ಕೆನಡಾದಲ್ಲಿ ಖಲಿಸ್ತಾನಿ ಉಗ್ರ ನಿಜ್ಜರ್ ಹತ್ಯೆ ಹಿಂದೆ ಭಾರತದ ಏಜೆಂಟರು ಇದ್ದಾರೆ ಎಂಬ ಕೆನಡಾ ಆರೋಪದ ಬೆನ್ನಲೇ, ಕಳೆದ ವರ್ಷ ಪಾಕಿಸ್ತಾನದಲ್ಲಿ ಅನಾಮಿಕ ವ್ಯಕ್ತಿಗಳಿಂದ ಹತರಾದ ಉಗ್ರರ ಸಾವಿಗೆ ಭಾರತೀಯ ಏಜೆಂಟರು ಕಾರಣ ಎಂದು ಪಾಕಿಸ್ತಾನ ಆರೋಪಿಸಿದೆ. ಇದಕ್ಕೆ ಪುರಾವೆ ಇದೆ ಎಂದು ಸಹ ಹೇಳಿಕೊಂಡಿದೆ.
ಇಸ್ಲಾಮಾಬಾದ್: ಕೆನಡಾದಲ್ಲಿ ಖಲಿಸ್ತಾನಿ ಉಗ್ರ ನಿಜ್ಜರ್ ಹತ್ಯೆ ಹಿಂದೆ ಭಾರತದ ಏಜೆಂಟರು ಇದ್ದಾರೆ ಎಂಬ ಕೆನಡಾ ಆರೋಪದ ಬೆನ್ನಲೇ, ಕಳೆದ ವರ್ಷ ಪಾಕಿಸ್ತಾನದಲ್ಲಿ ಅನಾಮಿಕ ವ್ಯಕ್ತಿಗಳಿಂದ ಹತರಾದ ಉಗ್ರರ ಸಾವಿಗೆ ಭಾರತೀಯ ಏಜೆಂಟರು ಕಾರಣ ಎಂದು ಪಾಕಿಸ್ತಾನ ಆರೋಪಿಸಿದೆ. ಇದಕ್ಕೆ ಪುರಾವೆ ಇದೆ ಎಂದು ಸಹ ಹೇಳಿಕೊಂಡಿದೆ.
ಈ ಬಗ್ಗೆ ಮಾತನಾಡಿದ ಪಾಕಿಸ್ತಾನ ವಿದೇಶಾಂಗ ಕಾರ್ಯದರ್ಶಿ, 'ಕಳೆದ ವರ್ಷ ಸೆಪ್ಟೆಂಬರ್ ಹಾಗೂ ಅಕ್ಟೋಬರ್ ನಲ್ಲಿ ಅನಾಮಿಕ ವ್ಯಕ್ತಿಗಳಿಂದ ಹತರಾದ ಇಬ್ಬರು ಉಗ್ರರ ಸಾವಿಗೆ ಭಾರತದ ಏಜೆಂಟ್‌ಗಳಾದ ಯೋಗೇಶ್, ಅಶೋಕ್ ಕುಮಾರ್ ಕಾರಣ ಎಂದಿದ್ದಾರೆ. ಈ ಸಂಬಂಧ ಬಿಡುಗಡೆ ಮಾಡಲಾದ ಆಧಾರ್ ದಾಖಲೆಗಳಲ್ಲಿ ಅಶೋಕ್ ಕುಮಾರ್ ಆನಂದ್ ಅವರ ವಿಳಾಸ ಮಂಗಳೂರಿನದ್ದಾಗಿದೆ. ಯೋಗೇಶ್ ವಿಳಾಸ ರಾಜಸ್ಥಾನದ್ದಾಗಿದೆ. ಇವರಿಬ್ಬರೂ ಸೆಪ್ಟೆಂಬರ್‌ನಲ್ಲಿ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಲಷ್ಕರ್ ಉಗ್ರ ರಿಯಾಜ್ ಅಹ್ಮದ್ ಹಾಗೂ ಅಕ್ಟೋಬರ್‌ನಲ್ಲಿ ಸಿಯಾಲ್ ಕೋಟ್‌ನಲ್ಲಿ ಜೈಷ್ ಉಗ್ರ ಶಾಹಿದ್ ಲತೀಫ್ ರನ್ನು ಮೊಹಮ್ಮದ್ ಉಮ್ಮೇರ್ ಎಂಬುವರಿಂದ ಹತ್ಯೆ ಮಾಡಿಸಿದ್ದರು ಎಂದು ಪಾಕಿಸ್ತಾನ ಆರೋಪಿಸಿದೆ.
