14 ವರ್ಷ ಬಳಿಕ ತೀರ್ಪು, 8 ಲಕ್ಷ ರೂ ಪರಿಹಾರ ನೀಡುವಂತೆ ಭಾರತೀಯ ರೈಲ್ವೆಗೆ ಆದೇಶಿಸಿದ ಕೋರ್ಟ್

Published : Jan 12, 2025, 03:29 PM IST
14 ವರ್ಷ ಬಳಿಕ ತೀರ್ಪು, 8 ಲಕ್ಷ ರೂ ಪರಿಹಾರ ನೀಡುವಂತೆ ಭಾರತೀಯ ರೈಲ್ವೆಗೆ ಆದೇಶಿಸಿದ ಕೋರ್ಟ್

ಸಾರಾಂಶ

ಬರೋಬ್ಬರಿ 14 ವರ್ಷದ ಬಳಿಕ ಮಗನ ಕಳೆದುಕೊಂಡ ಪೋಷಕರಿಗೆ ನ್ಯಾಯ ಸಿಕ್ಕಿದೆ. ಪೋಷಕರಿಗೆ 8 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಬಾಂಬೆ ಹೈಕೋರ್ಟ್ ಆದೇಶಿಸಿದೆ. ಅಷ್ಟಕ್ಕು ಏನಿದು ಪ್ರಕರಣ?

ಮುಂಬೈ(ಜ.12) ಮುಂಬೈನ ಲೋಕಲ್ ರೈಲು ಸಂಚಾರ ಅನುಭವ ಹಲವರಿಗೆ ಇಲ್ಲದಿದ್ದರೂ ನೋಡಿ, ಕೇಳಿ ತಿಳಿದಿರುವ ಸಾಧ್ಯತೆ ಹೆಚ್ಚು. ಕಿಕ್ಕಿರಿದು ತುಂಬಿದ ರೈಲು ಹತ್ತುವುದು, ಇಳಿಯುವುದು ದೊಡ್ಡ ಸಾಹಸ. ಇನ್ನು ಪ್ರಯಾಣ ಮತ್ತೊಂದು ರೀತಿಯ ಸವಾಲು. ಹೀಗೆ ತುಂಬಿ ತುಳುಕುತ್ತಿದ್ದ ರೈಲು ಹತ್ತಿದ ಯುವಕ ಕೆಲ ಹೊತ್ತಲ್ಲೇ ರೈಲಿನಿಂದ ಕೆಳಕ್ಕೆ ಬಿದ್ದು ಮೃತಪಟ್ಟಿದ್ದ. ಈ ಪ್ರಕರಣದ ಸುದೀರ್ಘ ವಿಚಾರಣೆ ಬಳಿಕ ಅಂದರೆ ಬರೋಬ್ಬರಿ 14 ವರ್ಷಗಳ ಬಳಿಕ ಬಾಂಬೇ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಮಗನ ಕಳೆದುಕೊಂಡ ಪೋಷಕರಿಗೆ 8 ಲಕ್ಷ ರೂಪಾಯಿ ಪರಿಹಾರ ಕೊಡುವಂತೆ ಭಾರತೀಯ ರೈಲ್ವೇಗೆ ಹೈಕೋರ್ಟ್ ಆದೇಶಿಸಿದೆ.

ಮತಪಟ್ಟ ಯುವಕ ರೈಲಿನಿಂದ ಬಿದ್ದಿರುವುದಕ್ಕೆ ದಾಖಲೆಗಳಿವೆ. ಆಗಿರುವ ಗಾಯ, ಬಿದ್ದ ಸ್ಥಳದ ಬಗ್ಗೆ ವೈದ್ಯರು ಹಾಗೂ ಪೊಲೀಸರ ದಾಖಲೆಗಳಿವೆ. ಹೀಗಾಗಿ ಇದು ರೈಲಿನಿಂದ ಬಿದ್ದ ಮೃತಪಟ್ಟ ಘಟನೆ.ಆಕಸ್ಮಿಕವಾಗಿ ಘಟನೆ ನಡೆದಿದೆ. ರೈಲ್ವೇ ಕಾಯ್ದೆಯಡಿ ಯುವಕ ಪರಿಹಾರಕ್ಕೆ ಅರ್ಹನಾಗಿದ್ದಾನೆ. ಯುವಕನ ಪೋಷಕರು ಈ ಪ್ರಕರಣದ ದಾಖಲಿಸಿ ಹೋರಾಟ ಮಾಡಿದ್ದಾರೆ. ಇದೀಗ ಪೋಷಕರಿಗೆ ಪರಿಹಾರ ಮೊತ್ತವಾಗಿ 8 ಲಕ್ಷ ರೂಪಾಯಿ ತಕ್ಷಣವೇ ನೀಡಬೇಕು ಎಂದು ಬಾಂಬೇ ಹೈಕೋರ್ಟ್ ಆದೇಶ ನೀಡಿದೆ.

