ಬಿಜೆಪಿ ಹೇಳುತ್ತಿರುವ ಹಿಂದೂ ಎಲ್ಲಿಯೂ ಇಲ್ಲ. ಭಗವತ್ ಗೀತಾ, ಉಪನಿಶತ್‌ಗಳಲ್ಲಿರುವ ಹಿಂದೂ ಪದಕ್ಕೂ ಬಿಜೆಪಿ ವಕಾಲತ್ತು ವಹಿಸಿರುವ ಹಿಂದೂಗೂ ಸಂಬಂಧವಿಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಪ್ಯಾರಿಸ್ ಪ್ರವಾಸದಲ್ಲಿ ರಾಹುಲ್ ಗಾಂಧಿ ಆಡಿರುವ ಮಾತು ಇದೀಗ ಬಿಜೆಪಿಯನ್ನು ಕೆರಳಿಸಿದೆ.
ಪ್ಯಾರಿಸ್(ಸೆ.10) ಪ್ಯಾರಿಸ್ ಪ್ರವಾಸದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ. ಭಗವತ್ ಗಿತಾ, ಉಪನಿಶತ್ ಸೇರಿದಂತೆ ಹಲವು ಹಿಂದೂ ಪುಸ್ತಕಗಳಲ್ಲಿ ಹೇಳಿರುವ ಹಿಂದೂ ಪದಕ್ಕೂ ಸದ್ಯ ಬಿಜೆಪಿ ವಕಾಲತ್ತು ವಹಿಸಿರುವ ಹಿಂದುತ್ವಕ್ಕೆ ಸಂಬಂಧವಿಲ್ಲ. ದುರ್ಬಲರ ಮೇಲೆ ದಾಳಿಗೆ ಯಾವುದೇ ಪುಸ್ತಕದಲ್ಲಿ ಹೇಳಿಲ್ಲ. ಬಿಜೆಪಿ ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡಲು ಹೇಸುವುದಿಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಪ್ಯಾರಿಸ್ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ದೇಶದಲ್ಲಿ ವಿವಾದ ಹಾಗೂ ಚರ್ಚೆಗೆ ಗ್ರಾಸವಾಗಿರುವ ಸನತಾನ ಹಾಗೂ ಹಿಂದುತ್ವದ ವಿರುದ್ಧ ವಾಗ್ದಾಳಿನಡೆಸಿದ್ದಾರೆ. ಬಿಜೆಪಿ ಆಡಳಿತದಲ್ಲಿ ನಾಗರೀಕರ ಸಮಾಜ ಭಯದಲ್ಲಿ ಬದುಕವಂತಾಗಿದೆ ಎಂದಿದ್ದಾರೆ. ನಾವು ಪ್ರಜಾಪ್ರಭುತ್ವ ಉಳಿಸಲು ಹೋರಾಟ ನಡೆಸುತ್ತಿದ್ದೇವೆ ಎಂದಿದ್ದಾರೆ.
ಮೋದಿ ಸರ್ಕಾರ ದೇಶದ ನಿಜ ಸ್ವರೂಪವನ್ನು ಜಿ20 ಅತಿಥಿಗಳಿಂದ ಮರೆ ಮಾಡಿದೆ: ರಾಹುಲ್ ಕಿಡಿ
ಇದೇ ವೇಳೆ ಇಂಡಿಯಾ ಹೆಸರಿನ ಬದಲು ಕೇಂದ್ರ ಸರ್ಕಾರ ಭಾರತ್ ಹೆಸರು ಬಳಕೆ ಮಾಡಿರುವು ಕುರಿತು ರಾಹುಲ್ ಗಾಂಧಿ ಆಕ್ರೋಶ ಹೊರಹಾಕಿದ್ದಾರೆ. ವಿಪಕ್ಷಗಳ ಒಕ್ಕೂಟ ಇಂಡಿಯಾ ಅನ್ನೋ ಹೆಸರಿಟ್ಟಿದೆ. ಇದರಿಂದ ಪ್ರಧಾನಿ ನರೇಂದ್ರ ಮೋದಿ ಇಂಡಿಯಾ ಹೆಸರನ್ನು ದ್ವೇಷಿಸುತ್ತಿದ್ದಾರೆ. ಇದೇ ಕಾರಣಕ್ಕೆ ಭಾರತ್ ಎಂದು ಹೆಸರು ಬದಲಾಯಿಸುವ ಪ್ರಯತ್ನದಲ್ಲಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಎರಡೂ ಹೆಸರು ಸಂವಿಧಾನದಲ್ಲಿದೆ. ಆದರೆ ಮೋದಿಗೆ ವಿಪಕ್ಷಗಳು ಇಂಡಿಯಾ ಹೆಸರಿಟ್ಟ ಕಾರಣ ಇಂಡಿಯಾ ಹೆಸರನ್ನೇ ದ್ವೇಷಿಸಲು ಆರಂಭಿಸಿದ್ದಾರೆ ಎಂದು ರಾಹುಲ್ ಗಾಂಧಿಹೇಳಿದ್ದಾರೆ.
