ಲಾಕ್ಡೌನ್‌ನಲ್ಲಿ ಮಸಾಲೆ ದೋಸೆ, ನಾನ್‌ ಸೋಲಿಸಿದ ಬಿರಿಯಾನಿ!

By Kannadaprabha NewsFirst Published Jul 25, 2020, 8:27 AM IST
Highlights

ಲಾಕ್ಡೌನ್‌ನಲ್ಲಿ ಮಸಾಲೆ ದೋಸೆ, ನಾನ್‌ ಸೋಲಿಸಿದ ಬಿರಿಯಾನಿ!| ಲಾಕ್ಡೌನ್‌ ವೇಳೆ ಭರ್ಜರಿ ಆಹಾರ ಖರೀದಿ

ನವದೆಹಲಿ(ಜು.25): ಕೊರೋನಾ ಲಾಕ್‌ಡೌನ್‌ನಂಥ ಸಂಕಷ್ಟದ ಅವಧಿಯಲ್ಲೂ ಬಿರಿಯಾನಿ ಆನ್‌ಲೈನ್‌ನಲ್ಲಿ ಆಹಾರ ಖರೀದಿ ಮಾಡುವ ಭಾರತೀಯರ ನೆಚ್ಚಿನ ತಿನಿಸಾಗಿತ್ತು ಎಂಬ ಕುತೂಹಲಕಾರಿ ವಿಚಾರ ಹೊರಬಿದ್ದಿದೆ. ಲಾಕ್ಡೌನ್‌ ಅವಧಿಯಲ್ಲಿ ಭಾರತೀಯರು ಯಾವ್ಯಾವ ಆಹಾರವನ್ನು ಆನ್‌ಲೈನ್‌ ಮೂಲಕ ಮನೆಗೆ ತರಿಸಿಕೊಂಡಿದ್ದಾರೆ ಎಂಬುದರ ಬಗ್ಗೆ ಆನ್‌ಲೈನ್‌ ಆಹಾರ ಪೂರೈಕೆ ತಾಣವಾದ ಸ್ವಿಗ್ಗಿ ವರದಿಯೊಂದನ್ನು ಬಿಡುಗಡೆ ಮಾಡಿದೆ.

‘ಸ್ಟೇಟ್‌ ಈಟಿಸ್ಟಿಕ್ಸ್‌ ರಿಪೋರ್ಟ್‌: ದಿ ಕ್ವಾರಂಟೈನ್‌ ಎಡಿಷನ್‌’ ವರದಿ ಪ್ರಕಾರ, ಕಳೆದ 4 ವರ್ಷಗಳಿಂದಲೂ ಅತಿಹೆಚ್ಚು ಆಹಾರ ತರಿಸಿಕೊಂಡ ಪಟ್ಟಿಯಲ್ಲಿ ಬಿರಿಯಾನಿ ಅಗ್ರ ಸ್ಥಾನ ಪಡೆದುಕೊಂಡಿದೆ.

ಮುಸ್ಲಿಮರಿಗೆ ಚಿಕನ್ ಬಿರಿಯಾನಿ ಹಂಚಿದ ನಗರಸಭೆ ಮಾಜಿ ಅಧ್ಯಕ್ಷ

ಲಾಕ್ಡೌನ್‌ ಅವಧಿಯಲ್ಲಿ ಒಟ್ಟು 5.5 ಲಕ್ಷ ಬಾರಿ ಬಿರಿಯಾನಿ ಖರೀದಿಸಲಾಗಿತ್ತು. ನಂತರದ ಸ್ಥಾನದಲ್ಲಿ ಬಟರ್‌ ನಾನ್‌ (335,185), ಮಸಾಲ ದೋಸೆ (3,31,423) ಚಾಕೋ ಲಾವಾ ಕೇಕ್‌ (1,29,000) ಗುಲಾಬ್‌ ಜಾಮೂನ್‌ (84,558), ಬಟರ್‌ ಸ್ಕಾಚ್‌ ಮುಸ್ಸೆ ಕೇಕ್‌ (27,3170) ಇದ್ದವು ಎಂದು ವರದಿ ಹೇಳಿದೆ.ತಿಳಿಸಲಾಗಿದೆ.

ಅಲ್ಲದೆ, ಹೆಚ್ಚು ಮಂದಿ ಗುಂಪಾಗಿ ಸೇರಲು ಅವಕಾಶ ಇರಲಿಲ್ಲವಾದ್ದರಿಂದ, ಬತ್‌ರ್‍ಡೆ ಪಾರ್ಟಿಗಳು ಮತ್ತು ಕೇಕ್‌ ಕಟ್ಟಿಂಗ್‌ಗಳು ಆನ್‌ಲೈನ್‌ ವೇದಿಕೆಯಲ್ಲೇ ನಡೆದಿದ್ದವು. ಒಟ್ಟಾರೆ 1.20 ಲಕ್ಷಕ್ಕೂ ಹೆಚ್ಚು ಕೇಕ್‌ಗಳು ಈ ಅವಧಿಯಲ್ಲಿ ಗ್ರಾಹಕರಿಗೆ ಪೂರೈಸಲಾಗಿತು ಎಂದು ಕಂಪನಿ ಹೇಳಿದೆ.

click me!