ತೇಜಸ್ ಪತನ, ಕೊನೇ ಕ್ಷಣದವರೆಗೆ ನಿಯಂತ್ರಣಕ್ಕೆ ಪ್ರಯತ್ನಿಸಿದ ವಿಂಗ್ ಕಮಾಂಡರ್ ನಮಾಂಶ್ ಮೃತ

Published : Nov 21, 2025, 10:31 PM IST
IAF Wing Commander Namansh Syal

ಸಾರಾಂಶ

ತೇಜಸ್ ಪತನ, ಕೊನೇ ಕ್ಷಣದವರೆಗೆ ನಿಯಂತ್ರಣಕ್ಕೆ ಪ್ರಯತ್ನಿಸಿದ ವಿಂಗ್ ಕಮಾಂಡರ್ ನಮಾಂಶ್ ಮೃತ, ವೃತ್ತಿಪರತೆ, ತಾಳ್ಮೆಗೆ ಹೆಸರುವಾಸಿಯಾಗಿರುವ ಯುವ ಪೈಲೆಟ್ ದುರಂತದಲ್ಲಿ ಅಂತ್ಯಕಂಡಿದ್ದಾರೆ.

ದುಬೈ (ನ.21) ದುಬೈ ಏರ್ ಶೋನಲ್ಲಿ ಸ್ವಚ್ಚಂದವಾಗಿ ಹಾರಾಟ ನಡೆಸಿ ಪ್ರದರ್ಶನ ನೀಡಿದ್ದ ಭಾರತೀಯ ವಾಯುಸೇನೆಗೆ ಆಘಾತ ಎದುರಾಗಿದೆ. ಏರ್ ಶೋನಲ್ಲಿ ಪ್ರದರ್ಶನ ನೀಡುತ್ತಿದ್ದ ವೇಳೆ ತೇಜಸ್ ಯುದ್ಧ ವಿಮಾನ ಪತನಗೊಂಡ ದುರ್ಘಟನೆ ನಡೆದಿದೆ. ಪ್ರದರ್ಶನದ ವೇಳೆ ನಿಯಂತ್ರಣ ತಪ್ಪಿದ ತೇಜಸ್ ನೇರವಾಗಿ ಪತನಗೊಂಡಿದೆ. ಕಣಾರ್ಧದಲ್ಲಿ ಬೆಂಕಿ ಜ್ವಾಲೆ ಹರಡಿ ಸುಟ್ಟು ಭಸ್ಮವಾಗಿದೆ. ಈ ದುರಂತದಲ್ಲಿ ಭಾರತೀಯ ವಾಯುಸೇನೆಯ ವಿಂಗ್ ಕಮಾಂಡರ್ ನಿಮಾಂಶ್ ಸ್ಯಾಲ್ ಮೃತಪಟ್ಟಿದ್ದಾರೆ. ಯುವ ಪೈಲೆಟ್ ವಾಯುಸೇನೆಯ ತೇಜಸ್ ವಿಮಾನದಲ್ಲಿ ಅತೀ ಹೆಚ್ಚು ಪಳಗಿದವರಾಗಿದ್ದಾರೆ. ಇಷ್ಟೇ ಅಲ್ಲ ತಮ್ಮ ವೃತ್ತಿಪರತೆ ಹಾಗೂ ಯಾವುದೇ ಸವಾಲನ್ನು ತಾಳ್ಮೆಯಿಂದ ಎದುರಿಸುವ ನಿಮಾಂಶ್ ಸ್ಯಾಲ್ ದುರಂತ ಅಂತ್ಯ ಭಾರತೀಯರಿಗೆ ತೀವ್ರ ನೋವುಂಟು ಮಾಡಿದೆ.

ಕೊನೆಯವರೆಗೂ ಹೋರಾಡಿದ ಪೈಲೆಟ್ ನಿಮಾಂಶ್ ಸ್ಯಾಲ್

ವಿಂಗ್ ಕಮಾಂಡರ್ ನಿಮಾಂಶ್ ಸ್ಯಾಲ್ ತೇಜಸ್ ಸೇರಿದಂತೆ ಯುದ್ದ ವಿಮಾನಗಳ ಹಾರಾಟದಲ್ಲಿ ಎಲ್ಲಾಾ ಸಂದರ್ಭಗಳನ್ನು, ಸವಾಲುಗಳನ್ನು ತಾಳ್ಮೆಯಿಂದ ಯಶಸ್ವಿಯಾಗಿ ಎದುರಿಸಿದ್ದಾರೆ. ಹೀಗಾಗಿ ದುಬೈ ಏರ್ ಶೋನಲ್ಲಿ ತೇಜಸ್ ಯುದ್ಧ ವಿಮಾನ ನಿಯಂತ್ರಣ ತಪ್ಪಿದಾಗ ಸ್ವಯಂ ರಕ್ಷಣೆ ಸಮಯ ಅತ್ಯಂತ ಕಡಿಮೆ ಇದ್ದರೂ ಪ್ರಯತ್ನ ಮಾಡಬಹುದಿತ್ತು. ಪ್ಯಾರಾಚ್ಯೂಟ್ ಬಳಿ ಇಜೆಕ್ಟ್ ಸಾಧ್ಯಗಳು ತೀರಾ ಕ್ಷೀಣವಾಗಿದ್ದರೂ ಪ್ರಯತ್ನ ಮಾಡಬಹುದಿತ್ತು ಅನ್ನೋ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ. ಆದರೆ ಪೈಲೆಟ್ ನಿಮಾಂಶ್ ಕೊನೆಯ ಕ್ಷಣದವರೆಗೆ ತೇಜಸ್ ಯುದ್ದ ವಿಮಾನ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸಿದ್ದಾರೆ. ಆದರೆ ಸಾಧ್ಯವಾಗಿಲ್ಲ. ಪರಿಣಾಮ ದುರಂತ ಅಂತ್ಯಕಂಡಿದ್ದಾರೆ.

