
ನವದೆಹಲಿ(ಮಾ.25) ಲೋಕಸಭಾ ಚುನಾವಣೆಗೆ ಬಿಜೆಪಿ ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ಬಾಲಿವುಡ್ ನಟಿ ಕಂಗನಾ ರಣಾವತ್‌ಗೆ ಟಿಕೆಟ್ ನೀಡಿದೆ. ಕಂಗನಾ ಟಿಕೆಟ್ ಘೋಷಣೆಯಾದ ಬೆನ್ನಲ್ಲೇ ಪರ ವಿರೋಧಗಳು ವ್ಯಕ್ತವಾಗಿದೆ. ಈ ಕುರಿತು ಕಾಂಗ್ರೆಸ್ ಪ್ರಮುಖ ನಾಯಕಿ ಸುಪ್ರಿಯಾ ಶ್ರೀನಾಥೆ ಮಾಡಿದ ಪೋಸ್ಟ್ ಭಾರಿ ವಿವಾದಕ್ಕೆ ಕಾರಣವಾಗಿದೆ. ಕಂಗನಾ ಹಾಟ್ ಫೋಟೋ ಒಂದನ್ನು ತನ್ನ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡ ನಾಯಕಿ, ವಿವಾದಾತ್ಮ ವಿಷಯವನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್ ವಿರುದ್ಧ ಭಾರಿ ಆಕ್ರೋಶಗಳು ವ್ಯಕ್ತವಾಗಿದೆ. ಹೆಣ್ಣಿಗೆ ಕಾಂಗ್ರೆಸ್ ನೀಡುತ್ತಿರುವ ಗೌರವ ಇದು ಎಂದು ಅಸಮಾಧಾನಗಳು ವ್ಯಕ್ತವಾಗಿತ್ತು. ಈ ವಿವಾದ ಹೆಚ್ಚಾಗುತ್ತಿದ್ದಂತೆ ನಟಿ, ಬಿಜೆಪಿ ಅಭ್ಯರ್ಥಿ ಕಂಗನಾ ತಿರುಗೇಟು ನೀಡಿದ್ದಾರೆ. ಪ್ರತಿ ಹೆಣ್ಣು ತನ್ನ ಘನತೆಗೆ ಅರ್ಹಳು ಎಂದು ತಿರುಗೇಟು ನೀಡಿದ್ದಾರೆ.
ಕಂಗನಾ ತಿರುಗೇಟು ಬೆನ್ನಲ್ಲೇ ಸುಪ್ರಿಯಾ ಶ್ರೀನಾಥೆ ತನ್ನ ಸಾಮಾಜಿಕ ಮಾಧ್ಯಮ ಖಾತೆ ಹ್ಯಾಕ್ ಮಾಡಲಾಗಿದೆ. ಈ ಪೋಸ್ಟ್ ಯಾರು ಹಾಕಿದ್ದಾರೆ ಎಂದು ತಿಳಿದಿಲ್ಲ. ಡಿಲೀಟ್ ಮಾಡಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ. ಆದರೆ ಈ ಪೋಸ್ಟ್ ಲೋಕಸಭಾ ಚುನಾವಣೆ ಹೊತ್ತಲ್ಲೇ ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಹಿನ್ನಡೆ ತಂದಿರುವುದು ಸುಳ್ಳಲ್ಲ.
ಕಂಗನಾ ರಣಾವತ್, ರಾಮಾಯಾಣ ನಟ ಅರುಣ್ ಗೋವಿಲ್‌ಗೆ ಟಿಕೆಟ್ ಘೋಷಿಸಿದ ಬಿಜೆಪಿ!
