
ನವದೆಹಲಿ: ದೆಹಲಿ ಸ್ಫೋಟದಲ್ಲಿ ಬಂಧಿತ ಅಲ್‌ಫಲಾ ವೈದ್ಯ ಕಾಲೇಜಿನ ವೈದ್ಯ ಡಾ। ಮುಜಮ್ಮಿಲ್ ಶಕೀಲ್ ಹರ್ಯಾಣದ ಫರೀದಾಬಾದ್‌ನ ತನ್ನ ಬಾಡಿಗೆ ಕೋಣೆಯಲ್ಲಿ ಹಿಟ್ಟಿನ ಗಿರಣಿ ಯಂತ್ರ ಬಳಸಿ ಸ್ಫೋಟಕಗಳಿಗೆ ಬೇಕಿರುವ ರಾಸಾಯನಿಕಗಳನ್ನು ಸಿದ್ಧಪಡಿಸುವ ಕೆಲಸ ಮಾಡುತ್ತಿದ್ದ ಆಘಾತಕಾರಿ ವಿಚಾರ ಇದೀಗ ಬೆಳಕಿಗೆ ಬಂದಿದೆ.
ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ನಿವಾಸಿಯಾಗಿರುವ ಮುಜಮ್ಮಿಲ್ ಫರೀದಾಬಾದ್‌ನಲ್ಲಿರುವ ತನ್ನ ಬಾಡಿಗೆ ಮನೆಯಲ್ಲಿ ಹಿಟ್ಟಿನ ಗಿರಣಿ ಯಂತ್ರ ಇಟ್ಟುಕೊಂಡಿದ್ದ. ಮೊದಲು ಈ ಯಂತ್ರವನ್ನು ಪರಿಚಿತ ಟ್ಯಾಕ್ಸಿ ಚಾಲಕನ ಮನೆಗೆ ಸಾಗಿಸಿದ್ದ ಈತ ಸಹೋದರಿಗೆ ಮದುವೆ ಗಿಫ್ಟ್ ಆಗಿ ನೀಡಲು ಉದ್ದೇಶಿಸಿದ್ದಾಗಿ ತಿಳಿಸಿದ್ದ. ಬಳಿಕ ಅದನ್ನು ತನ್ನ ಬಾಡಿಗೆ ಮನೆಗೆ ಸ್ಥಳಾಂತರಿಸಿದ್ದ. ಇದೇ ಕೋಣೆಯಿಂದ ಪೊಲೀಸರು ಸುಮಾರು 360 ಕೆ.ಜಿ. ಅಮೋನಿಯಂ ನೈಟ್ರೇಟ್ ಮತ್ತು ಇತರೆ ಸ್ಫೋಟಕ ವಸ್ತುಗಳನ್ನು ನ.9ರಂದು ವಶಕ್ಕೆ ಪಡೆದಿದ್ದರು.
ಯೂರಿಯಾದಿಂದ ಅಮೋನಿಯಂ ನೈಟ್ರೇಟ್ ಅನ್ನು ಪ್ರತ್ಯೇಕಗೊಳಿಸಲು ಹಿಟ್ಟಿನ ಗಿರಣಿ ಯಂತ್ರ ಬಳಸುತ್ತಿರುವುದಾಗಿ ವಿಚಾರಣೆ ವೇಳೆ ತಿಳಿಸಿದ್ದಾನೆ. ನಂತರ ಅದನ್ನು ಬಳಸಿಕೊಂಡು ಸ್ಫೋಟಕ ಸಿದ್ಧಪಡಿಸುತ್ತಿದ್ದ ಎಂದು ಹೇಳಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