ಲಡಾಖ್‌ನಲ್ಲಿ ಮತ್ತೆ ಭಾರತ-ಚೀನಾ ಸಂಘರ್ಷ ನಡೆದಿಲ್ಲ: ಸೇನೆ

By Suvarna NewsFirst Published Jul 15, 2021, 10:03 AM IST
Highlights

* ಪತ್ರಿಕೆಯಲ್ಲಿ ಪ್ರಕಟವಾದ ವರದಿಯು ಸುಳ್ಳು, ವಾಸ್ತವಕ್ಕೆ ದೂರ

* ಲಡಾಖ್‌ನಲ್ಲಿ ಮತ್ತೆ ಭಾರತ-ಚೀನಾ ಸಂಘರ್ಷ ನಡೆದಿಲ್ಲ: ಸೇನೆ

*  ಉಭಯ ದೇಶಗಳ ನಡುವಿನ ಒಪ್ಪಂದಗಳು ಮುರಿದಿವೆ ಎಂಬುದೂ ಸುಳ್ಳು

ನವದೆಹಲಿ(ಜು.15): ಈ ಹಿಂದೆ ನೆರೆಯ ಚೀನಾ ಮತ್ತು ಭಾರತೀಯ ಯೋಧರ ಮುಷ್ಟಿಯುದ್ಧಕ್ಕೆ ಕಾರಣವಾಗಿದ್ದ ಪೂರ್ವ ಲಡಾಖ್‌ನಲ್ಲಿ ಇದೀಗ ಮತ್ತೆ ಚೀನಾ ಪಡೆಗಳು ಭಾರತದ ಮೇಲೆ ಘರ್ಷಣೆ ನಡೆಸಿದೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ. ಆದರೆ ಚೀನಾದ ಯೋಧರು ಅಥವಾ ಪಡೆಗಳು ಭಾರತದ ಮೇಲೆ ಘರ್ಷಣೆ ನಡೆಸಿಲ್ಲ. ಹೀಗಾಗಿ ಈ ಕುರಿತಾಗಿ ಪ್ರಕಟವಾದ ವರದಿಗಳು ವಾಸ್ತವಕ್ಕೆ ದೂರ ಮತ್ತು ಸುಳ್ಳು ಎಂದು ಭಾರತೀಯ ಸೇನೆ ಸ್ಪಷ್ಟನೆ ನೀಡಿದೆ.

ಟಿಬೆಟ್ ಯುವಕರು ಚೀನಾ ಸೇನೆಗೆ: ಭಾರತದ ವಿಶೇಷ ಪಡೆ ಎದುರಿಸಲು ಡ್ರ್ಯಾಗನ್ ತಂತ್ರ!

ಈ ಸಂಬಂಧ ಬುಧವಾರ ಹೇಳಿಕೆ ಬಿಡುಗಡೆ ಮಾಡಿದ ಸೇನೆಯು, ಪತ್ರಿಕೆಯಲ್ಲಿ ಪ್ರಕಟವಾದ ವರದಿಯಲ್ಲಿ ಪೂರ್ವ ಲಡಾಖ್‌ನಲ್ಲಿ ಶಾಂತಿ ಪುನಃಸ್ಥಾಪನೆಗಾಗಿ ಉಭಯ ದೇಶಗಳ ಮಧ್ಯೆ ಮಾಡಿಕೊಳ್ಳಲಾಗಿದ್ದ ಒಪ್ಪಂದಗಳು ಮುರಿದಿಬಿದ್ದಿವೆ ಎಂದು ಉಲ್ಲೇಖಿಸಲಾಗಿದೆ. ಆದರೆ ಇದೆಲ್ಲಾ ಸುಳ್ಳು ಮತ್ತು ಆಧಾರರಹಿತವಾಗಿದೆ. ಇದೇ ವರ್ಷದಲ್ಲಿ ಆರಂಭಿಸಲಾದ ಸೇನಾ ಹಿಂಪಡೆತದ ಭಾಗವಾಗಿ ಗಡಿಯಲ್ಲಿ ಬೀಡುಬಿಟ್ಟಸೇನೆಯನ್ನು ವಾಪಸ್‌ ಕರೆಸಿಕೊಳ್ಳಲಾಗುತ್ತಿದೆ. ಆದರೆ ಈ ವೇಳೆ ಚೀನಾ ಸೇನೆ ಅಥವಾ ಭಾರತದ ಸೇನೆಯಾಗಲೀ ಗಡಿ ಪ್ರದೇಶವನ್ನು ಆಕ್ರಮಿಸಿಕೊಳ್ಳುವ ಯತ್ನ ಮಾಡಿಲ್ಲ. ಈ ವರದಿಯಲ್ಲಿ ಪ್ರಕಟಿಸಲಾದಂತೆ ಗಲ್ವಾನ್‌ ಸೇರಿದಂತೆ ಇನ್ನಿತರ ಯಾವುದೇ ಪ್ರದೇಶಗಳಲ್ಲಿ ಚೀನಾ ಮತ್ತು ಭಾರತ ಸೇನೆಗಳು ಕಾದಾಟ ಅಥವಾ ಸಂಘರ್ಷಕ್ಕೆ ಇಳಿದಿಲ್ಲ. ಹೀಗಾಗಿ ಈ ವರದಿಯು ಆಧಾರರಹಿತ ಮತ್ತು ಸತ್ಯಕ್ಕೆ ದೂರವಾದದ್ದು ಎಂದು ಹೇಳಿದೆ.

ಲಡಾಖ್‌ನಲ್ಲಿ ಕೇವಲ 150 ಮೀ. ದೂರದಲ್ಲಿ ಭಾರತ- ಚೀನಾ ಪೋಸ್ಟ್‌!

ಅಲ್ಲದೆ ಉಭಯ ದೇಶಗಳು ಗಡಿ ವಿಚಾರಕ್ಕೆ ಸಂಬಂಧಿಸಿದ ಬಾಕಿ ಬಿಕ್ಕಟ್ಟುಗಳನ್ನು ಶಾಂತಿಯುತವಾಗಿ ಪರಿಹರಿಸಿಕೊಳ್ಳಲಿವೆ ಎಂದಿದೆ ಸೇನೆ.

click me!