ಬಿಜೆಪಿಗರ ಸಾವಿಗೆ ಕಾರಣರಾದ ರೈತರು ದೋಷಿಗಳಲ್ಲ: ಟಿಕಾ​ಯ​ತ್‌

By Kannadaprabha News  |  First Published Oct 10, 2021, 9:14 AM IST

* ಬಿಜೆಪಿ ಕಾರ‍್ಯಕರ್ತರ ಸಾವು ಹಿಂಸಾಚಾರಕ್ಕೆ ಪ್ರತಿಕ್ರಿಯೆಯಷ್ಟೇ

* ಹಿಂಸಾಚಾರಕ್ಕಿಳಿದ ರೈತರ ಸಮರ್ಥಿಸಿಕೊಂಡ ಟಿಕಾಯತ್‌

* ಬಿಜೆಪಿಗರ ಸಾವಿಗೆ ಕಾರಣರಾದ ರೈತರು ದೋಷಿಗಳಲ್ಲ: ಟಿಕಾ​ಯ​ತ್‌


ನವದೆಹಲಿ(ಅ.10): ಲಖೀಂಪುರ ಹಿಂಸಾಚಾರದ(Lakhimpur Violence) ವೇಳೆ ನಾಲ್ವರು ಬಿಜೆಪಿ(BJP) ಕಾರ್ಯಕರ್ತರ ಸಾವಿಗೆ ಕಾರಣರಾಗಿದ್ದಾರೆ ಎನ್ನಲಾದ ರೈತರನ್ನು ತಪ್ಪಿತಸ್ಥರು ಎಂಬುದಾಗಿ ಪರಿಗಣಿಸಲಾಗದು ಎಂದು ಭಾರತೀಯ ಕಿಸಾನ್‌ ಒಕ್ಕೂಟದ(Bharak Kisan Union) ನಾಯಕ ರಾಕೇಶ್‌ ಟಿಕಾಯತ್‌(Rakesh Tikait) ಹೇಳಿದ್ದಾರೆ.

ಈ ಬಗ್ಗೆ ಶನಿವಾರ ಪತ್ರಕರ್ತರು ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಟಿಕಾಯತ್‌ ಅವರು, ‘ಲಖೀಂಪುರದಲ್ಲಿ(Lakhimpur) ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಸಚಿವರ ಬೆಂಗಾವಲು ಕಾರುಗಳು ಹಾದು ಹೋಗಿವೆ. ಇದರಿಂದ ರೊಚ್ಚಿಗೆದ್ದ ರೈತರು ಇಬ್ಬರು ಬಿಜೆಪಿ ಕಾರ್ಯಕರ್ತರನ್ನು ಹತ್ಯೆ ಮಾಡಿದ್ದಾರೆ. ಈ ಕೃತ್ಯದಲ್ಲಿ ಭಾಗಿಯಾದವರನ್ನು ದೋಷಿಗಳೆಂದು ಪರಿಗಣಿಸಲಾಗದು. ಇಲ್ಲಿ ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ನಡೆದಿದೆಯಷ್ಟೇ’ ಎಂದು ಹೇಳಿದರು. ತನ್ಮೂಲಕ ಬಿಜೆಪಿ ಕಾರ್ಯಕರ್ತರ ಹತ್ಯೆಯನ್ನು ಟಿಕಾಯತ್‌ ಅವರು ಸಮರ್ಥಿಸಿಕೊಂಡಿದ್ದಾರೆ.

Latest Videos

undefined

ಅಲ್ಲದೆ ರೈತರು ಸೇರಿದಂತೆ 8 ಮಂದಿ ಸಾವಿಗೆ ಕಾರಣವಾಗಿರುವ ಲಖೀಂಪುರ ಹಿಂಸಾಚಾರವು ಪೂರ್ವ ಯೋಜಿತ ಪಿತೂರಿಯಾಗಿದ್ದು, ಈ ಕೃತ್ಯಕ್ಕೆ ಕಾರಣವಾದ ಕೇಂದ್ರ ಸಚಿವ ಅಜಯ್‌ ಮಿಶ್ರಾ ಮತ್ತು ಅವರ ಪುತ್ರ ಆಶಿಷ್‌ ಮಿಶ್ರಾರನ್ನು(Ashish Mishra) ಬಂಧಿಸಬೇಕು. ಜತೆಗೆ ಅಜಯ್‌ ಮಿಶ್ರಾ ಅವರನ್ನು ಸಂಪುಟದಿಂದ ಕೈಬಿಡಬೇಕು ಎಂದು ರೈತ ಮುಖಂಡರು ಒತ್ತಾಯಿಸಿದರು. ಈ ಘಟನೆ ಖಂಡಿಸಿ ದಸರಾ ಹಬ್ಬವಾದ ಅ.15ರಂದು ಪ್ರಧಾನಿ ನರೇಂದ್ರ ಮೋದಿ(narendra Modi) ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಪ್ರತಿಕೃತಿಗಳನ್ನು ದಹಿಸಲಾಗುತ್ತದೆ ಎಂದು ರೈತ ನಾಯಕರು ಹೇಳಿದ್ದಾರೆ.

ಕೇಂದ್ರ ಸಚಿವರ ಪುತ್ರ ಅರೆಸ್ಟ್‌!