ಪ್ರತಿ ಬಾರಿ ರಾಹುಲ್ ಗಾಂಧಿ ವಿದೇಶ ಪ್ರವಾಸದಲ್ಲಿ ವಿವಾದಗಳೇ ಹೆಚ್ಚು. ಈ ಬಾರಿಯೂ ವಿವಾದಕ್ಕೆ ಕಡಿಮೆ ಏನೂ ಇಲ್ಲ. ಹಾಲಿ ಯುರೋಪ್ ದೇಶಗಳ ಪ್ರವಾಸದಲ್ಲಿರುವ ರಾಹುಲ್ ಗಾಂಧಿ, ಯುರೋಪ್ ಸಂಸದ ಫ್ಯಾಬಿಯೋ ಮ್ಯಾಸ್ಸಿಮೋ ಅವರೊಂದಿಗೆ ಕಾಣಿಸಿಕೊಂಡಿದ್ದಾರೆ. ಮ್ಯಾಸ್ಸಿಮೋ ಈ ಹಿಂದೆ ಕಾಶ್ಮೀರ ವಿಷಯದಲ್ಲಿ ಭಾರತದ ನಿಲುವು ವಿರೋಧಿಸಿ ಪಾಕಿಸ್ತಾನವನ್ನು ಬಹಿರಂಗವಾಗಿ ಬೆಂಬಲಿಸಿದ್ದರು. ಇದು ವಿವಾದಕ್ಕೆ ಕಾರಣವಾಗಿದೆ.
ಜಿ20 ಶೃಂಗಸಭೆಗೆ ಬುದ್ಧಿ ಇರೋರನ್ನ ಕರೆಸ್ತಾರೆ, ರಾಹುಲ್ ಗಾಂಧೀನ ಕರೆಸಿ ಏನು ಮಾಡಬೇಕು: ಯತ್ನಾಳ
ಇತ್ತ ಜಿ20 ಶೃಂಗಸಭೆ ವೇಳೆ ಕೇಂದ್ರ ಸರ್ಕಾರ ನಡೆದುಕೊಂಡ ರೀತಿ ವಿರುದ್ದವೂ ರಾಹುಲ್ ಗಾಂಧಿ ಅಸಮಾಧಾನ ಹೊರಹಾಕಿದ್ದಾರೆ. ಭಾರತ ಸರ್ಕಾರ ಜಿ20 ಅತಿಥಿಗಳಿಂದ ನಮ್ಮ ದೇಶದ ಬಡ ಜನರನ್ನು ಮರೆ ಮಾಚುತ್ತಿದೆ ಎಂದು ರಾಹುಲ್ ಗಾಂಧಿ ಟೀಕಿಸಿದ್ದಾರೆ. ಜಿ20 ನಿಮಿತ್ತ ದೆಹಲಿಯಲ್ಲಿ ಬಡ ಜನರ ವಾಸಿಸುವ ಪ್ರದೇಶಗಳನ್ನು ಹಸಿರು ಹೊದಿಕೆಗಳಿಂದ ಮರೆ ಮಾಡಿರುವುದನ್ನು ಟ್ವೀಟರ್‌ನಲ್ಲಿ ಬರೆದುಕೊಂಡಿರುವ ರಾಹುಲ್, ‘ಕೇಂದ್ರ ಸರ್ಕಾರ ಈ ರೀತಿ ಕ್ರಮದಿಂದ ವಿದೇಶಿ ಗಣ್ಯರಿಗೆ ದೇಶದ ನಿಜ ಸ್ವರೂಪವನ್ನು ತೋರಿಸುತ್ತಿಲ್ಲ. ಭಾರತದ ನಿಜ ಸ್ವರೂಪವನ್ನು ಮರೆ ಮಾಡುವ ಅಗತ್ಯವಿಲ್ಲ’ ಎಂದು ಕಿಡಿಕಾರಿದ್ದಾರೆ. ಐರೋಪ್ಯ ಒಕ್ಕೂಟದ ನಾಯಕರ ಜೊತೆ ಮಾತನಾಡುವಾಗ ರಾಹುಲ್ ಗಾಂಧಿ ಅವರು ಭಾರತ ಸರ್ಕಾರದ ವಿರುದ್ಧ ಕಟುವಾಗಿ ಟೀಕಿಸಿದ್ದರು.