ಚೀನಾ ಜೊತೆ ಕಾಂಗ್ರೆಸ್ ಮಾಡಿದ ಒಪ್ಪಂದಿಂದಾಗಿ ಯುದ್ಧ: ರಾಹುಲ್ ವಿರುದ್ಧ ನಡ್ಡಾ ವಾಗ್ದಾಳಿ

Suvarna News   | Asianet News
Published : Jun 23, 2020, 12:53 PM IST
ಚೀನಾ ಜೊತೆ ಕಾಂಗ್ರೆಸ್ ಮಾಡಿದ ಒಪ್ಪಂದಿಂದಾಗಿ ಯುದ್ಧ: ರಾಹುಲ್ ವಿರುದ್ಧ ನಡ್ಡಾ ವಾಗ್ದಾಳಿ

ಸಾರಾಂಶ

ಇಂತಹ ಸಂದಿಗ್ಧ ಸ್ಥಿತಿಯಲ್ಲಿಯೂ ದೇಶವನ್ನು ವಿಭಜಿಸುವ, ಸೈನಿಕರನ್ನು ಹತಾಶೆಗೊಳಿಸುವಂತಹ ಪ್ರಯತ್ನವನ್ನು ರಾಹುಲ್ ಗಾಂಧಿ ಮಾಡುತ್ತಿದ್ದಾರೆ ಎಂದು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಆರೋಪಿಸಿದ್ದಾರೆ.

ನವದೆಹಲಿ(ಜೂ.23): ಇಂತಹ ಸಂದಿಗ್ಧ ಸ್ಥಿತಿಯಲ್ಲಿಯೂ ದೇಶವನ್ನು ವಿಭಜಿಸುವ, ಸೈನಿಕರನ್ನು ಹತಾಶೆಗೊಳಿಸುವಂತಹ ಪ್ರಯತ್ನವನ್ನು ರಾಹುಲ್ ಗಾಂಧಿ ಮಾಡುತ್ತಿದ್ದಾರೆ ಎಂದು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಆರೋಪಿಸಿದ್ದಾರೆ. ಚೀನಾದ ಕಮ್ಯುನಿಸ್ಟ್ ಪಕ್ಷದೊಂದಿಗೆ ಕಾಂಗ್ರೆಸ್ ಒಪ್ಪಂದ ಮಾಡಿಕೊಂಡ ಪರಿಣಾಮವೇ ಇದು ಎಂದು ಅವರು ಪ್ರಶ್ನಿಸಿದ್ದಾರೆ.

ಮೊದಲು ಕಾಂಗ್ರೆಸ್ ಚೀನಾ ಕಮ್ಯುನಿಸ್ಟ್ ಪಕ್ಷದೊಂದಿಗೆ ಒಪ್ಪಂದ ಮಾಡಿಕೊಂಡಿತು. ನಂತರ ಕಾಂಗ್ರೆಸ್‌ ಭೂಭಾಗವನ್ನುಚೀನಾಗೆ ಒಪ್ಪಿಸಿತು. ಡೋಕ್ಲಾಂ ಬಿಕ್ಕಟ್ಟಿನ ಸಂದರ್ಭ ರಾಹುಲ್ ಗಾಂಧಿ ಗುಟ್ಟಾಗಿ ಚೀನಾ ರಾಯಭಾರಿ ಕಚೇರಿಗೆ ಭೇಟಿ ನೀಡಿದರು.

ಸತ್ಯ ಒಪ್ಪಿಕೊಂಡ ಚೀನಾ: ಗಲ್ವಾನ್‌ ಘರ್ಷಣೆಯಲ್ಲಿ ಚೀನಾ ಕಮಾಂಡರ್‌ ಸಾವು

ಇದೀಗ ಇಂತಹ ವಿಷಮ ಸ್ಥಿತಿಯಲ್ಲೂ ದೇಶವನ್ನು ಒಡೆಯುವ, ಸೈನಿಕರನ್ನು ದೃತಿಗೆಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇದು ಒಪ್ಪಂದದ ಪರಿಣಾಮವೇ ಎಂದು ನಡ್ಡಾ ಟ್ವೀಟ್ ಮಾಡಿದ್ದಾರೆ.

2008ರಲ್ಲಿ ಒಪ್ಪಂದ ಸಹಿ ಮಾಡಿದ್ದು, ಈ ಮೂಲಕ ಹೈಲೆವೆಲ್ ಎಕ್ಸ್‌ಚೇಂಜ್ ಹಾಗೂ ಪ್ರಮುಖ ಪ್ರಾದೇಶಿಕ ಹಾಗೂ ಅಂತಾರಾಷ್ಟ್ರೀಯ ಘಟನೆಗಳಲ್ಲಿ ಪರಸ್ಪರ ಚರ್ಚಿಸುವುದಕ್ಕೆ ತೀರ್ಮಾನಿಸಲಾಗಿತ್ತು. ಚೀನಾ ಜೊತೆಗಿನ ಕೇಂದ್ರದ ನಿಲುವನ್ನು ಕಾಂಗ್ರೆಸ್ ತೀವ್ರವಾಗಿ ವಿರೋಧಿಸುತ್ತಿದ್ದು, ರಾಹುಲ್ ಗಾಂಧಿ ಟೀಕೆ ಮಾಡುವ ಟ್ವೀಟ್ ಮಾಡುತ್ತಲೇ ಇದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

15 ವರ್ಷಗಳಿಂದ ನಾಪತ್ತೆ: ವಿಡಿಯೋ ವೈರಲ್ ಬಳಿಕ ಮರಳಿ ಕುಟುಂಬ ಸೇರಿದ ಮಾಜಿ ಯೋಧ
ಪೌರತ್ವ ಸಿಗುವ ಮುನ್ನವೇ ವೋಟರ್‌ ಲಿಸ್ಟ್‌ನಲ್ಲಿ ಹೆಸರು, ಸೋನಿಯಾ ಗಾಂಧಿಗೆ ನೋಟಿಸ್‌ ಕೊಟ್ಟ ದೆಹಲಿ ಕೋರ್ಟ್!