ಯಾರು ಈ ನಿಮಾಂಶ್ ಸ್ಯಾಲ್

ಹಿಮಾಚಲ ಪ್ರದೇಶದ ಕಂಗ್ರಾ ಜಿಲ್ಲೆಯ ನಿಮಾಂಶ್ ಸ್ಯಾಲ್ ಭಾರತೀಯ ವಾಯುಸೇನೆ ಭರವಸೆಯ ಪೈಲೆಟ್ ಆಗಿ ಗಮನಸೆಳೆದಿದ್ದರು. ನಿಮಾಂಶ್ ನಿಧನ ಸುದ್ದಿ ತಿಳಿದ ಬೆನ್ನಲ್ಲೇ ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಹು ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ನಿಮಾಂಶ್ ಸ್ಯಾಲ್ ನಿಧನ ಆಗಾತ ಹಾಗೂ ತೀವ್ರ ನೋವುಂಟು ಮಾಡಿದೆ. ಈ ಸಂದರ್ಭದಲ್ಲಿ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಭಗಂವತ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.

ಏರ್ ಶೋ ಕಾರ್ಯಕ್ರಮಗಳಲ್ಲಿ ಯುದ್ಧ ವಿಮಾನ ಸಾಮಾನ್ಯವಾಗಿ ಹಾರಾಡುವ ಎತ್ತರದಲ್ಲಿ ಇರುವುದಿಲ್ಲ. ಏರ್ ಶೋ ನೋಡಲು ಸಾವಿರಾರು ಮಂದಿ ಆಗಮಿಸಿರುತ್ತಾರೆ. ಇದೇ ವೇಳೆ ಸಾಹಸಗಳ ಪ್ರದರ್ಶನ ಸಾಮಾನ್ಯವಾಗಿ ಯುದ್ಧ ವಿಮಾನ ಹಾರಾಡು ಎತ್ತರದಲ್ಲಿ ಮಾಡಿದರೆ ಗೋಚರವಾಗುವುದಿಲ್ಲ. ಹೀಗಾಗಿ ತೀರಾ ಕಳೆ ಹಂತದಲ್ಲಿ ಈ ಪ್ರದರ್ಶನಗಳು ನಡೆಯುತ್ತದೆ. ಹೀಗಾಗಿ ಸಣ್ಣ ದುರಂತ ಸಂಭವಿಸಿದರೂ ಪೈಲೆಟ್ ಪ್ರಾಣ ಉಳಿಸಿಕೊಳ್ಳುವ ಸಮಯ ಸೆಕೆಂಡ್‌ಗಳ ಅಂತರದಲ್ಲಿ ಇರಲಿದೆ.

ಘಟನೆ ಕುರಿತು ವಾಯುಸೇನೆ ಪ್ರತಿಕ್ರಿಯೆ

ದುಬೈ ಏರ್ ಶೋನದಲ್ಲಿ ಭಾರತೀಯ ವಾಯುಸೇನೆಯ ತೇಜಸ್ ಯುದ್ದ ವಿಮಾನ ಪತನಗೊಂಡಿದೆ. ಈ ದುರಂದಲ್ಲಿ ಪೈಲೆಟ್ ತೀವ್ರ ಗಾಯಗಳಿಂದ ಮೃತಪಟ್ಟಿದ್ದಾರೆ. ಭಾರತೀಯ ವಾಯುಸೇನೆಗೆ ಈ ಸಾವು ನೋವುಂಟು ಮಾಡಿದೆ. ಈ ಸಂದರ್ಭದಲ್ಲಿ ವಿಂಗ್ ಕಮಾಂಡರ್ ಕುಟುಂಬದ ಜೊತೆ ಭಾರತೀಯ ವಾಯುಸೇನೆ ನಿಲ್ಲಲಿದೆ. ಘಟನೆ ಕುರಿತು ಕೋರ್ಟ್ ತನಿಖೆಗೆ ಆದೇಶ ನೀಡಲಾಗಿದೆ ಎಂದು ಭಾರತೀಯ ವಾಯುಸೇನೆ ಹೇಳಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕೆಲಸ ಇಲ್ಲದ ಗಂಡನಿಗೆ ಪತ್ನಿ ಶೀಲದ ಮೇಲೆ ಶಂಕೆ: ನಿದ್ರೆಯಲ್ಲಿದ್ದ ಮಗಳ ಕತ್ತು ಸೀಳಿದ ಪತಿ
ಪುಟಿನ್‌ಗೆ ರಷ್ಯನ್ ಭಾಷೆ ಭಗವದ್ಗೀತೆ ಉಡುಗೊರೆ ನೀಡಿದ ಪ್ರಧಾನಿ ಮೋದಿ, ಭಾರಿ ಮೆಚ್ಚುಗೆ