
ಪುಣೆ/ ಮುಂಬೈ (ಜು.24) ಎಲ್ಲರೂ ಕಣ್ಣು ಬಿಟ್ಟು ನೋಡುವಂತೆ ಸಮರ ಕಲೆ ಪ್ರದರ್ಶನ ಮಾಡಿದ ಪುಣೆಯ ಅಜ್ಜಿ ಸದ್ಯ ಸೋಶಿಯಲ್ ಮೀಡಿಯಾದ ಸೂಪರ್ ಸ್ಟಾರ್. ಮಹಾರಾಷ್ಟ್ರದ ಪುಣೆ ಮೂಲದ ಶಾಂತಾಬಾಯಿ ಪವಾರ್ ಎಂಬ 85 ವರ್ಷದ ಅಜ್ಜಿ ರಸ್ತೆಗಳಿಂದು 'ಲಾಠಿಕಾಠಿ' ಸಮರ ಕಲೆ ಪ್ರದರ್ಶಿಸುತ್ತಿದ್ದ ದೃಶ್ಯ ವೈರಲ್ ಆಗಿದೆ.
ಅಜ್ಜಿಯ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗುತ್ತಿದ್ದಂತೆ ಮುಂದಕ್ಕೆ ಬಂದ ನಟ ರಿತೇಶ್ ದೇಶ್ ಮುಖ್ ಈ ಅಜ್ಜಿಯ ಬಗ್ಗೆ ಹೆಚ್ಚಿನ ಯಾರಾದರೂ ತಿಳಿಸಿಕೊಡಿ ಎಂದು ಕೇಳಿದ್ದರು.
ಪ್ರತಿಕ್ರಿಯೆ ನೀಡಿದ ಟ್ವಿಟರ್ ಐಶ್ವರ್ಯ ಕಾಳೆ ಎಂಬುವರು, ಇದು ಪುಣೆ ಸಮೀಪದ ಸಳುಂಖೆ ವಿಹಾರ್ ರಸ್ತೆಯಲ್ಲಿ ಮಾಡಿದ ವಿಡಿಯೋ, ಶಾಂತಾ ಪವಾರ್ ಹಡಸ್ಪುರ ನಿವಾಸಿ, ಇಂಥ ಲಾಕ್ ಡೌನ್ ಸಮಯದಲ್ಲಿಯೂ ಇತರರಿಗೆ ಸ್ಫೂರ್ತಿಯಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಸುದ್ದಿ ಸಂಸ್ಥೆಯೊಂದು ಸಹ ಶಾಂತಾ ಅವರ ಸಂದರ್ಶನ ಮಾಡಿದೆ.
ಇತ್ತ ಶಾಂತಾಬಾಯಿ ಅವರ ವಿಡಿಯೋ ವೈರಲ್ ಆಗುತ್ತಲೇ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಟ ಸೋನು ಸೂದ್ ಅವರು, ನನಗೆ ದಯವಿಟ್ಟು ಈ ಅಜ್ಜಿ ವಿವರ ನೀಡಿ. ನಾನು ಇವರೊಂದಿಗೆ ನಮ್ಮ ದೇಶದ ಹೆಣ್ಣುಮಕ್ಕಳಿಗಾಗಿ ಸ್ವರಕ್ಷಣೆ ತಂತ್ರಗಳ ತರಬೇತಿ ಶಾಲೆ ಆರಂಭಿಸಬೇಕು ಎಂದುಕೊಂಡಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