ಎಲ್ಲ ದಾಖಲೆಗಳಿಗೂ ಜನನ ಪ್ರಮಾಣಪತ್ರವೇ, ವಿವಾಹ ನೋಂದಣಿಗೂ ಕೂಡ, ಮುಂದಿನ ತಿಂಗಳಿಂದ ದೇಶದಾದ್ಯಂತ ಜಾರಿ

By Kannadaprabha News  |  First Published Sep 15, 2023, 9:50 AM IST

 ಜನನ ಪ್ರಮಾಣಪತ್ರ ನೀಡಿ ಯಾವುದೇ ದಾಖಲೆ ಪಡೆಯಬಹುದು. ಅ.1ರಿಂದ ದೇಶಾದ್ಯಂತ ಜಾರಿ.


ನವದೆಹಲಿ: ಶೈಕ್ಷಣಿಕ ಸಂಸ್ಥೆಗಳ ಪ್ರವೇಶ, ವಾಹನ ಚಾಲನಾ ಪರವಾನಗಿ, ಮತದಾರರ ಗುರುತಿನ ಚೀಟಿ, ಆಧಾರ್‌ ಸಂಖ್ಯೆ, ವಿವಾಹ ನೋಂದಣಿ ಮೊದಲಾದ ವಿಷಯಗಳ ವೇಳೆ ಜನನ ಪ್ರಮಾಣಪತ್ರವನ್ನೇ ಮೂಲ ದಾಖಲೆಯನ್ನಾಗಿ ಬಳಸಲು ಅವಕಾಶ ನಿಡುವ ನಿಯಮ ಅ.1ರಿಂದ ದೇಶಾದ್ಯಂತ ಜಾರಿಗೆ ಬರಲಿದೆ.

ಜನನ ಮತ್ತು ಮರಣ (ತಿದ್ದುಪಡಿ) ಮಸೂದೆಗೆ ಸಂಸತ್ತು ಕಳೆದ ತಿಂಗಳು ಅನನುಮೋದನೆ ನೀಡಿತ್ತು. ಈಗ ಇದರ ಜಾರಿ ದಿನಾಂಕ ನಿಗದಿ ಆಗಿದೆ. ಜನನ ಪ್ರಮಾಣಪತ್ರ ನೀಡಿ ಯಾವುದೇ ಈ ಮೇಲ್ಕಂಡ ಯಾವುದೇ ದಾಖಲೆ ಪಡೆಯಬಹುದಾಗಿದೆ.

Tap to resize

Latest Videos

ಇದು ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದಲ್ಲಿ ನೊಂದಾಯಿತ ಜನನ ಮತ್ತು ಮರಣ ದತ್ತಾಂಶ ಸಂಗ್ರಹಕ್ಕೆ ಅವಕಾಶ ಕಲ್ಪಿಸಲಿದೆ. ಸಾರ್ವಜನಿಕ ಸೇವೆ, ಸಾಮಾಜಿಕ ಲಾಭಗಳನ್ನು ಪಾರದರ್ಶಕ ಮತ್ತು ಕಾರ್ಯಕ್ಷಮತೆಯ ಮೂಲಕ ಜನರಿಗೆ ತಲುಪಿಸಲು ನೆರವಾಗಲಿದೆ ಎಂದು ಸರ್ಕಾರ ಹೇ:

ಹೊಸ ನಿಯಮವು ಡಿಜಿಟಲ್‌ ಸ್ವರೂಪದಲ್ಲೇ ಜನನ ಮತ್ತು ಮರಣ ನೋಂದಣಿ, ಡಿಜಿಟಲ್‌ ಸ್ವರೂಪದಲ್ಲೇ ಪ್ರಮಾಣ ಪತ್ರ ವಿತರಿಸುವ ಅವಕಾಶಗಳನ್ನು ಹೊಂದಿದೆ. ಇದು ಜನಸಾಮಾನ್ಯರಿಗೆ ದೊಡ್ಡ ಪ್ರಮಾಣದಲ್ಲಿ ನೆರವಾಗಲಿದೆ.

click me!