ಹುಬ್ಬಳ್ಳಿ ವಂದೇ ಭಾರತ್ ರೈಲು ವೇಳಾಪಟ್ಟಿಯಲ್ಲಿ ಮಹತ್ತರ ಬದಲಾವಣೆ,ಪ್ರಯಾಣಿಕರೆ ಗಮನಿಸಿ!

ಏನಿದು ಘಟನೆ?
ಮೇ 8, 2020ರಲ್ಲಿ ಈ ಘಟನೆ ನಡೆದಿತ್ತು. ನಾಸಿರ್ ಖಾನ್ ಅನ್ನೋ ಯುವಕ ಮುಂಬೈನ ವಡಾಲದಿಂದ ಚಿಂಚಿಪೊಕ್ಲಿಗೆ ತೆರಳಲು ಮುಂಬೈ ಸ್ಥಳೀಯ ರೈಲು ಹತ್ತಿದ್ದ. ತುಂಬಿ ತುಳುಕುತ್ತಿದ್ದ ರೈಲಿನಲ್ಲಿ ನುಗ್ಗಿ ಹತ್ತುವ ಪ್ರಯತ್ನ ಮಾಡಿದ್ದ. ಸಂಧರುಸ್ಟ್ ರಸ್ತೆ ರೈಲು ನಿಲ್ದಾಣದ ಬಳಿ ಅವಘಡ ನಡೆದಿತ್ತು.  ಕಿಕ್ಕಿರಿದು ತುಂಬಿದ ಜನರ ನಡುವೆ ಸರಿಯಾಗಿ ಹಿಡಿಯಲು ಸಾಧ್ಯವಾಗದ ನಾಸಿರ್ ಖಾನ್ ರೈಲಿನಿಂದ ಬಿದ್ದು ತೀವ್ರವಾಗಿ ಗಾಯಗೊಂಡಿದ್ದ. 

ತಕ್ಷಣವೇ ಇತರ ಪ್ರಯಾಣಿಕರು ನಾಸಿರ್ ಖಾನ್‌ನ್ನು ಆಸ್ಪತ್ರೆ ದಾಖಲಿಸಿದ್ದರು.ಆದರೆ ತಲೆಗೆ ಗಾಯವಾಗಿದ್ದ ಕಾರಣ ನಾಸಿನ್ ಖಾನ್ ಮೃತಪಟ್ಟಿದ್ದ. ರೈಲ್ವೇ ಟ್ರಿಬ್ಯೂನಲ್‌ನಲ್ಲಿ ಪ್ರಕರಣ ದಾಖಲಾಗಿತ್ತು. ಇತ್ತ ನಾಸಿಕ್ ಖಾನ್ ಪೋಷಕರು ನ್ಯಾಯಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಇತ್ತ ರೈಲ್ವೇ ಇಲಾಖೆ ತನಿಖೆ ನಡೆಸಿತ್ತು. ಎಲ್ಲಾ ದಾಖಲೆ ಕಲೆಹಾಕಿತ್ತು. ಈ ವೇಳೆ ನಾಸಿರ್ ಖಾನ್ ಬಲಿ ರೈಲು ಟಿಕೆಟ್ ಪತ್ತೆಯಾಗಿರಲಿಲ್ಲ. ಇಷ್ಟೇ ಅಲ್ಲ ನಾಸಿಕ್ ಖಾನ್ ರೈಲು ಟಿಕೆಟ್ ಖರೀದಿಸಿದ ಕುರಿತು ಯಾವುದೇ ದಾಖಲೆ ಇರಲಿಲ್ಲ. ಇತ್ತ ರೈಲಿನಿಂದ ನಾಸಿರ್ ಖಾನ್ ಬಿದ್ದಿದ್ದಾನೆ ಅನ್ನೋದಕ್ಕೂ ಯಾವುದೇ ದಾಖಲೆ ಇರಲಿಲ್ಲ. ಹೀಗಾಗಿ 2014ರಲ್ಲಿ ರೈಲ್ವೇ ಟ್ರಿಬ್ಯೂನಲ್ ಪರಿಹಾರ ನೀಡಲು ನಿರಾಕರಿಸಿತ್ತು. ನಾಸಿರ್ ಕಾನ್ ರೈಲು ಪ್ರಯಾಣಿಕ ಆಗಿರಲಿಲ್ಲ ಎಂದು ರೈಲ್ವೇ ಟ್ರಿಬ್ಯೂನ್ ಸ್ಪಷ್ಟವಾಗಿ ಹೇಳಿತ್ತು. 

