ಬ್ರಹ್ಮಪುತ್ರ ನದಿಗೆ ವಿಶ್ವದ ಅತಿ ದೊಡ್ಡ ಜಲವಿದ್ಯುತ್ ಅಣೆಕಟ್ಟು: ಭಾರೀ ಆತಂಕ

By Kannadaprabha News  |  First Published Dec 27, 2024, 5:17 AM IST

ಹಿಮಾಲಯದ ತಪ್ಪಲಿನಲ್ಲಿ ಉಗಮವಾಗಿ ಟಿಬೆಟ್‌, ಭಾರತ, ಬಾಂಗ್ಲಾದೇಶದಲ್ಲಿ ಹರಿದು ಬಂಗಾಳಕೊಲ್ಲಿ ಸೇರುವ ಬ್ರಹ್ಮಪುತ್ರ ನದಿಗೆ ವಿಶ್ವದಲ್ಲೇ ಅತಿದೊಡ್ಡ ಜಲವಿದ್ಯುತ್‌ ಉದ್ದೇಶದ ಅಣೆಕಟ್ಟು ನಿರ್ಮಾಣಕ್ಕೆ ಚೀನಾ ನಿರ್ಧರಿಸಿದೆ. 


ಬೀಜಿಂಗ್‌ (ಡಿ.27): ಹಿಮಾಲಯದ ತಪ್ಪಲಿನಲ್ಲಿ ಉಗಮವಾಗಿ ಟಿಬೆಟ್‌, ಭಾರತ, ಬಾಂಗ್ಲಾದೇಶದಲ್ಲಿ ಹರಿದು ಬಂಗಾಳಕೊಲ್ಲಿ ಸೇರುವ ಬ್ರಹ್ಮಪುತ್ರ ನದಿಗೆ ವಿಶ್ವದಲ್ಲೇ ಅತಿದೊಡ್ಡ ಜಲವಿದ್ಯುತ್‌ ಉದ್ದೇಶದ ಅಣೆಕಟ್ಟು ನಿರ್ಮಾಣಕ್ಕೆ ಚೀನಾ ನಿರ್ಧರಿಸಿದೆ. ಇದು ಸಹಜವಾಗಿಯೇ ನದಿಪಾತ್ರದ ದೇಶಗಳಾದ ಭಾರತ ಮತ್ತು ಬಾಂಗ್ಲಾದೇಶಗಳಲ್ಲಿ ಭಾರೀ ಆತಂಕಕ್ಕೆ ಕಾರಣವಾಗಿದೆ. ಭಾರತದ ಗಡಿಗೆ ಸಮೀಪವಿರುವ ಟಿಬೆಟ್‌ನ ಯರ್ಲುಂಗ್‌ ಜಂಗ್ಬೋ (ಭಾರತದ ಬ್ರಹ್ಮಪುತ್ರಾ) ನದಿಯ ಮೇಲೆ 11.5 ಲಕ್ಷ ಕೋಟಿ ರು. ವೆಚ್ಚದಲ್ಲಿ ನಿರ್ಮಾಣ ಮಾಡಲು ಚೀನಾ ತಯಾರಿ ನಡೆಸಿದೆ ಎಂದು ಚೀನಾದ ಮಾರ್ನಿಂಗ್‌ ಪೋಸ್ಟ್‌ ವರದಿ ಮಾಡಿದೆ. 

ಈ ಅಣೆಕಟ್ಟನ್ನು, ಬ್ರಹ್ಮಪುತ್ರ ನದಿಯು ಅರುಣಾಚಲ ಪ್ರದೇಶದ ಮೂಲಕ ಭಾರತವನ್ನು ಪ್ರವೇಶಿಸುವ ಮುನ್ನಾ ಬರುವ ಹಿಮಾಲಯದ ಕಣಿವೆಯಲ್ಲಿರುವ ತಿರುವಿನಲ್ಲಿ ನಿರ್ಮಿಸಲಾಗುತ್ತಿದೆ. ಇಲ್ಲಿ ವಾರ್ಷಿಕವಾಗಿ 300 ಶತಕೋಟಿ ಕಿ.ವ್ಯಾ. ವಿದ್ಯುತ್‌ ಉತ್ಪಾದಿಸುವ ಗುರಿಯನ್ನು ಚೀನಾ ಹಾಕಿಕೊಂಡಿದೆ. ಇದು ತ್ರಿಗೋರ್ಜಸ್‌ ಡ್ಯಾಂನಿಂದ ಹಾಲಿ ಉತ್ಪಾದಿಸುತ್ತಿರುವ 88.2 ಶತಕೋಟಿ ಕಿಲೋವ್ಯಾಟ್‌ಗಿಂತ 3 ಪಟ್ಟು ಹೆಚ್ಚು ಎಂಬುದು ವಿಶೇಷ.

