
ಮುನ್ನಾರ್ (ಡಿ.13) ಕೇರಳ ಸ್ಥಳೀಯ ಸಂಸ್ಥೆ ಚುನಾವಣೆ ಬಿಜೆಪಿ ಆತ್ಮವಿಶ್ವಾಸ ಡಬಲ್ ಮಾಡಿದೆ. ತಿರುವಂತಪುರಂ ಪಾಲಿಕೆ ಕೈವಶ ಮಾಡಿದರೆ, ಹಲವು ವಾರ್ಡ್‌ಗಳಲ್ಲಿ ಬಿಜೆಪಿ ಗೆಲುವಿನ ನಗೆ ಬೀರಿದೆ. ಈ ಮೂಲಕ ಹೊಸ ಇತಿಹಾಸ ರಚಿಸಿದೆ. ಆದರೆ ಬಿಜೆಪಿಯಿಂದ ಟಿಕೆಟ್ ಗಿಟ್ಟಿಸಿಕೊಂಡು ಮುನ್ನಾರ್ ಪಂಚಾಯತ್‌ನ ನಲ್ಲಥನ್ನಿ ವಾರ್ಡ್‌ನಿಂದ ಸ್ಪರ್ಧಿಸಿದ ಸೋನಿಯಾ ಗಾಂಧಿ ಸೋಲು ಕಂಡಿದ್ದಾರೆ. ಸೋನಿಯಾ ಗಾಂಧಿ ಸ್ಪರ್ಧಿಸುತ್ತಿದ್ದಂತೆ ಕಾಂಗ್ರೆಸ್ ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ಬಿಜೆಪಿ ಅಭ್ಯರ್ಥಿ ಸೋನಿಯಾ ಗಾಂಧಿ ಗೆಲುವಿನ ದಡ ಸೇರುವಲ್ಲಿ ವಿಫಲರಾಗಿದ್ದಾರೆ. ಇದು ಬಿಜೆಪಿಯ ಸೋನಿಯಾ ಗಾಂಧಿ, ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅಲ್ಲ.
ಕೇರಳ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸೋನಿಯಾ ಗಾಂಧಿ ಸ್ಪರ್ಧೆ ದೇಶದ ಗಮನ ಸಳೆದಿತ್ತು. ಹೆಸರಿನ ಕಾರಣದಿಂದ ಕಾಂಗ್ರೆಸ್‌ಗೂ ಆತಂಕ ಎದುರಾಗಿತ್ತು. ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಂಜುಳಾ ಗೆಲುವು ಸಾಧಿಸುವುದು ಕಷ್ಟ ಎಂದು ವಿಶ್ಲೇಷಿಸಲಾಗಿತ್ತು. ಎಲ್‌ಡಿಎಫ್ ಹಾಗೂ ಯುಡಿಎಫ್ ಸ್ಪರ್ಧೆಯಲ್ಲಿ ಸೋನಿಯಾ ಗಾಂಧಿ ಗೆಲುವಿನ ನಗೆ ಬೀರಲು ಸಾಧ್ಯವಾಗಿಲ್ಲ.
