
ನವದೆಹಲಿ (ಸೆ.23) ಬಿಜೆಪಿ ಹಲವು ಬದಲಾವಣೆಗಳಾಗುತ್ತಿದೆ. ನಿತಿನ್ ನಬಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಜವಾಬ್ದಾರಿ ವಹಿಸಿಕೊಂಡ ಬಳಿಕ ಹಲವು ತಂಡಗಳನ್ನು ಬದಲಾಯಿಸಿದೆ. ಇತ್ತೀಚೆಗೆ ಬಿಜೆಪಿ ಸೋಶಿಯಲ್ ಮೀಡಿಯಾ ಸೇರಿದಂತೆ ಕೆಲ ಜವಾಬ್ದಾರಿಗಳಿಗೆ ಹೊಸ ನಾಯಕರಿಗೆ ಜವಾಬ್ದಾರಿ ನೀಡಲಾಗಿದೆ. ಇದರ ಬೆನ್ನಲ್ಲೇ ಇದೀಗ ರಾಜ್ಯ ಉಸ್ತುವಾರಿ ಹಾಗೂ ಸಹ ಉಸ್ತುವಾರಿ ಪಟ್ಟಿ ಬಿಡುಗಡೆ ಮಾಡಲಾಗಿದೆ. 28 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಉಸ್ತುವಾರಿಗಳ ನೇಮಕ ಮಾಡಲಾಗಿದೆ.
ಕರ್ನಾಟಕದ ಬಿಜೆಪಿ ಉಸ್ತುವಾರಿ ಬದಲಾಯಿಸಲಾಗಿದೆ. ಕರ್ನಾಟಕದ ಉಸ್ತುವಾರಿ ಜವಾಬ್ದಾರಿಯನ್ನು ಹರೀಶ್ ದ್ವಿವೇದಿಗೆ ನೀಡಲಾಗಿದೆ. ಸಹ ಉಸ್ತುವಾರಿಯಾಗಿ ಕಸಂ ವೆಂಕಟೇಶ್ವರಲು ನೇಮಕ ಮಾಡಿದ್ದಾರೆ. ಉತ್ತರ ಪ್ರದೇಶ ಬಸ್ತಿ ಲೋಕಸಭಾ ಸಂಸದ ಹರೀಶ್ ದ್ವಿವೇದಿಗೆ ಮಹತ್ತರ ಜವಾಬ್ದಾರಿ ನೀಡಲಾಗಿದೆ. ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ, ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಚುನಾವಣೆ ಸೇರಿದಂತೆ ಹಲವು ಚುನಾವಣೆಗಳು ಸಮೀಪಿಸುತ್ತಿದೆ. ಹೀಗಾಗಿ ಉಸ್ತುವಾರಿ ಜವಾಬ್ದಾರಿ ಪ್ರಮುಖವಾಗಿದೆ.
ಕೇರಳ ಬಿಜೆಪಿ ಉಸ್ತುವಾರಿ ಬದಲಾಯಿಸಲಾಗಿದೆ. ಪ್ರೊ ಎಂ ನಾಗರಾಜ್‌ಗೆ ಕೇರಳ ಉಸ್ತುವಾರಿ ನೇಮಕಗೊಂಡರೆ, ಸಹ ಉಸ್ತುವಾರಿಯಾಗಿ ಎಂ ವೆಂಕಟೇಶನ್‌ಗೆ ನೀಡಲಾಗಿದೆ. ಇನ್ನು ಸ್ಮೃತಿ ಇರಾನಿಗೆ ಹರ್ಯಾಣ ರಾಜ್ಯ ಉಸ್ತುವಾರಿ ನೀಡಲಾಗಿದೆ. ಒಡಿಸ್ಸಾ ಉಸ್ತುವಾರಿ ಜವಾಬ್ದಾರಿಯನ್ನು ಡಿ ಪುರಂದೇಶ್ವರ್‌ಗೆ ನೀಡಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