Corbevax Vaccine: 12-18 ವರ್ಷದ ಮಕ್ಕಳಿಗೆ ಕೋರ್ಬೆವ್ಯಾಕ್ಸ್‌ ಲಸಿಕೆ: ಅನುಮತಿ ಕೋರಿಕೆ

ಹೈದರಾಬಾದ್‌ನ ‘ಬಯಾಲಾಜಿಕಲ್‌-ಇ’ ಕಂಪನಿ, ತಾನು ಅಭಿವೃದ್ಧಿಪಡಿಸಿದ ದೇಶೀಯ ಕೋರ್ಬೆವ್ಯಾಕ್ಸ್‌ ಲಸಿಕೆಯನ್ನು 12ರಿಂದ 18 ವರ್ಷದ ಮಕ್ಕಳಿಗೆ ನೀಡಲು ಅನುಮತಿಸಬೇಕು ಎಂದು ಭಾರತೀಯ ಔಷಧ ನಿಯಂತ್ರಣಕ್ಕೆ ಕೋರಿಕೆ ಸಲ್ಲಿಸಿದೆ.


ನವದೆಹಲಿ (ಫೆ.14): ಹೈದರಾಬಾದ್‌ನ ‘ಬಯಾಲಾಜಿಕಲ್‌-ಇ’ (Bio E) ಕಂಪನಿ, ತಾನು ಅಭಿವೃದ್ಧಿಪಡಿಸಿದ ದೇಶೀಯ ಕೋರ್ಬೆವ್ಯಾಕ್ಸ್‌ ಲಸಿಕೆಯನ್ನು (Corbevax Vaccine) 12ರಿಂದ 18 ವರ್ಷದ ಮಕ್ಕಳಿಗೆ ನೀಡಲು ಅನುಮತಿಸಬೇಕು ಎಂದು ಭಾರತೀಯ ಔಷಧ ನಿಯಂತ್ರಣಕ್ಕೆ ಕೋರಿಕೆ ಸಲ್ಲಿಸಿದೆ.

ಈ ಸಂಬಂಧ ಭಾರತೀಯ ಪ್ರಧಾನ ಔಷಧ ನಿಯಂತ್ರಣ(ಡಿಸಿಜಿಐ)ಗೆ ಫೆ.7ರಂದು ಅರ್ಜಿ ಸಲ್ಲಿಸಿರುವ ಬಯಾಲಾಜಿಕಲ್‌-ಇ ಕಂಪನಿಯ ಗುಣಮಟ್ಟ ಮತ್ತು ನಿಯಂತ್ರಣ ವ್ಯವಹಾರಗಳ ಮುಖ್ಯಸ್ಥ ಶ್ರೀನಿವಾಸ್‌ ಕೋಸರಾಜು (Srinivas Kosaraju) ಅವರು, ಕ್ಲೀನಿಕಲ್‌ ಪರೀಕ್ಷೆ ವೇಳೆ 5ರಿಂದ 18 ವರ್ಷದೊಳಗಿನ ಮಕ್ಕಳ ಮೇಲೆ ಕೋರ್ಬೆವ್ಯಾಕ್ಸ್‌ ಲಸಿಕೆ ಪರಿಣಾಮಕಾರಿ ಎಂಬುದು ಸ್ಪಷ್ಟವಾಗಿದೆ. 

Latest Videos

ಇದೇ ಕಾರಣಕ್ಕೆ ಇದೀ ತುರ್ತು ಬಳಕೆಗೆ ಅವಕಾಶ ನೀಡಬೇಕು ಎಂದು ಕೋರಿದ್ದಾರೆ. ಕೋವಿಡ್‌ ವಿರುದ್ಧದ ಆರ್‌ಬಿಡಿ ಪ್ರೋಟಿನ್‌ ಉಪ ಯುನಿಟ್‌ನಲ್ಲಿ ಅಭಿವೃದ್ಧಿಪಡಿಸಲಾದ ಮೊದಲ ದೇಶೀಯ ಲಸಿಕೆ ಇದಾಗಿದೆ. ಕಳೆದ ವರ್ಷದ ಡಿಸೆಂಬರ್‌ 28ರಂದು 18 ವರ್ಷ ಮೇಲ್ಪಟ್ಟವರಿಗೆ ಇದನ್ನು ನೀಡಲು ಅನುಮತಿ ಸಿಕ್ಕಿತ್ತು.

