BJP ಅಧ್ಯಕ್ಷ ಜೆ.ಪಿ ನಡ್ಡಾ ಟ್ವೀಟರ್‌ ಹ್ಯಾಕ್‌: ಉಕ್ರೇನ್‌ ಬಿಕ್ಕಟ್ಟು-ಕ್ರಿಪ್ಟೋಕರೆನ್ಸಿ ಬಗ್ಗೆ ಟ್ವೀಟ್‌

By Kannadaprabha NewsFirst Published Feb 28, 2022, 3:30 AM IST
Highlights

ದೇಶದ ಪ್ರಭಾವಿ ವ್ಯಕ್ತಿಯ ಟ್ವೀಟರ್‌ ಖಾತೆಯನ್ನು ಹ್ಯಾಕ್‌ ಮಾಡಿದ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಅವರ ಟ್ವೀಟರ್‌ ಖಾತೆಯನ್ನು ಹ್ಯಾಕ್‌ ಮಾಡಲಾಗಿದ್ದು, ಹ್ಯಾಕರ್‌ಗಳು ಉಕ್ರೇನ್‌ ಬಿಕ್ಕಟ್ಟು ಹಾಗೂ ಕ್ರಿಪ್ಟೋಕರೆನ್ಸಿ ಬಗ್ಗೆ ಹಲವಾರು ಟ್ವೀಟ್‌ಗಳನ್ನು ಮಾಡಿದ್ದಾರೆ.

ನವದೆಹಲಿ (ಫೆ.28): ದೇಶದ ಪ್ರಭಾವಿ ವ್ಯಕ್ತಿಯ ಟ್ವೀಟರ್‌ (Twitter) ಖಾತೆಯನ್ನು ಹ್ಯಾಕ್‌ ಮಾಡಿದ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಬಿಜೆಪಿ (BJP) ಅಧ್ಯಕ್ಷ ಜೆ.ಪಿ ನಡ್ಡಾ (JP Nadda) ಅವರ ಟ್ವೀಟರ್‌ ಖಾತೆಯನ್ನು ಹ್ಯಾಕ್‌ (Hack) ಮಾಡಲಾಗಿದ್ದು, ಹ್ಯಾಕರ್‌ಗಳು ಉಕ್ರೇನ್‌ ಬಿಕ್ಕಟ್ಟು (Ukraine Crisis) ಹಾಗೂ ಕ್ರಿಪ್ಟೋಕರೆನ್ಸಿ (Cryptocurrency) ಬಗ್ಗೆ ಹಲವಾರು ಟ್ವೀಟ್‌ಗಳನ್ನು (Tweet) ಮಾಡಿದ್ದಾರೆ. ನಡ್ಡಾ ಟ್ವೀಟರ್‌ ಖಾತೆ ಬಳಸಿ ಉಕ್ರೇನಿಗೆ ಸಹಾಯ ಮಾಡಲು ದೇಣಿಗೆಗಾಗಿ ಮನವಿ ಮಾಡಲಾಗಿದ್ದು, ಕ್ರಿಪ್ಟೋಕರೆನ್ಸಿಯ ಮೂಲಕ ನೀಡಿದ ದೇಣಿಗೆಯನ್ನೂ ಸ್ವೀಕರಿಸಲಾಗುವುದು ಎಂದು ಬರೆಯಲಾಗಿದೆ. 

ಈ ಬಗ್ಗೆ ಪ್ರತಿಕ್ರಿಯಿಸಿರುವ, ಮಾಹಿತಿ ತಂತ್ರಜ್ಞಾನ ಸಚಿವ ರಾಜೀವ್‌ ಚಂದ್ರಶೇಖರ್‌ (Rajeev Chandrasekhar) ಕಂಪ್ಯೂಟರ್‌ ತುರ್ತು ಪ್ರತಿಕ್ರಿಯೆ ತಂಡ (ಸಿಇಆರ್‌ಟಿ) ಈ ಕುರಿತು ತನಿಖೆ ನಡೆಸುತ್ತಿದೆ ಎಂದಿದ್ದಾರೆ. ಖಾತೆಯ ಮೇಲಿನ ನಿಯಂತ್ರಣವನ್ನು ಮರಳಿ ಪಡೆಯಲಾಗಿದೆ. ಹ್ಯಾಕ್‌ ಆಗುತ್ತಿರುವುದಕ್ಕೆ ನಿಖರವಾದ ಕಾರಣವನ್ನು ತಿಳಿದುಕೊಳ್ಳಲು ನಾವು ಟ್ವೀಟರ್‌ನೊಂದಿಗೂ ಮಾತುಕತೆ ನಡೆಸುತ್ತಿದ್ದೇವೆ ಎಂದು ಬಿಜೆಪಿ ನಾಯಕರೊಬ್ಬರು ಮಾಹಿತಿ ನೀಡಿದ್ದಾರೆ.

