25 ದಿನ ರಥ ಯಾತ್ರೆಗೆ ದೀದಿ ಬಳಿ ಅನುಮತಿ ಕೇಳಿದ ಬಿಜೆಪಿ!

Published : Feb 02, 2021, 09:36 AM IST
25 ದಿನ ರಥ ಯಾತ್ರೆಗೆ ದೀದಿ ಬಳಿ ಅನುಮತಿ ಕೇಳಿದ ಬಿಜೆಪಿ!

ಸಾರಾಂಶ

ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಸುದೀರ್ಘ ಒಂದು ತಿಂಗಳಕಾಲ ‘ರಥಯಾತ್ರೆ’ ನಡೆಸಲು ಸಜ್ಜು|  ‘ರಥಯಾತ್ರೆ’ ನಡೆಸಲು ಪಶ್ಚಿಮ ಬಂಗಾಳ ಸರ್ಕಾರದ ಬಳಿ ಬಿಜೆಪಿ ಅನುಮತಿ 

ಕೋಲ್ಕತ್ತ(ಫೆ.02): ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಸುದೀರ್ಘ ಒಂದು ತಿಂಗಳಕಾಲ ‘ರಥಯಾತ್ರೆ’ ನಡೆಸಲು ಪಶ್ಚಿಮ ಬಂಗಾಳ ಸರ್ಕಾರದ ಬಳಿ ಬಿಜೆಪಿ ಅನುಮತಿ ಕೇಳಿದೆ.

ಈ ಸಂಬಂಧ ರಾಜ್ಯ ಮುಖ್ಯಕಾರ‍್ಯದರ್ಶಿ ಅಲಾಪನ್‌ ಬಂಡೋಪಾಧ್ಯಾಯ ಅವರಿಗೆ ಪತ್ರ ಬರೆದಿರುವ ಬಿಜೆಪಿ ರಾಜ್ಯ ಉಪಾಧ್ಯಕ್ಷ ಪ್ರತಾಪ್‌ ಬ್ಯಾನರ್ಜಿ, ‘ಫೆಬ್ರವರಿಯಿಂದ ರಥಯಾತ್ರೆಯ ಭಾಗವಾಗಿ ರಾಜ್ಯದಲ್ಲಿ 5 ರಾರ‍ಯಲಿಗಳನ್ನು ನಡೆಸುವ ಉದ್ದೇಶವಿದೆ. ಪ್ರತಿ ಯಾತ್ರೆಯು ಶಾಂತಿಯುತವಾಗಿ 20-25 ದಿನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ನಿಮ್ಮ ಭೇಟಿಗೆ ಅವಕಾಶ ನೀಡಬೇಕು’ ಎಂದು ಕೋರಿದ್ದಾರೆ.

2018ರಲ್ಲಿಯೂ ರಾಜ್ಯದಲ್ಲಿ ಇಂಥದ್ದೇ ರಾರ‍ಯಲಿಗಳನ್ನು ನಡೆಸಲು ಬಿಜೆಪಿ ಯೋಜನೆ ರೂಪಿಸಿತ್ತು. ಆದರೆ ರಾಜ್ಯ ಸರ್ಕಾರದಿಂದ ಅನುಮತಿ ದೊರಕದ ಹಿನ್ನೆಲೆಯಲ್ಲಿ ಕಾರ‍್ಯಕ್ರಮ ರದ್ದಾಗಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಬಂಕೆ ಬಿಹಾರಿ ದೇಗುಲದಲ್ಲಿ ಶಾಲಿನ ಮೇಲೆ ಬಿತ್ತು ಚಿನ್ನದ ಉಂಗುರ: ಶ್ರೀಕೃಷ್ಣನ ಪ್ರತಿಮೆಯನ್ನೇ ಮದುವೆಯಾದ ಪಿಂಕಿ
'ವಂದೇ ಮಾತರಂ..' ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಶಕ್ತಿ ತುಂಬಿದ ಮಂತ್ರ ಎಂದ ಪ್ರಧಾನಿ ಮೋದಿ