ಮುನ್ನಾರ್ ನಿವಾಸಿಯಾಗಿರುವ ಸೋನಿಯಾ ಗಾಂಧಿ ಬಿಜೆಪಿಯ ಅಭ್ಯರ್ಥಿಯಾಗಿ ಚುನಾವಣೆ ಎದುರಿಸಿ ಸೋಲು ಕಂಡಿದ್ದಾರೆ. ಸೋನಿಯಾ ಗಾಂಧಿ ತಂದೆ ಮುನ್ನಾರ್‌ನ ಕಾಂಗ್ರೆಸ್ ಮುಖಂಡ ದೊರೆೈರಾಜ್. ದೊರೈರಾಜ್ ಕೆಲ ವರ್ಷಗಳ ಹಿಂದೆ ನಿಧನರಾಗಿದ್ದಾರೆ. ದೊರೈರಾಜ್ ತಮ್ಮ ಬಾಲ್ಯದಿಂದಲೂ ಕಾಂಗ್ರೆಸ್ ಕಾರ್ಯಕರ್ತನಾಗಿ, ಪಂಚಾಯತ್, ಜಿಲ್ಲಾ ಪಂಚಾಯತ್ ಸದಸ್ಯರಾಗಿ ಸಕ್ರಿಯರಾಗಿದ್ದರು. ಸ್ಥಳೀಯ ಕಾಂಗ್ರೆಸ್ ಮುಖಂಡರಾಗಿ ಗುರುತಿಸಿಕೊಂಡಿದ್ದ ದೊರೈರಾಜ್‌ಗೆ ಕಾಂಗ್ರೆಸ್ ಹಾಗೂ ಸೋನಿಯಾ ಗಾಂಧಿ ಮೇಲೆ ಎಲ್ಲಿಲ್ಲದ ಪ್ರೀತಿ. ಹೀಗಾಗಿ ದೊರೈರಾಜ್ ತಮ್ಮ ಮಗಳಿಗೆ ಸೋನಿಯಾ ಗಾಂಧಿ ಎಂದು ಹೆಸರಿಟ್ಟಿದ್ದರು. ಶಾಲಾ, ಕಾಲೇಜು ದಿನದಳಲ್ಲಿ ಸೋನಿಯಾ ಗಾಂಧಿ ಹೆಸರಿನಿಂದ ದೊರೈರಾಜ್ ಪುತ್ರಿ ಭಾರಿ ಸಂಚಲನ ಸೃಷ್ಟಿಸಿದ್ದರು.
ತಂದೆ ದೊರೈರಾಜ್ ಕಾಂಗ್ರೆಸ್ ಕಟ್ಟಾಳುವಾಗಿದ್ದರು. ಆದರೆ ಮಗಳು ಬಿಜೆಪಿ ಸೇರಿದ್ದು ಹೇಗೆ ಅನ್ನೋ ಪ್ರಶ್ನೆಗೂ ಇಲ್ಲಿದೆ ಉತ್ತರ. ದೊರೈರಾಜ್ ತಮ್ಮ ಮಗಳ ಮದುವೆಯನ್ನು ಸುಭಾಷ್ ಜೊತೆ ಮಾಡಿದ್ದರು.ಬಿಜೆಪಿ ಕಾರ್ಯಕರ್ತನಾಗಿದ್ದ ಸುಭಾಷ್ ಬಿಜೆಪಿಯ ಪಂಚಾಯತ್ ಜನರಲ್ ಸೆಕ್ರಟರಿಯಾಗಿ ಸೇವೆ ಸಲ್ಲಿಸಿದ್ದಾರೆ. ಬಿಜೆಪಿ ಸ್ಥಳೀಯ ಮುಖಂಡನಾಗಿ ಗುರುತಿಸಿಕೊಂಡಿದ್ದ ಸುಭಾಷ್‌ಗೆ ಬೆಂಬಲ ನೀಡುತ್ತಾ ಬಂದ ಪತ್ನಿ ಸೋನಿಯಾ ಗಾಂಧಿ ಅಧಿಕೃತವಾಗಿ ಬಿಜೆಪಿ ಸೇರಿಕೊಂಡಿದ್ದರು. ಈ ಬಾರಿ ಮುನ್ನಾರ್ ಪಂಚಾಯತ್‌ನ ನಲ್ಲಥಣ್ಣಿ ವಾರ್ಡ್‌ನಿಂದ ಸ್ಪರ್ಧಿಸಿದ್ದರು.
