
ಪ್ರತಿ ವರ್ಷ ಐಫೋನ್ ತನ್ನ ಹೊಸ ಮಾದರಿ ಫೋನ್‌ಗಳನ್ನು ಬಿಡುಗಡೆ ಮಾಡಿದಾಗೆಲ್ಲ ಜಗತ್ತಿನಾದ್ಯಂತ ಸದ್ದು ಮಾಡುತ್ತದೆ. ಬಿಡುಗಡೆ ತಿಂಗಳ ಮೊದಲೇ ಬುಕಿಂಗ್ ಶುರುವಾಗುತ್ತವೆ. ವಾರದ ಮೊದಲೇ ಆಪಲ್ ಸ್ಟೋರ್‌ಗಳಿಗೆ ಜನ ನುಗ್ಗುತ್ತಾರೆ. ಕಿಮೀಗಟ್ಟಲೇ ಉದ್ದದ ಸಾಲಿನಲ್ಲಿ ನಿಂತು ಖರೀದಿಸುತ್ತಾರೆ. ಇದು ಶ್ರೀಮಂತರಿಗೆ ಸರಿ. ಆದರೆ ಐಫೋನ್ ಅದೆಷ್ಟು ವ್ಯಾಮೋಹ ಹುಟ್ಟಿಸಿದೆ ಎಂದರೆ ಕೆಲವರ ಬ್ಯಾಂಕ್ ಖಾತೆಯಲ್ಲಿ ಉಳಿತಾಯ ಹಣವೇ ಇಲ್ಲದಿದ್ರೂ ಸಾಲ ಮಾಡಿ ಖರೀದಿಸುತ್ತಾರೆ. ಕೆಲವರು ಕಿಡ್ನಿ ಮಾರಿ ಖರೀದಿಸಿದ್ದು, ಐಫೋನ್‌ಗಾಗಿ ಕಳ್ಳತನ ಮಾಡಿದ್ದು, ಮಾಂಗಲ್ಯವನ್ನೇ ಅಡವಿಟ್ಟು ಖರೀರಿದಿಸಿದ್ದು ಆಗಿದೆ ಅದರಂತೆ ಇಲ್ಲೊಬ್ಬ ತನ್ನ ಪತ್ನಿಗಾಗಿ ಕುಟುಂಬದ ಚಿನ್ನವನ್ನೇ ಮಾರಾಟ ಮಾಡಿ ಐಫೋನ್ iPhone 18 Pro ಖರೀದಿಸಿದ್ದು ಸದ್ಯದ ಲೇಟೆಸ್ಟ್ ಸುದ್ದಿಯಾಗಿ ವೈರಲ್ ಆಗಿದೆ.
ವ್ಯಕ್ತಿಯೊಬ್ಬ ತನ್ನ ಪತ್ನಿಗಾಗಿ iPhone 18 Pro Max ಖರೀದಿಸಲು ತಲೆತಲಾಂತರಗಳಿಂದ ಕುಟುಂಬದಲ್ಲಿ ಬಂದಿದ್ದ ಚಿನ್ನವನ್ನು ಮಾರಾಟ ಮಾಡಿರುವುದಾಗಿ ವ್ಯಕ್ತಿಯೊಬ್ಬರು ಹೇಳಿಕೊಂಡಿರುವ ವಿಡಿಯೋ ವೈರಲ್ ಆಗಿದೆ. ಉದ್ಯಮಿ ಹರ್ಷ್ ಗೋಯೆಂಕಾ ಅವರು ಈ ವಿಡಿಯೋವನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡು ವ್ಯಕ್ತಿಯ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ.
'ಕೆಲವರು ಮನೆ ಖರೀದಿಸಲು ಚಿನ್ನ ಮಾರುತ್ತಾರೆ. ಇನ್ನು ಕೆಲವರು ಮಕ್ಕಳ ಭವಿಷ್ಯಕ್ಕಾಗಿ ಚಿನ್ನವನ್ನು ಮಾರುತ್ತಾರೆ. ಆದರೆ ದೆಹಲಿಯ ಈ ವ್ಯಕ್ತಿ ತನ್ನ ಅಜ್ಜಿ ಮತ್ತು ಮುತ್ತಜ್ಜಿಯಿಂದ ತಲೆತಲಾಂತರಗಳಿಂದ ಬಂದಿದ್ದ ಕುಟುಂಬದ ಚಿನ್ನವನ್ನು ಮಾರಾಟ ಮಾಡಿ ಪತ್ನಿಗಾಗಿ iPhone 18 Pro Max ಖರೀದಿಸಿದ್ದಾರೆ' ಎಂದು ಹರ್ಷ್ ಗೋಯೆಂಕಾ ಎಕ್ಸ್‌ನಲ್ಲಿ ಬರೆದಿದ್ದಾರೆ.
