
ನವದೆಹಲಿ(ಜೂ.12): ದೇಶದಲ್ಲಿ ಕೊರೋನಾ 2ನೇ ಅಲೆ ತಗ್ಗುತ್ತಿರುವಾಗ ಮತ್ತೊಂದೆಡೆ ಸೋಂಕಿತರನ್ನು ಬಹುವಾಗಿ ಕಾಡುತ್ತಿರುವ ಬ್ಲ್ಯಾಕ್ ಫಂಗಸ್ ಪ್ರಕರಣಗಳಲ್ಲಿ ಭಾರೀ ಏರಿಕೆ ಕಂಡುಬರುತ್ತಿದ್ದು, ಆತಂಕಕ್ಕೆ ಕಾರಣವಾಗಿದೆ. ಕಪ್ಪು ಶಿಲೀಂಧ್ರ ಎಂದು ಕರೆಯಲ್ಪಡುವ ಮ್ಯೂಕೋರ್ಮೈಕೋಸಿಸ್ನಿಂದಾಗಿ ಕಳೆದ 3 ವಾರಗಳಲ್ಲಿ ದೇಶದೆಲ್ಲೆಡೆ 2,100ಕ್ಕೂ ಹೆಚ್ಚು ಮಂದಿ ಬಲಿ ಆಗಿದ್ದಾರೆ ಎಂಬ ಆಘಾತಕಾರಿ ಸಂಗತಿ ಹೊರಬಿದ್ದಿದೆ.
ಕಳೆದ 3 ವಾರದಲ್ಲಿ ದೇಶಾದ್ಯಂತ ವಿವಿಧ ರಾಜ್ಯಗಳಲ್ಲಿ 31,216 ಬ್ಲ್ಯಾಕ್ ಫಂಗಸ್ ಪ್ರಕರಣಗಳು ಪತ್ತೆ ಆಗಿವೆ. ಸೋಂಕಿತರ ಪೈಕಿ 2,109 ಮಂದಿ ಮೃತಪಟ್ಟಿದ್ದಾರೆ. ಈ ರೋಗದ ಚಿಕಿತ್ಸೆಗೆ ಪ್ರಮುಖವಾಗಿ ಬಳಕೆ ಆಗುತ್ತಿರುವ ಆಂಪೊಟೆರಿಸಿನ್-ಬಿ ಔಷಧದ ಕೊರತೆಯೇ ಸಾವಿನ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗುತ್ತಿದೆ ಎಂದ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ. 3 ವಾರಗಳ ಹಿಂದಿನ ಸಮಯಕ್ಕೂ ಕಳೆದ 3 ವಾರಕ್ಕೂ ಹೋಲಿಸಿ ನೋಡಿದರೆ ಸೋಂಕಿನ ಪ್ರಮಾಣದಲ್ಲಿ ಶೇ.150ರಷ್ಟುಮತ್ತು ಸಾವಿನ ಪ್ರಮಾಣದಲ್ಲಿ ಶೇ.50ರಷ್ಟುಹೆಚ್ಚಳವಾಗಿದೆ.
"
ದೇಶದಲ್ಲೇ ಅತಿ ಹೆಚ್ಚು ಕೊರೋನಾ ಪ್ರಕರಣಗಳು ಪತ್ತೆ ಆದ ಮಹಾರಾಷ್ಟ್ರದಲ್ಲಿ ಇದುವರೆಗೆ 7,057 ಬ್ಲ್ಯಾಕ್ ಫಂಗಸ್ ಪ್ರಕರಣಗಳು ದಾಖಲಾಗಿದ್ದು, 609 ಮಂದಿ ಮೃತಪಟ್ಟಿದ್ದಾರೆ. ಉಳಿದಂತೆ ಗುಜರಾತ್‌ನಲ್ಲಿ 5418 ಕೇಸ್, 323 ಸಾವು, ರಾಜಸ್ಥಾನದಲ್ಲಿ 2976 ಕೇಸು, 128 ಸಾವು, ಕರ್ನಾಟಕದಲ್ಲಿ 2282 ಕೇಸು, 157 ಸಾವು, ಉತ್ತರ ಪ್ರದೇಶದಲ್ಲಿ 1744 ಕೇಸ್, 142 ಸಾವು, ದೆಹಲಿಯಲ್ಲಿ 1200 ಕೇಸ್, 125 ಸಾವು ದಾಖಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