ಇದೇ ಮೊದಲ ಬಾರಿಗೆ ಕೇರಳ ರಾಜಧಾನಿ ತಿರುವನಂತಪುರಂ ಕಾರ್ಪೋರೇಶನ್ ಚುನಾವಣೆಯಲ್ಲಿ ಬಿಜೆಪಿ ಗೆಲುವು ಕಂಡಿದೆ. 100 ಸ್ಥಾನಗಳ ಪೈಕಿ ಬಿಜೆಪಿ 50 ಸ್ಥಾನ ಗೆದ್ದುಕೊಂಡರೆ, ಯುಡಿಎಫ್ (ಕಾಂಗ್ರೆಸ್) 29 ಸ್ಥಾನ ಗೆದ್ದುಕೊಂಡಿದೆ. ಇನ್ನು ಕಳೆದ 45 ವರ್ಷದಿಂದ ತಿರುವನಂತಪುರಂ ಕಾರ್ಪೋರೇಶನ್‌ನಲ್ಲಿ ಎಲ್‌ಡಿಎಫ್ (ಕಮ್ಯೂನಿಸ್ಟ್) 19 ಸ್ಥಾನಗೆದ್ದುಕೊಂಡಿದೆ. ಇತರರ 2 ಸ್ಥಾನದಲ್ಲಿ ಗೆಲುವು ಸಾಧಿಸಿದ್ದರೆ. ಕೇರಳದ ತಿರುವನಂತಪುರಂ ಇದೇ ಮೊದಲ ಬಾರಿಗೆ ಬಿಜೆಪಿ ಆಡಳಿತಕ್ಕೆ ಸಾಕ್ಷಿಯಾಗುತ್ತಿದೆ.
ವಕ್ಫ್ ಕಬಳಿಕೆ ವಿಚಾರದಲ್ಲಿ ಭಾರಿ ವಿವಾದಕ್ಕೆ ಕಾರಣವಾಗಿದ್ದ ಮುನಂಬಮ್ ಕ್ಷೇತ್ರದ ವಾರ್ಡ್‌ನಲ್ಲಿ ಬಿಜೆಪಿ ಅಭ್ಯರ್ಥಿ ಕುಂಜುಮೋನ್ ಅಗಸ್ಟಿನ್ ಗೆಲುವು ಸಾಧಿಸಿದ್ದಾರೆ. ವಿಶೇಷ ಅಂದರೆ ಶೇಕಡಾ 100ರಷ್ಟು ಕ್ರಿಶ್ಟಿಯನ್ ಜನಸಂಖ್ಯೆ ಇರುವ ಈ ವಾರ್ಡ್‌ನಲ್ಲಿ ಜನರು ಬಿಜೆಪಿ ಅಭ್ಯರ್ಥಿ ಗೆಲ್ಲಿಸಿದ್ದಾರೆ. 400ಕ್ಕೂ ಹೆಚ್ಚು ಕ್ರಿಶ್ಚಿಯನ್ ಕುಟುಂಬಗಳು ಇಲ್ಲಿ ನೆಲೆಸಿದೆ. ನೂರೂರು ವರ್ಷಗಳಿಂದ ಇಲ್ಲಿ ಜೀವನ ಸಾಗಿಸುತ್ತಿದ್ದಾರೆ. ಆದರೆ ಇದು ವಕ್ಫ್ ಆಸ್ತಿ ಎಂದು ಒಕ್ಕಲೆಬ್ಬಿಸಲು ನೋಟಿಸ್ ನೀಡಲಾಗಿತ್ತು. ಕ್ರಿಶ್ಚಿಯನ್ ಹೋರಾಟದಲ್ಲಿ ಬಿಜೆಪಿ ಪ್ರಮುಖ ನಿರ್ವಹಿಸಿತ್ತು. ಬಳಿಕ ಕೋರ್ಟ್ ವಕ್ಫ್ ಬೋರ್ಡನ್ನು ತರಾಟೆಗೆ ತೆಗೆದುಕೊಂಡು ಬೋರ್ಡ್ ನೀಡಿದ್ದ ನೋಟಿಸ್ ರದ್ದುಪಡಿಸಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