ಆದರೆ ಟ್ರಿಬ್ಯೂನಲ್ ಆದೇಶವನ್ನು ನಾಸಿರ್ ಖಾನ್ ಪೋಷಕರು ಬಾಂಬೇ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಬಾಂಬೇ ಹೈಕೋರ್ಟ್ ಈ ಕುರತಿ ಸುದೀರ್ಘ ವಿಚಾರಣೆ ನಡೆಸಿದೆ. ಕಳೆದ 10 ವರ್ಷಗಳಿಂದ ರೈಲ್ವೇ ಅಧಿಕಾರಿಗಳು, ತನಿಖಾ ತಂಡ ವನ್ನು ವಿಚಾರಣೆ ನಡೆಸಿದೆ.ಟ್ರಿಬ್ಯೂನಲ್ ವರದಿಯ ಉಲ್ಲೇಖಿಸಿರುವ ವಿಚಾರ ಹಾಗೂ ದಾಖಲೆಗಳ ಪರಿಶೀಲನೆ ನಡೆಸಿ ತೀರ್ಪು ನೀಡಿದೆ.

ಯುವಕನನಲ್ಲಿ ಟಿಕೆಟ್ ಇಲ್ಲ ಅನ್ನೋ ಕಾರಣಕ್ಕೆ ಪರಿಹಾರಕ್ಕೆ ಅರ್ಹನಲ್ಲ ಅನ್ನೋದು ಸಮಂಜವಲ್ಲ. ಘಟನೆ ನಡೆದಿರುವುದು ರೈಲಿನಿಂದ ಬಿದ್ದ ಅನ್ನೋದಕ್ಕೆ ದಾಖಲೆ ಇವೆ. ಪೊಲೀಸ್ ದಾಖಲೆ ಮರಣೋತ್ತರ ಪರೀಕ್ಷಾ ವರದಿ ಇದನ್ನು ದೃಢಪಡಿಸುತ್ತಿದೆ. ಟಿಕೆಟ್ ಇಲ್ಲದ ಕಾರಣಕ್ಕೆ ರೈಲಿನ ಪ್ರಯಾಣಿಕನಲ್ಲ ಅನ್ನೋ ವಾದ ಇಲ್ಲಿ ಒಪ್ಪಲು ಸಾಧ್ಯವಿಲ್ಲ. ಹೀಗಾಗಿ 8 ಲಕ್ಷ ರೂಪಾಯಿ ಪರಿಹಾರ ಕೊಡುವಂತೆ ಭಾರತೀಯ ರೈಲ್ವೇಗೆ ಬಾಂಬೇ ಹೈಕೋರ್ಟ್ ಆದೇಶಿಸಿದೆ. 

ಭಾರತೀಯ ರೈಲ್ವೇಯಿಂದ ಹೊಸ 50 ಅಮೃತ ಭಾರತ್ ರೈಲು, ಯಾವ ಮಾರ್ಗದಲ್ಲಿ ಸೇವೆ?
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕಾರ್‌ನಲ್ಲಿ ಜೋಡಿ 'ಸರಸ' ಸೆರೆಹಿಡಿದ ಟೋಲ್‌ ಮ್ಯಾನೇಜರ್‌, ಸಿಸಿಟಿವಿ ವಿಡಿಯೋ ತೋರಿಸಿ ಬ್ಲ್ಯಾಕ್‌ಮೇಲ್‌!
ವಿಶ್ವದ ಟಾಪ್ 10 ಬೊಟಾನಿಕಲ್ ಗಾರ್ಡನ್ ಲಿಸ್ಟ್‌ನಲ್ಲಿ ನಂ.1 ನಮ್ಮ ಲಾಲ್‌ಬಾಗ್