ಫೋರ್ಬ್ಸ್ ಪ್ರಕಾರ, RPG ಗ್ರೂಪ್‌ನ ಅಧ್ಯಕ್ಷರಾಗಿರುವ ಹರ್ಷ್ ಗೋಯೆಂಕಾ ಅವರ ಒಟ್ಟು ಆಸ್ತಿ ಮೌಲ್ಯ 2.8 ಬಿಲಿಯನ್ ಡಾಲರ್ ಎಂದು ವರದಿಯಾಗಿದೆ. ಹರ್ಷ್ ಗೋಯೆಂಕಾ ಹಂಚಿಕೊಂಡಿರುವ ವಿಡಿಯೋದಲ್ಲಿ ವ್ಯಕ್ತಿಯೊಬ್ಬರು ತಮ್ಮ ಪೂರ್ವಜರಿಂದ ಸಾಕಷ್ಟು ಚಿನ್ನ ಬಂದಿರುವುದಾಗಿ ಹೇಳಿಕೊಂಡಿದ್ದಾರೆ. ಅದರಲ್ಲಿ ಸ್ವಲ್ಪ ಚಿನ್ನವನ್ನು ಮಾರಾಟ ಮಾಡಿ ಹೊಸ ಆ್ಯಪಲ್ ಫೋನ್ ಖರೀದಿಸಿರುವುದಾಗಿ ಅವರು ತಿಳಿಸಿದ್ದಾರೆ. ತಮ್ಮ ಪತ್ನಿಗೆ ಸರ್ಪ್ರೈಸ್ ನೀಡಲು ಈ ಫೋನ್ ಖರೀದಿಸುತ್ತಿರುವುದಾಗಿ ವ್ಯಕ್ತಿ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ. ಅಷ್ಟು ಅಲ್ಲದೆ ಆ್ಯಪಲ್‌ನ ಹೊಸ ಫೋನ್‌ಗಳ ಮಾರಾಟ ಆರಂಭವಾಗುವುದನ್ನೇ ಕಾಯುತ್ತಿದ್ದನಂತೆ.
ಹರ್ಷ್ ಗೋಯೆಂಕಾ ಅವರ ಪೋಸ್ಟ್‌ಗೆ ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಕೆಲವರು ಈ ವಿಚಾರವನ್ನು ತಮಾಷೆಯಾಗಿ ತೆಗೆದುಕೊಂಡರೆ, ಇನ್ನು ಕೆಲವರು ಚಿನ್ನವನ್ನು ಹೇಗೆ ಬಳಸಬೇಕು ಎಂಬುದು ಸಂಪೂರ್ಣವಾಗಿ ಆ ವ್ಯಕ್ತಿಯ ವೈಯಕ್ತಿಕ ನಿರ್ಧಾರ ಎಂದು ಹೇಳಿದ್ದಾರೆ.
'ಮುಂದಿನ ಪೀಳಿಗೆಗಾಗಿ ಚಿನ್ನವನ್ನು ಉಳಿಸಲಿ. ಪಾಪ ಅವರು ಚಿನ್ನ ಮಾರಾಟ ಮಾಡಿ ತಮ್ಮ ಪತ್ನಿಗೆ ಐಫೋನ್ ಕೊಡಿಸುವಂತಾಗಲಿ ಎಂದು ತಮಾಷೆ ಮಾಡಿದ್ದಾರೆ. ಮತ್ತೊಬ್ಬ 'ಇದೊಂದು ನಾಚಿಕೆಗೇಡು, ಶೇಮ್, ನಮ್ಮ ದೇಶದ ಜನರಿಗೆ ಏನಾಗಿದೆ? ನಮ್ಮ ಆದಾಯಕ್ಕೆ ಮೀರಿದ್ದು, ಕೈಗೆಟುಕದ ವಸ್ತುಗಳನ್ನು ಖರೀದಿಸಬಾರದು ಎಂಬ ಸಾಮಾನ್ಯ ತಿಳಿವಳಿಕೆ ಇಲ್ಲದಾಗಿದೆ' ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನೊಬ್ಬ, 'ಚಿನ್ನವನ್ನೇ ಮಾರಾಟ ಮಾಡಿ iPhone 18 Pro Max ಖರೀದಿಸಿದ್ದಾನೆ ಈ ಫೋನ್‌ನಲ್ಲಿ ಅಂತಹಹದ್ದೇನಿದೆ ವಿಶೇಷ? ಹೊಸ ಆವೃತ್ತಿ ಬಿಡುಗಡೆಯಾದ ತಕ್ಷಣ ಜನರು ತಮ್ಮ ಹಣವನ್ನು ಏಕೆ ಹೀಗೆ ಖರ್ಚು ಮಾಡುತ್ತಾರೆ ಎಂಬುದು ಅರ್ಥವಾಗುತ್ತಿಲ್ಲ' ಎಂದು ಹೇಳಿದ್ದಾರೆ. 'ಇದೆಲ್ಲ ಶೋಕಿ, ತೋರಿಕೆಯ ವ್ಯಾಮೋಹಕ್ಕೆ ಕೊನೆಯೇ ಇಲ್ಲ' ಎಂದು ಪ್ರತಿಕ್ರಿಯಿಸಿದ್ದಾರೆ.
ಆ್ಯಪಲ್ ಪ್ರಕಾರ, iPhone 18 Proನಲ್ಲಿ 48MP Fusion Main ಕ್ಯಾಮೆರಾ ನೀಡಲಾಗಿದೆ. ಇದರಲ್ಲಿ ವೇರಿಯಬಲ್ ಅಪರ್ಚರ್ ಸೌಲಭ್ಯವಿದ್ದು, ಕಡಿಮೆ ಬೆಳಕಿನಲ್ಲಿಯೂ ಉತ್ತಮ ಫೋಟೋ ಮತ್ತು ವಿಡಿಯೋಗಳನ್ನು ಸೆರೆಹಿಡಿಯಬಹುದು. ಜೊತೆಗೆ ಉತ್ತಮ ಡೆಪ್ತ್ ಆಫ್ ಫೀಲ್ಡ್ ಸೌಲಭ್ಯವಿದೆ. ಇದಲ್ಲದೆ, ಐಫೋನ್‌ಗಳಲ್ಲೇ ಅತ್ಯಂತ ದೀರ್ಘ ಬ್ಯಾಟರಿ ಬ್ಯಾಕಪ್ ನೀಡುವ ಫೋನ್ ಇದಾಗಿದೆ ಎಂದು ಆ್ಯಪಲ್ ಹೇಳಿಕೊಂಡಿದೆ'
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