ಆ್ಯಪ್‌ನಲ್ಲಿ ನೋಂದಣಿ ಇಲ್ಲದೆಯೂ ಕೊರೋನಾ ಲಸಿಕೆ!

Published : Feb 26, 2021, 12:42 PM IST
ಆ್ಯಪ್‌ನಲ್ಲಿ ನೋಂದಣಿ ಇಲ್ಲದೆಯೂ ಕೊರೋನಾ ಲಸಿಕೆ!

ಸಾರಾಂಶ

ಆ್ಯಪ್‌ನಲ್ಲಿ ನೋಂದಣಿ ಇಲ್ಲದೆಯೂ ಲಸಿಕೆ| ಮಾ.1ರಿಂದ 2ನೇ ಹಂತದ ಲಸಿಕೆ ಅಭಿಯಾನ ಆರಂಭ

ನವ​ದೆ​ಹ​ಲಿ(ಫೆ.26): ಮಾ.1ರಿಂದ ದೇಶಾದ್ಯಂ ಆರಂಭವಾಗುವ 2ನೇ ಹಂತದ ಕೊರೋನಾ ಲಸಿಕೆ ಅಭಿಯಾನದಡಿ ಲಸಿಕೆ ಪಡೆಯುವವರು ಮಾ.1ರಿಂದಲೇ ಕೋ-ವಿನ್‌ ಆ್ಯಪ್‌ನಲ್ಲಿ ತಮ್ಮ ಹೆಸರು ನೊಂದಾಯಿಸಿಕೊಳ್ಳಬಹುದಾಗಿದೆ.

ಸರ್ಕಾರ ಈ ಆ್ಯಪ್‌ ಇನ್ನು ಆ್ಯಪ್‌ ಸ್ಟೋರ್‌ಗಳಲ್ಲಿ ಬಿಡುಗಡೆ ಮಾಡಿಲ್ಲ. ಅದು ಶೀಘ್ರದಲ್ಲೇ ಲಭ್ಯವಾಗಲಿದ್ದು, 60 ವರ್ಷ ಮೇಲ್ಪಟ್ಟಹಿರಿಯ ನಾಗ​ರಿ​ಕರು ಮತ್ತು ಒಂದ​ಕ್ಕಿಂತ ಹೆಚ್ಚು ಕಾಯಿ​ಲೆ​ಗ​ಳಿಗೆ ತುತ್ತಾದ 45 ವರ್ಷ ಮೇಲ್ಪಟ್ಟವರು ಮಾ.1ರಿಂದ ಅಥವಾ ಮಾ.2ರಿಂದ ಹೆಸರು ನೋಂದಣಿ ಮಾಡಿಕೊಳ್ಳಬಹುದು ಎಂದು ಲಸಿಕೆ ನಿರ್ವಹಣೆ ಕುರಿತ ಉನ್ನತಾಧಿಕಾರವುಳ್ಳ ತಂಡದ ಮುಖ್ಯಸ್ಥ ಆರ್‌.ಎಸ್‌. ಶರ್ಮಾ ತಿಳಿಸಿದ್ದಾರೆ.

ಇದೇ ವೇಳೆ ನೋಂದಣಿ ಪ್ರಕ್ರಿಯೆ ಚುರುಕುಗೊಳ್ಳುವವರೆಗೆ, ಆ್ಯಪ್‌ನಲ್ಲಿ ಹೆಸರು ದಾಖಲ ಮಾಡದೆಯೂ ಕೆಲ ದಾಖಲೆಗಳೊಂದಿಗೆ ನೇರವಾಗಿ ಆಗಮಿಸಿ ಲಸಿಕೆ ಪಡೆಯುವ ವ್ಯವಸ್ಥೆಯನ್ನೂ ಮಾಡಲಾಗಿದೆ ಎಂದು ಶರ್ಮಾ ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಇಂಡಿಗೋದ ಭಾರೀ ಕುಸಿತ: ಒಂದೇ ವಿಮಾನಯಾನ ಸಂಸ್ಥೆಯ ಏಕಸ್ವಾಮ್ಯವಾದಾಗ
ರಿಪೇರಿಗೆ 5 ಗಂಟೆ ಬೇಕೆಂದ ರೈಲ್ವೆ ಅಧಿಕಾರಿಗಳು; ಸುತ್ತಿಗೆಯಿಂದ 10 ನಿಮಿಷದಲ್ಲಿ ಸರಿ ಮಾಡಿದ ಅಂಕಲ್