ಮಹಾ ಬಿಜೆಪಿಯಲ್ಲಿ ಭಿನ್ನಮತ: ಪವಾರ್ ಆಯ್ಕೆಗೆ ಅಸಹಮತ!

Published : Nov 27, 2019, 06:14 PM IST
ಮಹಾ ಬಿಜೆಪಿಯಲ್ಲಿ ಭಿನ್ನಮತ: ಪವಾರ್ ಆಯ್ಕೆಗೆ ಅಸಹಮತ!

ಸಾರಾಂಶ

ಮಹಾರಾಷ್ಟ್ರದಲ್ಲಿ ಕೊನೆಗೂ ಅಂತ್ಯಗೊಂಡ ರಾಜಕೀಯ ಹೈಡ್ರಾಮಾ| ಶಿವಸೇನೆ, ಕಾಂಗ್ರೆಸ್-ಎನ್‌ಸಿಪಿ ಮೈತ್ರಿಕೂಟದ ಸರ್ಕಾರ| ಅಜಿತ್ ಪವಾರ್ ಬೆಂಬಲ ಪಡೆದ ಬಿಜೆಪಿಯಲ್ಲಿ ಭಿನ್ನಮತದ ಹೊಗೆ| 'ಭ್ರಷ್ಟಾಚಾರ ಆರೋಪ ಹೊತ್ತ ಅಜಿತ್ ಪವಾರ್ ಬೆಂಬಲ ಪಡಯಬಾರದಿತ್ತು'| ಮಹಾರಾಷ್ಟ್ರ ಬಿಜೆಪಿ ಹಿರಿಯ ನಾಯಕ ಏಕನಾಥ್ ಖಡ್ಸೆ ಅಭಿಪ್ರಾಯ| ಅಜಿತ್ ಪವಾರ್ ನಂಬಿದ್ದು ದೇವೇಂದ್ರ ಫಡ್ನವೀಸ್ ಪ್ರಮಾದ ಎಂದ ಖಡ್ಸೆ| 

ಮುಂಬೈ(ನ.27): ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸುವಲ್ಲಿ ವಿಫಲವಾಗಿರುವ ಬಿಜೆಪಿಯಲ್ಲಿ ಇದೀಗ ಅಸಮಾಧಾನದ ಬೇಗುದಿ ಹೊಗೆಯಾಡುತ್ತಿದೆ. ಸರ್ಕಾರ ರಚಿಸಲು ಎನ್‌ಸಿಪಿ ಯ ಅಜಿತ್ ಪವಾರ್ ಬೆಂಬಲ ಪಡೆದಿದ್ದಕ್ಕೆ ಕೆಲವು ಬಿಜೆಪಿ ನಾಯಕರು ಅಸಮಾಧಾನ ಹೊರಗೆಡವಿದ್ದಾರೆ.

ಕೇವಲ ಸರ್ಕಾರ ರಚಿಸುವ ಏಕೈಕ ಉದ್ದೇಶದಿಂಧ ಭ್ರಷ್ಟಾಚಾರ ಆರೋಪ ಹೊತ್ತಿರುವ ಅಜಿತ್ ಪವಾರ್ ಬೆಂಬಲ ಪಡೆದಿದ್ದು ಸರಿಯಲ್ಲ ಎಂದು ಬಿಜೆಪಿ ನಾಯಕ ಏಕನಾಥ್ ಖಡ್ಸೆ ಅಭಿಪ್ರಾಯಪಟ್ಟಿದ್ದಾರೆ.

'ಮಂತ್ರಾಲಯದ 6ನೇ ಮಹಡಿಯ ಸೂರ್ಯಯಾನ ದೆಹಲಿಯಲ್ಲಿ ಲ್ಯಾಂಡ್ ಆಗಲಿದೆ'!

ಯಾರ ವಿರುದ್ಧ ದೇವೇಂದ್ರ ಫಡ್ನವೀಸ್ 2014ರಲ್ಲಿ ಭ್ರಷ್ಟಚಾರದ ತನಿಖೆಗೆ ಆದೇಶಿಸಿದ್ದರೋ, ಅವರೊಂದಿಗೆ ಸೇರಿ 2019 ರಲ್ಲಿ ಸರ್ಕಾರ ರಚಿಸಲು ಮುಂದಾಗಿದ್ದು ವಿಪರ್ಯಾಸ ಎಂದು ಖಡ್ಸೆ ಹರಿಹಾಯ್ದಿದ್ದಾರೆ.

ಅಲ್ಲದೇ ಅಜಿತ್ ಪವಾರ್ ಅವರನ್ನು ನಂಬಿದ್ದು ಕೂಡ ದೇವೇಂದ್ರ ಫಡ್ನವೀಸ್ ಅವರ ಪ್ರಮಾದ ಎಂದು ಖಡ್ಸೆ ಅಭಿಪ್ರಾಯಪಟ್ಟಿದ್ದಾರೆ.

ಬಿಜೆಪಿಗೆ ಸೆಟ್ ಬ್ಯಾಕ್: ರಾಜೀನಾಮೆ ನೀಡಿ ಅಜಿತ್ ಪವಾರ್ ಕಮ್ ಬ್ಯಾಕ್!

ವಿಪಕ್ಷದಲ್ಲಿ ಕುಳಿತರೂ ಪರವಾಗಿಲ್ಲ, ಸಿದ್ಧಾಂತದೊಂದಿಗೆ ರಾಜಿ ಮಾಡಿಕೊಳ್ಳದ ನಡೆಯನ್ನು ರಾಜ್ಯ ಬಿಜೆಪಿ ನಾಯಕರು ಪ್ರದರ್ಶಿಸಬೇಕಿತ್ತು ಎಂದು ಖಡ್ಸೆ ಸ್ವಪಕ್ಷೀಯ ನಾಯಕರ ವಿರುದ್ಧ ಕೆಂಡ ಕಾರಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಟಾಪ್‌ 10 ಸ್ವಚ್ಛ ಗಾಳಿಯ ನಗರಗಳಲ್ಲಿ ರಾಜ್ಯದ 6 !
ಇನ್ನೂ 3 ದಿನ ತಗ್ಗುವುದಿಲ್ಲ ಇಂಡಿಗೋಳು! - ನಿನ್ನೆ ಮತ್ತೆ 650 ವಿಮಾನ ರದ್ದು