ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ 6ನೇ ಪಟ್ಟಿ ಪ್ರಕಟ, ಯಾರಿಗೆಲ್ಲ ಟಿಕೆಟ್?

By Suvarna NewsFirst Published Mar 25, 2024, 4:40 PM IST
Highlights

ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸುತ್ತಿರುವ ಪಕ್ಷಗಳು ಪಟ್ಟಿ ಪ್ರಕಟಿಸುತ್ತಿದೆ. ಇದೀಗ ಕಾಂಗ್ರೆಸ್ ಲೋಕಸಭಾ ಚುನಾವಣೆಯ 6ನೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. 6ನೇ ಪಟ್ಟಿಯಲ್ಲಿ ಟಿಕೆಟ್ ಗಿಟ್ಟಿಸಿಕೊಂಡ ನಾಯಕರು ಯಾರು?
 

ನವದೆಹಲಿ(ಮಾ.25) ಲೋಕಸಭಾ ಚುನಾವಣಾ ಪ್ರಚಾರಗಳು ಆರಂಭಗೊಂಡಿದೆ. ಮತದಾರರನ್ನು ಸೆಳೆಯಲು ನಾನಾ ಕಸರತ್ತುಗಳು ನಡೆಯುತ್ತಿದೆ. ಇದರ ನಡುವೆ ಚುನಾವಣಾ ಅಖಾಡಕ್ಕೆ ಧುಮುಕುತ್ತಿರುವ ಅಭ್ಯರ್ಥಿಗಳ ಪಟ್ಟಿಯನ್ನೂ ಪಕ್ಷಗಳು ಹಂತ ಹಂತವಾಗಿ ಬಿಡುಗಡೆ ಮಾಡುತ್ತಿದೆ. ಇದೀಗ ಕಾಂಗ್ರೆಸ್ ಲೋಕಸಭಾ ಚುನಾವಣಾ 6ನೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. 6ನೇ ಪಟ್ಟಿಯಲ್ಲಿ 5 ಅಭ್ಯರ್ಥಿಗಳಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ. ರಾಜಸ್ಥಾನದ 5 ಕ್ಷೇತ್ರಗ ಹಾಗೂ ತಮಿಳುನಾಡಿನ ಒಂದು ಕ್ಷೇತ್ರಕ್ಕೆ ಟಿಕೆಟ್ ಅಂತಿಮಗೊಳಿಸಲಾಗಿದೆ.

ತಮಿಳುನಾಡು ಲೋಕಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್ 9 ಸ್ಥಾನಗಳಿಗೆ ಟಿಕೆಟ್ ಅಂತಿಮಗೊಳಿಸಿದೆ. ಒಂದು ಸ್ಥಾನ ಬಾಕಿ ಉಳಿಸಿಕೊಂಡಿದೆ. 6ನೇ ಪಟ್ಟಿಯಲ್ಲಿ ತಮಿಳುನಾಡಿನ ತಿರುನೇಲ್ವೆಲಿ ಕ್ಷೇತ್ರಕ್ಕೆ ಟಿಕೆಟ್ ಘೋಷಿಸಲಾಗಿದೆ. ವಕೀಲ ಸಿ ರಾಬರ್ಟ್ ಬ್ರೂಸ್‌ಗೆ ಟಿಕೆಟ್ ನೀಡಲಾಗಿದೆ. ಇನ್ನು ರಾಜಸ್ಥಾನದ ಅಜ್ಮೆರ್ ಕ್ಷೇತ್ರಕ್ಕೆ ರಾಮಚಂದ್ರ ಚೌಧರಿಗೆ ಟಿಕೆಟ್ ನೀಡಲಾಗಿದೆ. ನಾಯಕ ಸುದರ್ಶನ್ ರಾವತ್‌ಗೆ ರಾಜಮಸಂದ್ ಕ್ಷೇತ್ರದಿಂದ ಟಿಕೆಟ್ ನೀಡಲಾಗಿದೆ. ಬಿಲ್ವಾರಾ ಕ್ಷೇತ್ರದಿಂದ ಡಾ. ದಾಮೋದರ್ ಗುರ್ಜರ್, ಕೋಟಾ ಕ್ಷೇತ್ರದಿಂದ ಪ್ರಹ್ಲಾದ್ ಗುಂಜಾಲ್‌ಗೆ ಟಿಕೆಟ್ ನೀಡಲಾಗಿದೆ.

