಿ ಮೂರು-ನಾಲ್ಕು ಸಾಲುಗಳ ವಿವರಗಳು ಮಾತ್ರವೇ ಇದ್ದವು. ಆದರೆ, ಈ ಚಿತ್ರಕ್ಕೆ ನಾವು ಧನ್ಯವಾದ ಹೇಳಬೇಕು. ಪೃಥ್ವಿರಾಜ್ ಕುರಿತಾಗಿ ಸಾಕಷ್ಟು ವಿವರಗಳನ್ನು ನಾನು ಈ ಚಿತ್ರದಿಂದ ತಿಳಿದುಕೊಂಡಿದ್ದೇನೆ. ಬಹುಶಃ ಪೃಥ್ವಿರಾಜ್ ಕುರಿತಾಗಿ ತೀರಾ ಅಲ್ಪ ಜನರಿಗಷ್ಟೇ ಹೆಚ್ಚಿನ ಮಾಹಿತಿ ತಿಳಿದಿದೆ ಎಂದು ಅಕ್ಷಯ್ ಕುಮಾರ್ ಹೇಳಿದ್ದರು.

ನಾನು ನನ್ನ ಪುತ್ರನ ಜೊತೆ ಸಾಮ್ರಾಟ್ ಪೃಥ್ವಿರಾಜ್ ಕುರಿತಾಗಿ ಮಾತನಾಡುತ್ತಿದೆ. ಆದರೆ, ಆತ, ನನಗೆ ಬ್ರಿಟಿಷ್ ಸಾಮ್ರಾಜ್ಯ, ಮೊಘಲ್ ಸಾಮ್ರಾಜ್ಯದ ಬಗ್ಗೆ ಗೊತ್ತಿದೆ. ಆದರೆ, ಈತ ಯಾರು ಎಂದು ಕೇಳಿದ. ನಮ್ಮ ರಾಜರ ಬಗ್ಗೆಯೇ ನಾವು ತಿಳಿದುಕೊಂಡಿಲ್ಲ ಎನ್ನುವುದು ಬೇಸರದ ಸಂಗತಿ. ರಾಣಾ ಪ್ರತಾಪ್ (Rana Pratap), ಜಾನ್ಸಿ ರಾಣಿಯ (jhansi Rani  ) ಬಗ್ಗೆಯೂ ಕೆಲ ಸಾಲುಗಳು ಮಾತ್ರವೇ ಇದೆ. ಆದರೆ, ಮೊಘಲ್ ಸಾಮ್ರಾಜ್ಯದ ಕುರಿತಾಗಿ ಸಾಕಷ್ಟು ವಿವರಗಳು ಲಭ್ಯವಿದೆ ಎಂದು ಹೇಳಿದ್ದರು.

ಅಕ್ಷಯ್ ಕುಮಾರ್ ಜೊತೆ ಸಿನಿಮಾ ವೀಕ್ಷಿಸಿದ ಯೋಗಿ ಆದಿತ್ಯನಾಥ್, ಕಾಲೆಳೆದ ಅಖಿಲೇಶ್!

ಇನ್ನು ಅಕ್ಷಯ್ ಕುಮಾರ್ ಹೇಳಿಕೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪರ ವಿರೋಧದ ಅಭಿಪ್ರಾಯ ವ್ಯಕ್ತವಾಗಿದೆ. ಅಕ್ಷಯ್ ಕುಮಾರ್ ಹಿಂದು ರಾಜರಗಳ ಹೆಸರು ಹೇಳಿದ್ದಾರೆ ಎಂದಾದಲ್ಲಿ ಅವರು ಮೊಘಲ್ ರಾಜರ ಬಗ್ಗೆ ಮಾತ್ರವಲ್ಲ ಹಿಂದೂ ರಾಜರ ಬಗ್ಗೆಯೂ ಅವರು ತಿಳಿದುಕೊಂಡಿದ್ದಾರೆ ಎಂದರ್ಥ ಎಂದಿದ್ದಾರೆ. ಇನ್ನು ಅಕ್ಷಯ್ ಕುಮಾರ್ "ಪೋಷಕರ ಮಾತನ್ನು ಕೇಳಿ ಸ್ವಲ್ಪ ಓದಿದ್ದರೆ ಸಾರ್ವಜನಿಕವಾಗಿ ಈ ರೀತಿ ಮೂರ್ಖರಾಗುತ್ತಿರಲಿಲ್ಲ' ಎಂದು ಪವನ್ ಖೇರಾ ಟ್ವೀಟ್ ಮಾಡಿದ್ದಾರೆ.

ಗ್ಯಾನವಾಪಿ ಮಸೀದಿ ಪ್ರಕರಣ; ನಟ ಅಕ್ಷಯ್ ಕುಮಾರ್ ಹೇಳಿದ್ದೇನು?

ಅಕ್ಷಯ್ ಕುಮಾರ್ ಮುಹಮ್ಮದ್ ಘೋರಿಯನ್ನು ( Muhammad Ghori ) ಹೊಗಳಿದ್ದರೆ, ಪವನ್ ಖೇರಾ ಅವರನ್ನು ವಿದ್ಯಾವಂತ ಎಂದು ಪರಿಗಣಿಸುತ್ತಿದ್ದರು ಆದರೆ ಅಕ್ಷಯ್ ಕುಮಾರ್ ಅವರು ಮೊಘಲ್ ದಾಳಿಕೋರರನ್ನು ವೀರರೆಂದು ಪರಿಗಣಿಸುವವರಿಗೆ ನೋವುಂಟುಮಾಡುವ ಮಾತುಗಳನ್ನು ಆಡಿದ್ದಾರೆ ಎಂದು ಪತ್ರಕರ್ತರೊಬ್ಬರು ಪವನ್  ಖೇರಾ ಅವರನ್ನು ಟೀಕಿಸಿದ್ದಾರೆ. ಇದಕ್ಕೆ ಪಕ್ಷದ ವಕ್ತಾರರು ತಾವು ಅಕ್ಷಯ್ ಕುಮಾರ್ ಮತ್ತು ಅಕ್ಬರ್ ಇಬ್ಬರನ್ನೂ ಭಾರತೀಯರೆಂದು ಪರಿಗಣಿಸುವುದಾಗಿ ಹೇಳಿದ್ದಾರೆ. ಸಾಮ್ರಾಟ್ ಪೃಥ್ವಿರಾಜ್ ಇಂದು ಬಿಡುಗಡೆಯಾಗುತ್ತಿದ್ದು, ಉತ್ತರಾಖಂಡ, ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದಲ್ಲಿ ತೆರಿಗೆ ಮುಕ್ತಗೊಳಿಸಲಾಗಿದೆ.

Latest Videos

click me!