ನಾಲ್ವರು ರೈತರು ಸೇರಿ 8 ಮಂದಿ ಸಾವಿಗೆ ಕಾರಣವಾಗಿರುವ ಲಖೀಂಪುರ ಹಿಂಸಾಚಾರಕ್ಕೆ ಸಂಬಂಧಿಸಿ ಉತ್ತರ ಪ್ರದೇಶ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಚಾಟಿ ಬೀಸಿದ ಬೆನ್ನಲ್ಲೇ, ಈ ಪ್ರಕರಣದ ಪ್ರಮುಖ ಆರೋಪಿಯಾದ ಕೇಂದ್ರ ಸಚಿವ ಅಜಯ್‌ ಕುಮಾರ್‌ ಮಿಶ್ರಾ ಅವರ ಪುತ್ರ ಆಶಿಷ್‌ ಮಿಶ್ರಾನನ್ನು ಶನಿ​ವಾರ ತಡ​ರಾತ್ರಿ ಬಂಧಿ​ಸ​ಲಾ​ಗಿ​ದೆ.

‘ಘಟ​ನೆ​ಯಲ್ಲಿ ತಮ್ಮ ಪಾತ್ರ​ವಿಲ್ಲ ಎಂದು ಕೆಲ​ವು ದಾಖ​ಲೆ​ಗ​ಳೊಂದಿಗೆ ಅವರು 12 ತಾಸಿನ ವಿಚಾ​ರಣೆ ವೇಳೆ ಸ್ಪಷ್ಟನೆ ನೀಡಲು ಯತ್ನಿ​ಸಿ​ದ​ರು. ಆದರೆ ಪೊಲೀ​ಸರ ಕೆಲ ಪ್ರಶ್ನೆ​ಗ​ಳಿ​ಗೆ ಉತ್ತರ ನೀಡಲು ವಿಫ​ಲರಾಗಿ ಅಸ​ಹ​ಕಾರ ತೋರಿದ​ರು. ಹೀಗಾಗಿ ಅವ​ರನ್ನು ಬಂಧಿ​ಸ​ಲಾ​ಯಿತು. ಅವ​ರನ್ನು ಕೋರ್ಟ್‌ಗೆ ಹಾಜ​ರು​ಪ​ಡಿ​ಸಿ ಮತ್ತೆ ವಶಕ್ಕೆ ಪಡೆದು ಹೆಚ್ಚಿನ ವಿಚಾ​ರಣೆ ನಡೆ​ಸು​ತ್ತೇ​ವೆ’ ಎಂದು ಸಹಾ​ರ​ನ್‌​ಪುರ ಡಿಐಜಿ ಉಪೇಂದ್ರ ಅಗ​ರ್‌​ವಾಲ್‌ ತಿಳಿ​ಸಿ​ದ್ದಾ​ರೆ. ಮೂಲ​ಗಳ ಪ್ರಕಾರ, ಘಟನೆ ನಡೆದ ಅ.3ರ ಮಧ್ಯಾಹ್ನ 2.30ರಿಂದ 3.30ರ ನಡುವೆ ತಾನು ಎಲ್ಲಿ ಇದ್ದೆ ಎಂಬು​ದನ್ನು ಹೇಳಲು ಆಶಿಷ್‌ ವಿಫ​ಲ​ರಾ​ದರು. ಇದೇ ಅವರ ಬಂಧ​ನಕ್ಕೆ ಕಾರ​ಣ​ವಾ​ಯಿತು.

ಇದ​ರೊಂದಿಗೆ ಆಶಿಷ್‌ ಬಂಧ​ನ ಆಗ​ಲೇ​ಬೇಕು ಎಂದು ಪಟ್ಟು ಹಿಡಿ​ದಿದ್ದ ರೈತ ಸಂಘ​ಟ​ನೆ​ಗಳು ಹಾಗೂ ವಿಪ​ಕ್ಷ​ಗಳ ಪ್ರಮುಖ ಬೇಡಿಕೆ ಈಡೇ​ರಿ​ದಂತಾ​ಗಿದೆ. ಜತೆಗೆ, ಪ್ರಕ​ರ​ಣ​ದಲ್ಲಿ ಬಂಧಿ​ತರ ಸಂಖ್ಯೆ 3ಕ್ಕೇರಿ​ದೆ. ಈ ಮುನ್ನ ಇಬ್ಬರು ಆಶಿಷ್‌ ಆಪ್ತ​ರನ್ನು ಬಂಧಿ​ಸ​ಲಾ​ಗಿ​ತ್ತು.

ಶುಕ್ರ​ವಾರ ವಿಚಾ​ರ​ಣೆಗೆ ಆಶಿ​ಷ್‌​ರನ್ನು ಕರೆ​ದಿ​ತ್ತಾ​ದ​ರೂ ಅವರು ಬಂದಿ​ರ​ಲಿಲ್ಲ. ಆದರೆ, ಘಟನೆ ನಡೆದು ಸುಮಾರು 1 ವಾರದ ಬಳಿಕ ಶನಿ​ವಾರ ಬೆಳಗ್ಗೆ 10.30ಕ್ಕೆ ಲಖೀಂಪುರ ಕ್ರೈಮ್‌ ಬ್ರಾಂಚ್‌ ಪೊಲೀಸರೆದುರು ಆಶಿಷ್‌ ಹಾಜ​ರಾ​ದ​ರು. ಡಿಐಜಿ ಅಗರ್‌ವಾಲ್‌ ನೇತೃತ್ವದ 11 ಜನರ ಎಸ್‌ಐಟಿ ತಂಡ ತಡ​ರಾತ್ರಿ 11ರವ​ರೆಗೆ ವಿಚಾ​ರಣೆ ನಡೆ​ಸಿ​ತು.

 

click me!