Latest Videos

ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಮಹಾರಾಜ ಯದುವೀರ್ ವಿರುದ್ಧ ನಟಿ ರಮ್ಯಾ ಪ್ರಚಾರ

ಭಾನುವಾರ ಕಾಂಗ್ರೆಸ್ 5ನೇ ಪಟ್ಟಿ ಪ್ರಕಟಿಸಿತ್ತು. ಪ್ರಮುಖವಾಗಿ ರಾಜಸ್ಥಾನದ ಜೈಪುರ ಕ್ಷೇತ್ರದಿಂದ ಪ್ರತಾಪ್ ಸಿಂಗ್ ಕಚಾರಿಯಾವಾಸ್‌ಗೆ ಟಿಕೆಟ್ ನೀಡಲಾಗಿದೆ. ಇಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆ ಆರೋಪದಡಿ ಸುನಿಲ್ ಶರ್ಮಾಗೆ ಟಿಕೆಟ್ ನಿರಾಕರಿಸಲಾಗಿದೆ. ರಾಜಸ್ಥಾನದ ದೌಸಾ ಕ್ಷೇತ್ರದಿಂದ ಮರಳಿ ಲಾಲ್ ಮೀನಾಗೆ ಟಿಕೆಟ್ ನೀಡಲಾಗಿದೆ. ಮಹಾರಾಷ್ಟ್ರದ ಚಂದಾಪುರ ಕ್ಷೇತ್ರದಿಂದ ಪ್ರತಿಭಾ ಸುರೇಶ್ ದಾನೋರ್ಕರ್‌ಗೆ ಟಿಕೆಟ್ ನೀಡಲಾಗಿದೆ. ಶನಿವಾರ ಕಾಂಗ್ರೆಸ್ ಅಭ್ಯರ್ಥಿಗಳ ನಾಲ್ಕನೇ ಪಟ್ಟಿ ಬಿಡುಗಡೆಯಾಗಿತ್ತು. ಈ ಪಟ್ಟಿಯಲ್ಲಿ 46 ಅಭ್ಯರ್ಥಿಗಳಿಗೆ ಟಿಕೆಟ್ ಘೋಷಣೆ ಮಾಡಲಾಗಿತ್ತು.  

 

कांग्रेस अध्यक्ष श्री की अध्यक्षता में आयोजित 'केंद्रीय चुनाव समिति' की बैठक में लोकसभा चुनाव, 2024 के लिए कांग्रेस उम्मीदवारों के नाम की छठवीं लिस्ट। pic.twitter.com/KoXyKzYH87

— Congress (@INCIndia)

 

6ನೇ ಪಟ್ಟಿಯಲ್ಲಿ ಬಿಹಾರ ಕ್ಷೇತ್ರದ ಟಿಕೆಟ್ ಘೋಷಣೆ ಮಾಡುವ ನಿರೀಕ್ಷೆ ಇತ್ತು. ಈ ಪೈಕಿ ಭಾಗಲ್ಪುರ ಕ್ಷೇತ್ರ ತೀವ್ರ ಕುತೂಹಲ ಕೆರಳಿಸಿದೆ,ಬಾಲಿವುಡ್ ನಟಿ ನೇಹಾ ಶರ್ಮಾ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂದು ನೇಹಾ ತಂದೆ, ಕಾಂಗ್ರೆಸ್ ಶಾಸಕ ಅಜಯ್ ಶರ್ಮಾ ಹೇಳಿದ್ದರು. ಈಗಾಗಲೇ ನಾನು ಭಾಗಲ್ಪುರದ ಶಾಸಕರಾಗಿದ್ದು, ಇಂಡಿಯಾ ಮೈತ್ರಿಕೂಟದ ಮಿತ್ರಪಕ್ಷಗಳೊಂದಿಗೆ ಪಕ್ಷದ ಸೀಟು ಹಂಚಿಕೆ ಬಗ್ಗೆ ಚರ್ಚೆ ನಡೆದಿದೆ. ಭಾಗಲ್ಪುರ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ನನ್ನ ಮಗಳು ನೇಹಾ ಶರ್ಮಾ ಅವರನ್ನು ಸ್ಪರ್ಧೆಗೆ ಇಳಿಸಲು ಕೇಳಿಕೊಳ್ಳುತ್ತೇನೆ ಎಂದರು.ಈ ಹೇಳಿಕೆ ಬೆನ್ನಲ್ಲೇ ಬಾಗಲ್ಪುರ ಕ್ಷೇತ್ರ ಕಾವು ಪಡೆದುಕೊಂಡಿತ್ತು. ಆದರೆ 6ನೇ ಪಟ್ಟಿಯಲ್ಲಿ ರಾಜಸ್ಥಾನದ 4 ಹಾಗೂ ತಮಿಳುನಾಡಿನ 1 ಕ್ಷೇತ್ರಕ್ಕೆ ಮಾತ್ರ ಟಿಕೆಟ್ ಘೋಷಣೆ ಮಾಡಲಾಗಿದೆ.  

ಆಂಧ್ರ ಸಿಎಂ ರೇವಂತ್ ರೆಡ್ಡಿ ಆಪ್ತರ ಫೋನ್‌ ಕದ್ದಾಲಿಕೆ: ಮತ್ತಿಬ್ಬರು ಪೊಲೀಸ್ ಅಧಿಕಾರಿಗಳು ಅರೆಸ್ಟ್!
 

click me!