Tap to resize

Latest Videos

undefined

ಕೇವಲ ಕಾಂಗ್ರೆಸ್‌ ಅಲ್ಲ, ಎಲ್ಲರ ಕಾರ್ಯಕ್ರಮ: ಡಿಸಿಎಂ ಡಿ.ಕೆ.ಶಿವಕುಮಾರ್

ಭಾರತಕ್ಕೆ ಕಳವಳ: ಭಾರತ ಹಾಗೂ ಬಾಂಗ್ಲಾ ಪಾಲಿಗೆ ಈ ಅಣೆಕಟ್ಟು ನಿರ್ಮಾಣ ಕಳವಳಕಾರಿ ಬೆಳವಣಿಗೆ ಎಂದು ವಿಶ್ಲೇಷಿಸಲಾಗುತ್ತಿದೆ. ಕಾರಣ, ಈ ಯೋಜನೆಯಿಂದಾಗಿ ಬ್ರಹ್ಮಪುತ್ರ ನದಿಯ ಬಹುಪಾಲು ಪ್ರದೇಶದ ಮೇಲೆ ಚೀನಾ ನಿಯಂತ್ರಣ ಸಾಧಿಸಲಿದ್ದು, ಉಭಯ ದೇಶಗಳ ನಡುವೆ ವಿಷಮ ಪರಿಸ್ಥಿತಿ ನಿರ್ಮಾಣವಾದಾಗ ದ್ವೇಷ ಸಾಧಿಸಲು ಭಾರತದಲ್ಲಿ ಪ್ರವಾಹ ಸೃಷ್ಟಿಸುವ ಆತಂಕವಿದೆ.

10 ಲಕ್ಷ ಶಾಶ್ವತ ಸರ್ಕಾರಿ ಉದ್ಯೋಗ: ಕಳೆದ 1.5 ವರ್ಷದಲ್ಲಿ ತಮ್ಮ ಸರ್ಕಾರ 10 ಲಕ್ಷಕ್ಕೂ ಅಧಿಕ ಜನರಿಗೆ ಶಾಶ್ವತ ಸರ್ಕಾರಿ ಉದ್ಯೋಗ ಒದಗಿಸಿ ದಾಖಲೆ ನಿರ್ಮಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಉದ್ಯೋಗ ಮೇಳದ ಅಡಿಯಲ್ಲಿ ವಿಡಿಯೋ ಕಾನ್ಫರೆನ್ಸ್‌ ಮೂಲಕ ವಿವಿಧ ಕೇಂದ್ರ ಸರ್ಕಾರದ ಇಲಾಖೆಗಳಿಗೆ ಸುಮಾರು 71,000 ಜನರಿಗೆ ನೇಮಕಾತಿ ಪತ್ರ ಹಂಚಿಕೆ ಮಾಡಿ ಮಾತನಾಡಿದ ಮೋದಿ, ‘ದೇಶದ ಯುವಕರೇ ನಮ್ಮ ಸರ್ಕಾರದ ನೀತಿಗಳು ಹಾಗೂ ಯೋಜನೆಗಳ ಕೇಂದ್ರವಾಗಿದ್ದಾರೆ. ಪ್ರಾಮಾಣಿಕತೆ ಹಾಗೂ ಪಾರದರ್ಶಕತೆಯಿಂದ ನೇಮಕಾತಿ ಪ್ರಕ್ರಿಯೆ ನಡೆಸಿದ್ದೇವೆ.

ಕಾಂಗ್ರೆಸ್‌ ಗಾಂಧಿಗಿರಿಗೆ 100: ಇಂದು ಬೆಳಗಾವಿಯಲ್ಲಿ ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ

1.5 ವರ್ಷದಲ್ಲಿ 10 ಲಕ್ಷ ಯುವಕರನ್ನು ನೇಮಿಸಿಕೊಂಡಿದ್ದೇವೆ. ಹಿಂದಿನ ಯಾವ ಸರ್ಕಾರಗಳೂ ಈ ಮಟ್ಟದಲ್ಲಿ ಉದ್ಯೋಗ ಒದಗಿಸಿರಲಿಲ್ಲ. 13 ಭಾಷೆಗಳಲ್ಲಿ ನೇಮಕಾತಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸುವ ಮೂಲಕ ಭಾಷೆಯೇ ತೊಡಕಾಗದಂತೆ ನೋಡಿಕೊಳ್ಳಲಾಯಿತು’ ಎಂದರು. ‘ಇಂದಿನ ಯುವಕರಲ್ಲಿ ಆತ್ಮವಿಶ್ವಾಸ ಭರಪೂರಾಗಿದ್ದು, ಎಲ್ಲಾ ಕ್ಷೇತ್ರಗಳಲ್ಲೂ ಪ್ರಗತಿ ಸಾಧಿಸುತ್ತಿದ್ದಾರೆ. ಉದ್ಯೋಗ ಮೇಳದಿಂದ ಯುವಕರ ಸಾಮರ್ಥ್ಯವನ್ನು ಅನಾವರಣಗೊಳುತ್ತದೆ. ಈ ಬಾರಿ ಮಹಿಳೆಯರನ್ನು ಅಧಿಕ ಸಂಖ್ಯೆಯಲ್ಲಿ ನೇಮಿಸಿಕೊಳ್ಳಲಾಗಿದ್ದು, ಅವರನ್ನು ಎಲ್ಲಾ ಕ್ಷೇತ್ರಗಳಲ್ಲಿ ಸ್ವಾವಲಂಬಿಯನ್ನಾಗಿಸುವುದೇ ನಮ್ಮ ಸರ್ಕಾರದ ಗುರಿ’ ಎಂದು ಮೋದಿ ಹೇಳಿದರು.

click me!