Covid Vaccine: ಸರ್ಕಾರದ ಮಾನದಂಡ ಗೊಂದಲ: ಅನೇಕ ಮಕ್ಕಳಿಗೆ ಲಸಿಕೆಯೇ ಸಿಗ್ತಿಲ್ಲ

ಲಸಿಕೆ ಕೇಂದ್ರದಿಂದ ಖರೀದಿ: ಹೈದ್ರಾಬಾದ್‌ ಮೂಲದ ಬಯೋಲಾಜಿಕಲ್‌ ಇ ಕಂಪನಿ ಅಭಿವೃದ್ಧಿಪಡಿಸಿರುವ ಕೋರ್ಬೆವ್ಯಾಕ್ಸ್‌ ಕೋವಿಡ್‌ ಲಸಿಕೆಯ 5 ಕೋಟಿ ಡೋಸ್‌ಗಳನ್ನು ಖರೀದಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ತೆರಿಗೆ ಹೊರತುಪಡಿಸಿ ಪ್ರತಿ ಡೋಸ್‌ಗೆ ತಲಾ 145 ರು. ನಂತೆ 5 ಕೋಟಿ ಡೋಸ್‌ ಲಸಿಕೆ ಪೂರೈಸಲು ಕಳೆದ ತಿಂಗಳ ಅಂತ್ಯದಲ್ಲಿ ಬೇಡಿಕೆ ಸಲ್ಲಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಇದು 2 ಡೋಸ್‌ನ ಮಾದರಿಯ ಲಸಿಕೆಯಾಗಿದ್ದು, 28 ದಿನಗಳ ಅಂತರದಲ್ಲಿ ಎರಡು ಡೋಸ್‌ ನೀಡಲಾಗುವುದು. ಇದನ್ನು 2ರಿಂದ 8 ಡಿ.ಸೆ.ಉಷ್ಣಾಂಶದಲ್ಲಿ ಸಂಗ್ರಹಿಸಿ ಇಡಬಹುದಾಗಿದೆ. ಇದನ್ನು ಹಿರಿಯರಿಗೆ ನೀಡಬೇಕೋ? ಅಥವಾ ಮಕ್ಕಳಿಗೆ ನೀಡಬೇಕೋ ಎಂಬುದನ್ನು ಕೇಂದ್ರ ಸರ್ಕಾರ ಇನ್ನೂ ನಿರ್ಧರಿಸಿಲ್ಲ. ಫೆಬ್ರುವರಿ ತಿಂಗಳಲ್ಲೇ ಲಸಿಕೆ ಸರ್ಕಾರಕ್ಕೆ ಲಭ್ಯವಾಗಲಿದ್ದು, ಇದನ್ನು ಯಾರಿಗೆ ನೀಡಲಾಗುವುದು ಎಂಬುದರ ಕುರಿತು ಶೀಘ್ರವೇ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ.

ಸದ್ಯ ದೇಶದಲ್ಲಿ 60 ವರ್ಷದ ದಾಟಿದ ಎಲ್ಲಾ ವ್ಯಕ್ತಿಗಳಿಗೆ, ಆರೋಗ್ಯ ಮತ್ತು ಮುಂಚೂಣಿ ಕಾರ್ಯಕರ್ತರಿಗೆ ಮುಂಜಾಗ್ರತಾ ಡೋಸ್‌ ನೀಡಲಾಗುತ್ತಿದ್ದು, ಇದನ್ನು ಇತರೆ ವಯೋವರ್ಗಕ್ಕೂ ವಿಸ್ತರಣೆ ಮಾಡುವ ಸಾಧ್ಯತೆ ಇದೆ. ಆ ವೇಳೆ ಕೋರ್ಬೆವ್ಯಾಕ್ಸ್‌ ಲಸಿಕೆ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.

Covid-19 Vaccine: ರಾಜ್ಯದಲ್ಲಿ ಕೋವ್ಯಾಕ್ಸಿನ್‌ ಲಸಿಕೆಯ ತೀವ್ರ ಅಭಾವ: ಮಕ್ಕಳಿಗೆ ಸಮಸ್ಯೆ

ಕೋರ್ಬಿವ್ಯಾಕ್ಸ್‌ ಶೇ.90 ಪರಿಣಾಮಕಾರಿ: ಹೈದ್ರಾಬಾದ್ ಮೂಲದ ಬಯೋಲಾಜಿಕಲ್‌ ಇ ಸಂಸ್ಥೆ ಅಭಿವೃದ್ಧಿಪಡಿಸಿರುವ ಕೋವಿಡ್‌ ಲಸಿಕೆ ‘ಕೋರ್ಬಿವ್ಯಾಕ್ಸ್‌’ ಶೇ.90ರಷ್ಟು ಪರಿಣಾಮಕಾರಿಯಾಗಿರುವ ನಿರೀಕ್ಷೆ ಇದ್ದು, ಕೋವಿಡ್‌ ವಿರುದ್ಧದ ಭಾರತದ ಹೋರಾಟದಲ್ಲಿ ಭಾರೀ ಬದಲಾವಣೆಗೆ ಕಾರಣವಾಗುವ ಭರವಸೆ ಇದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಈ ಕುರಿತು ಮಹಿತಿ ನೀಡಿರುವ ಕೋವಿಡ್‌ ಕುರಿತ ಕೇಂದ್ರ ಸರ್ಕಾರದ ಕಾರ್ಯಪಡೆ ಅಧ್ಯಕ್ಷ ಎನ್‌.ಕೆ.ಅರೋರಾ, ‘ಅಮೆರಿಕದ ನೋವಾವ್ಯಾಕ್ಸ್‌ ಅಭಿವೃದ್ಧಿಪಡಿಸಿರುವ ಲಸಿಕೆ ಶೇ.90ರಷ್ಟುಪರಿಣಾಮಕಾರಿ ಎಂದು ಇತ್ತೀಚೆಗೆ ಸಾಬೀತಾಗಿದೆ. ಕೋರ್ಬಿವ್ಯಾಕ್ಸ್‌ ಕೂಡಾ ಅದೇ ರೀತಿಯಲ್ಲಿ ಅಭಿವೃದ್ಧಿಗೊಂಡ ಲಸಿಕೆಯಾಗಿದ್ದು, ಶೀಘ್ರವೇ 3ನೇ ಹಂತದ ಪ್ರಯೋಗಕ್ಕೆ ಒಳಪಡಲಿದೆ. 

click me!