Latest Videos

ಕಳೆದ ಡಿಸೆಂಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಟ್ವೀಟರ್‌ ಖಾತೆಯನ್ನು ಹ್ಯಾಕ್‌ ಮಾಡಿ ಬಿಟ್‌ಕಾಯಿನ್‌ (Bitcoin) ಸಂಬಂಧಿತ ಹಲವು ಟ್ವೀಟ್‌ಗಳನ್ನು ಮಾಡಲಾಗಿತ್ತು. ನಂತರ ಖಾತೆಯಿಂದ ಅವುಗಳನ್ನು ತೆಗೆದುಹಾಕಲಾಗಿತ್ತು. ಇದಲ್ಲದೇ ಇತ್ತೀಚೆಗೆ ಕೆಲವು ಪ್ರಭಾವಿ ವ್ಯಕ್ತಿಗಳು, ಸರ್ಕಾರಿ ಇಲಾಖೆಗಳ ಟ್ವೀಟರ್‌ ಖಾತೆಯನ್ನು ಹ್ಯಾಕ್‌ ಮಾಡಲಾಗಿತ್ತು.

ಕ್ರಿಪ್ಟೋ ಇನ್ಫ್ಲುಯೆನ್ಸರ್ಸ್‌, ಕರೆನ್ಸಿ ವಿನಮಯ ಆ್ಯಪ್‌ಗಳ ಯೂಟ್ಯೂಬ್ ಚಾನೆಲ್‌ಗಳು ಹ್ಯಾಕ್!

National Disaster Response Force ಟ್ವೀಟರ್ ಖಾತೆ ಹ್ಯಾಕ್: ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (NDRF) ಅಧಿಕೃತ ಟ್ವಿಟರ್ ಹ್ಯಾಂಡಲ್ ಅನ್ನು ಶನಿವಾರ ತಡರಾತ್ರಿ ಹ್ಯಾಕ್ ಮಾಡಲಾಗಿದ್ದು ಮತ್ತು ಭಾನುವಾರ ಸಂಜೆಯ ವೇಳೆಗೆ ಸಂಪೂರ್ಣವಾಗಿ ಪುನಃಸ್ಥಾಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. '@NDRFHQ' ಹ್ಯಾಂಡಲ್‌ ಶನಿವಾರ ಹ್ಯಾಕ್‌ ಮಾಡಿ ರಾತ್ರಿ 10:45 ರ ಸುಮಾರಿಗೆ ಕೆಲವು  ಸಂದೇಶಗಳನ್ನು ಪೋಸ್ಟ್ ಮಾಡಲಾಗಿದೆ ಮತ್ತು ಡಿಸ್ಪ್ಲೇ ಹೆಸರು ಮತ್ತು ಫೋಟೋವನ್ನು ಬದಲಾಯಿಸಲಾಗಿದೆ.

"ತಾಂತ್ರಿಕ ತಜ್ಞರು ಹ್ಯಾಕ್ ಮೇಲೆ ಕೆಲಸ ಮಾಡಿದ ನಂತರ ಮತ್ತು ದಾಳಿಯ 2-3 ನಿಮಿಷಗಳಲ್ಲಿ ಡಿಸ್ಪ್ಲೇ ಹೆಸರು ಮತ್ತು ಚಿತ್ರವನ್ನು ಮರುಸ್ಥಾಪಿಸಿದ ನಂತರ ಖಾತೆಯನ್ನು ಭಾನುವಾರ ಸಂಪೂರ್ಣವಾಗಿ ಮರುಸ್ಥಾಪಿಸಲಾಗಿದೆ ಮತ್ತು ಕಾರ್ಯಗತಗೊಳಿಸಲಾಗಿದೆ" ಎಂದು ಎನ್‌ಡಿಆರ್‌ಎಫ್ ಮಹಾನಿರ್ದೇಶಕ (ಡಿಜಿ) ಅತುಲ್ ಕರ್ವಾಲ್ ಪಿಟಿಐಗೆ (PTI) ತಿಳಿಸಿದ್ದಾರೆ.