ಮುಂದುವರಿದ ಭಾರತ ವಿರೋಧಿಗಳ ಸಂಹಾರ: ಮತ್ತೊಬ್ಬ ಪಾಕಿಸ್ತಾನಿ ಉಗ್ರನ ನಿಗೂಢ ಹತ್ಯೆ
ಆರೋಪದ ಬಗ್ಗೆ ಪ್ರತಿಕ್ರಿಯಿಸಿರುವ ಭಾರತ ಸರ್ಕಾರ, 'ಪಾಕಿಸ್ತಾನಕ್ಕೆ ಈಗಾಗಲೇ ಭಾರತ ಸರ್ಕಾರ, ಪಾಕಿಸ್ತಾನಕ್ಕೆ ಈಗಾಗಲೇ ಭಾರತ ಸೇರಿದಂತೆ ಹಲವು ದೇಶಗಳು ಬಹಿರಂಗವಾಗಿ ಎಚ್ಚರಿಕೆ ನೀಡಿವೆ. ಪಾಕಿಸ್ತಾನ ತಾನು ಮಾಡಿದ ತಪ್ಪನ್ನು ಮುಚ್ಚಿಡಲು ಬೇರೆಯವರನ್ನು ದೂಷಿಸುತ್ತಿದೆ ಎಂದು ಕಿಡಿಕಾರಿದ್ದಾರೆ.
ಪಾಕ್‌ನಲ್ಲಿ ಲಷ್ಕರ್ ಉಗ್ರ ನೇಮಕಗಾರನ ನಿಗೂಢ ಹತ್ಯೆ: 1.5 ವರ್ಷದಲ್ಲಿ 19ನೇ ಉಗ್ರಗಾಮಿ ಸಾವು
ಕೆನಡಾ ಚುನಾವಣೆಯಲ್ಲಿ ಮಧ್ಯ ಪ್ರವೇಶದ ಆರೋಪ
ಕೆನಡಾ: 2019 ಮತ್ತು 2021ರಲ್ಲಿ ಕೆನಡಾದಲ್ಲಿ ನಡೆದ ಚುನಾವಣೆಯಲ್ಲಿ ಅಕ್ರಮವಾಗಿ ಮಧ್ಯಪ್ರವೇಶ ಮಾಡಿದ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತವೂ ಇದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಭಾರತದ ಮೇಲೆ ಉಗ್ರ ನಿಜ್ಜರ್ ಹತ್ಯೆಯ ಆರೋಪ ಮಾಡಿದ್ದ ಕೆನಡಾ ಇದೀಗ ಮತ್ತೊಂದು ಆರೋಪ ಮಾಡಿದೆ. ಕೆನಡಾ ಚುನಾವಣೆಯಲ್ಲಿ ಚೀನಾ ಮತ್ತು ರಷ್ಯಾ ದೇಶಗಳು ಮೂಗು ತೂರಿಸಿವೆ ಎಂದು ಈ ಹಿಂದೆ ಆರೋಪ ಮಾಡಲಾಗಿತ್ತು. ಇದೀಗ ಈ ಪಟ್ಟಿಗೆ ಭಾರತ ಮತ್ತು ಇರಾನ್ ದೇಶಗಳನ್ನು ಸಹ ಸೇರ್ಪಡೆ ಮಾಡಲಾಗಿದೆ ಎಂದು ವರದಿ ತಿಳಿಸಿದೆ.