ಸುಪ್ರೀಂ ಶ್ರೀನಾಥೆ ಹಂಚಿಕೊಂಡ ಸೋಶಿಯಲ್ ಮಿಡಿಯಾ ಪೋಸ್ಟ್‌ಗೆ ಕಂಗನಾ ಖಡಕ್ ತಿರುಗೇಟು ನೀಡಿದ್ದಾರೆ. ಪ್ರೀತಿಯ ಸುಪ್ರಿಯಾಜಿ, ಒರ್ವ ಕಲಾವಿಧೆಯಾಗಿ ಕಳೆದ 20 ವರ್ಷಗಳ ನನ್ನ ವೃತ್ತಿಬದುಕಿನಲ್ಲಿ ಎಲ್ಲಾ ರೀತಿಯ ಮಹಿಳಾ ಪಾತ್ರಗಳನ್ನು ನಿಭಾಯಿಸಿದ್ದೇನೆ. ಕ್ವೀನ್ ಚಿತ್ರದಲ್ಲಿ ನಿಷ್ಕಲ್ಮಷ ಪಾತ್ರದಲ್ಲಿ ಕಾಣಿಸಿಕೊಂಡರೆ, ಧಕ್ಕಡ್ ಚಿತ್ರದಲ್ಲಿ ಮೋಹಕ ಗೂಢಚರ್ಯೆಯಾಗಿ ಕಾಣಿಸಿಕೊಂಡಿದ್ದೇನೆ. ಮಣಿಕರ್ಣಿಕಾ ಚಿತ್ರದಲ್ಲಿ ದೇವತೆಯಾಗಿ, ಚಂದ್ರಮುಖಿಯಲ್ಲಿ ರಾಕ್ಷಿಸಿಯಾಗಿ, ರಜ್ಜೋದಲ್ಲಿ ವೇಶ್ಯೆಯ ಪಾತ್ರದಲ್ಲಿ ತಲೈವಿಯಲ್ಲಿ ಕ್ರಾಂತಿಕಾರಿ ನಾಯಕಿಯಾಗಿ ಪಾತ್ರ ನಿರ್ವಹಿಸಿದ್ದೇನೆ. ನಮ್ಮ ಹೆಣ್ಣು ಮಕ್ಕಳನ್ನು ಪೂರ್ವಗ್ರಹಗಳ ಸಂಕೋಲೆಯಿಂದ ಮುಕ್ತಗೊಳಿಸಬೇಕು. ಅವರ ದೇಹದ ಭಾಗಗಳ ಬಗ್ಗೆ ಕುತೂಹಲ ಹೆಚ್ಚಿಸುವುದಕ್ಕಿಂತ ಅವರನ್ನು ಹೆಣ್ಣಾಗಿ ಸಶಕ್ತಳಾಗಿ ಬೆಳೆಸಬೇಕು. ಲೈಂಗಿಕ ಕಾರ್ಯಕರ್ತೆಯರನ್ನು ಕೆಲವು ರೀತಿಯಲ್ಲಿ ನಿಂದಿಸುವದನ್ನು ತಡೆಯಬೇಕು. ಪ್ರತಿ ಹೆಣ್ಣು ಕೂಡ ತನ್ನ ಘನತೆಗೆ ಅರ್ಹಳು ಎಂದು ಕಂಗನಾ ರಣಾವತ್ ತಿರುಗೇಟು ನೀಡಿದ್ದಾರೆ.
ಕಂಗನಾ ತಿರುಗೇಟು ನೀಡಿದ ಬೆನ್ನಲ್ಲೇ ಸುಪ್ರಿಯಾ ಶ್ರೀನಾಥ್ ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಯಾರೋ ಒಬ್ಬರು ನನ್ನ ಮೆಟಾ ಖಾತೆಗಳಾದ ಫೇಸ್‌ಬುಕ್ ಹಾಗೂ ಇನ್‌ಸ್ಟ್ರಾಂನಲ್ಲಿ ಈ ವಿವಾದಾತ್ಮಕ ಪೋಸ್ಟ್ ಹಾಕಿದ್ದಾರೆ. ಈ ಪೋಸ್ಟನ್ನು ಡಿಲೀಟ್ ಮಾಡಲಾಗಿದೆ. ನಾನು ಯಾವತ್ತೂ ಮಹಿಳೆ ಬಗ್ಗೆ ಕೆಟ್ಟದಾಗಿ ಕಮೆಂಟ್ ಮಾಡಿಲ್ಲ. ಇದು ನನ್ನನ್ನು ಗೊತ್ತಿರುವವರಿಗೆ ತಿಳಿದಿದೆ. ನನ್ನ ಹೆಸರಿನಲ್ಲಿರುವ ಕೆಲ ಪ್ಯಾರಡಿ ಖಾತೆಗಳು ನನ್ನ ಹೆಸರನ್ನು ದುರ್ಬಳಕೆ ಮಾಡುತ್ತಿದೆ.ವಿವಾದಾತ್ಮಕ ಪೋಸ್ಟ್‌ಗಳನ್ನು ಹಾಕುತ್ತಿದ್ದಾರೆ. ಈ ಕುರಿತು ಟ್ವಿಟರ್‌ಗೆ ದೂರು ದಾಖಲಿಸಲಾಗಿದೆ.
ಬಿಜೆಪಿಯಿಂದ ಕಂಗನಾಗೆ ಟಿಕೆಟ್; ರಾಜಕೀಯದೊಂದಿಗೆ ನಟಿಗಿದೆ ಹಳೆಯ ನಂಟು!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