I&B Ministry‌ ಟ್ವೀಟರ್‌ ಖಾತೆ ಹ್ಯಾಕ್: ಕಳೆದ ಎರಡು ತಿಂಗಳಲ್ಲಿ ಕೇಂದ್ರ ಸರ್ಕಾರದ ಇಲಾಖೆಗಳು ಹಾಗೂ ಸ್ವತಃ ಪ್ರಧಾನಿ ಮೋದಿ ಟ್ವೀಟರ್‌ ಖಾತೆ ಹ್ಯಾಕ್‌ ವರದಿಯಾಗಿದೆ. ಜನವರಿ 12ರಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ (I&B) ಸಚಿವಾಲಯದ ಟ್ವಿಟರ್ ಖಾತೆಯನ್ನು ಕೂಡ ಬುಧವಾರ ಹ್ಯಾಕ್‌ ಮಾಡಲಾಗಿತ್ತು. ಟ್ವಿಟರ್ ಅಕೌಂಟ್ ಹ್ಯಾಕ್​ ಮಾಡಿದ್ದ ಹ್ಯಾಕರ್ಸ್​ಗಳು, ಖಾತೆಯ ಹೆಸರನ್ನು ಎಲೋನ್​ ಮಸ್ಕ್​ (Elon Musk) ಎಂದು ಬದಲಿಸಿದ್ದರು. ಖಾತೆಯನ್ನು ಹ್ಯಾಕ್ ಮಾಡಿದ ನಂತರ, ಬಿಟ್‌ಕಾಯಿನ್‌ ಎಂದು ಬರೆಯಲಾಗಿದ್ದ  'amazing news' ಗೆ ಲಿಂಕ್‌ಗಳನ್ನು ಹೊಂದಿರುವ ಹಲವಾರು ಟ್ವೀಟ್‌ಗಳನ್ನು ಹಂಚಿಕೊಳ್ಳಲಾಗಿತ್ತು. 

ಪ್ರಧಾನಿ ಮೋದಿ ಟ್ವೀಟರ್‌ ಖಾತೆ ಹ್ಯಾಕ್: ಬಿಟ್‌ಕಾಯಿನ್ ಕುರಿತು ಪೋಸ್ಟ್!

ಹ್ಯಾಕರ್‌ಗಳು ಖಾತೆಯನ್ನು 'ಎಲೋನ್ ಮಸ್ಕ್' ಎಂದು ಮರುನಾಮಕರಣ ಮಾಡುವುದರ ಜತೆಗೆ 'Great Job' (ಉತ್ತಮ ಕೆಲಸ) ಎಂದು ಟ್ವೀಟ್ ಮಾಡಲು ಪ್ರಾರಂಭಿಸಿದ್ದರು. ಆದರೆ ತಕ್ಷಣ ಎಚ್ಚೆತ್ತ ಸಚಿವಾಲಯ ತನ್ನ ಟ್ವೀಟರ್‌ ಖಾತೆಯನ್ನು ಮರುಸ್ಥಾಪಿಸಿತ್ತು. ಅಲ್ಲದೆ ಹ್ಯಾಕರ್ಸ್‌ ಮಾಡಿದ ಟ್ವೀಟ್‌ಗಳನ್ನು ಡೀಲಿಟ್‌ ಮಾಡಿ ಖಾತೆಯನ್ನು ಭದ್ರಪಡಿಸಲಾಗಿತ್ತು.‌ ಜನವರಿ 3 ರಂದು ಇಂಡಿಯನ್ ಕೌನ್ಸಿಲ್ ಆಫ್ ವರ್ಲ್ಡ್ ಅಫೇರ್ಸ್ (ICWA), ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ​​(IMA) ಮತ್ತು ಮನ್ ದೇಶಿ ಮಹಿಳಾ ಬ್ಯಾಂಕ್ (ಮೈಕ್ರೋ ಫೈನಾನ್ಸ್ ಬ್ಯಾಂಕ್) ಟ್ವಿಟರ್ ಖಾತೆಗಳನ್ನು ಹ್ಯಾಕ್ ಮಾಡಲಾಗಿತ್ತು. ಇನ್ನು ಡಿಸೆಂಬರ್‌ ಡಿಸೆಂಬರ್ 12, 2021 ರಂದು, ಪ್ರಧಾನಿ ನರೇಂದ್ರ ಮೋದಿಯವರ (Narendra Modi) ವೈಯಕ್ತಿಕ ಟ್ವಿಟರ್ ಹ್ಯಾಂಡಲ್  ಹ್ಯಾಕ್ ಮಾಡಲಾಗಿತ್ತು. 

click me!