ಎಸೆಂಬ್ಲಿ ಎಲೆಕ್ಷನ್: ದೀದಿ ಸಾಮ್ರಾಜ್ಯದಲ್ಲಿ ದಾದಾ ಹವಾ..!

By Suvarna NewsFirst Published Mar 8, 2021, 10:18 PM IST
Highlights

ದೀದಿ ಸಾಮ್ರಾಜ್ಯದಲ್ಲಿ ದಾದಾ ಹವಾ..! ಚುನಾವಣೆ ದಿನ ಸಮೀಪಿಸುತ್ತಿದ್ದಂತೆ ಪ್ರಚಾರ ಸರ್ಕಸ್ ಜೋರು..!

ಕೊಲ್ಕತ್ತಾ(ಮಾ.08): ವಿಧಾನಸಭಾ ಚುನಾವಣೆ ಎದುರಿಸಲಿರುವ ದೀದಿ ಸಮ್ರಾಜ್ಯದಲ್ಲಿ ದಾದಾ ಹವಾ ಹೆಚ್ಚಾಗಿದೆ. ಇದ್ಯಾರು ದಾದಾ ಅಂತೀರಾ..?

ಪಶ್ಚಿವ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರನ್ನು ದೀದಿ ಎಂದೇ ಕರೆಯುತ್ತಾರೆ. ಆದರೆ ಈಗ ದೀದಿಗೆ ಸೆಡ್ಡು ಹೊಡೆಯಲು ದಾದಾ ಸಿದ್ಧರಾಗಿದ್ದಾರೆ.

ಮಹಿಳಾ ದಿನ ಪ್ರಯುಕ್ತ ಮಹಿಳಾ ಉದ್ಯಮಿಗಳಿಂದ ಉತ್ಪನ್ನ ಖರೀದಿಸಿದ ಪ್ರಧಾನಿ ಮೋದಿ!

ಬಿಜೆಪಿ ಚುನಾವಣಾ ಅಭಿಯಾನದ ಭಾಗವಾಗಿ ಆನ್ಲೈನ್ ಪೋಸ್ಟರ್ ಒಂದು ವೈರಲ್ ಆಗುತ್ತಿದೆ. ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ದಾದಾ ಎಂದು ಕರೆಯಲಾಗುತ್ತಿದೆ.

ಇದು ಆಡಳಿತ ಪಕ್ಷ ಟಿಎಂಸಿಯ ದೀದಿಗೆ ಸೆಡ್ಡು ಹೊಡೆಯುವ ಬಿಜೆಪಿ ತಂತ್ರ ಎನ್ನಲಾಗುತ್ತಿದೆ. ದೀದಿಗೆ ವಿರುದ್ಧವಾಗಿ ದಾದಾ ವೈರಲ್ ಮಾಡಲಾಗುತ್ತಿದೆ.

ತಮಿಳುನಾಡಲ್ಲಿ 60 ಸೀಟು ಕೇಳಿದ್ದ ಬಿಜೆಪಿಗೆ 20 ಸೀಟು!

ಪ್ರಧಾನಿ ಮೋದಿ ಕೇಸರಿ ಶಾಲ್ ಧರಿಸಿ, ಕೇಸರಿ ಬ್ಯಾಕ್ಗ್ರೌಂಡ್ನಲ್ಲಿ ನಿಂತಿರುವ ಫೋಟೋ ವೈರಲ್ ಆಗಿದೆ. ಇದರಲ್ಲಿ ವೋಟ್ ಮೋದಿ ದಾದಾ ಎಂದು ಬರೆಯಲಾಗಿದೆ.

ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಅಸ್ಸಾಂ, ಪುದುಚೇರಿಯಲ್ಲಿ ಮಾರ್ಚ್ 27ರಿಂದ ವಿಧಾನಸಭಾ ಚುನಾವಣೆ ನಡೆಯಲಿದೆ. ಪಶ್ಚಿಮ ಬಂಗಾಳದಲ್ಲಿ 8 ಹಂತದಲ್ಲಿ ಚುನಾವಣೆ ನಡೆಯಲಿದ್ದು, ಮಾರ್ಚ್ 27, ಏ.01, ಏ.06, ಏ.10, ಏ.17, ಏ.22, ಏ.26, ಏ.19ರಂದು ನಡೆಯಲಿದೆ. ತಮಿಳುನಾಡು ಮತ್ತು ಕೇರಳದಲ್ಲಿ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದ್ದು ಏ.06ರಂದು ಮತದಾನ ನಡೆಯಲಿದೆ. ಪುದುಚೇರಿಯಲ್ಲಿಯೂ ಅದೇ ದಿನ ಮತದಾನ ನಡೆಯಲಿದೆ. ಅಸ್ಸಾಂನಲ್ಲಿ ಮಾರ್ಚ್ 27, ಏ.01, ಏ.06ರಂದು ಚುನಾವಣೆ ನಡೆಯಲಿದೆ.

pic.twitter.com/7iiMtaPASA

— Tajinder Pal Singh Bagga (@TajinderBagga)
click me!