ಬಿಲ್ಕಿಸ್‌ ಬಾನು ಪ್ರಕರಣ, ಯಾವ ಆಧಾರದಲ್ಲಿ ರೇಪಿಸ್ಟ್‌ಗಳಿಗೆ ಕ್ಷಮೆ : ಸುಪ್ರೀಂಕೋರ್ಟ್ ಪ್ರಶ್ನೆ

Published : Apr 19, 2023, 09:06 AM IST
ಬಿಲ್ಕಿಸ್‌ ಬಾನು ಪ್ರಕರಣ, ಯಾವ ಆಧಾರದಲ್ಲಿ ರೇಪಿಸ್ಟ್‌ಗಳಿಗೆ ಕ್ಷಮೆ : ಸುಪ್ರೀಂಕೋರ್ಟ್ ಪ್ರಶ್ನೆ

ಸಾರಾಂಶ

ಬಿಲ್ಕಿಸ್‌ ಬಾನು ಪ್ರಕರಣದ 11 ಅಪರಾಧಿಗಳಿಗೆ ಕ್ಷಮಾದಾನ ನೀಡಿರುವ ಕುರಿತ ದಾಖಲೆ ಒದಗಿಸುವಂತೆ ಸೂಚಿಸಿರುವ ಸುಪ್ರೀಂ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗುವುದು ಎಂದು ಗುಜರಾತ್‌ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ತಿಳಿಸಿವೆ.

ನವದೆಹಲಿ: ಬಿಲ್ಕಿಸ್‌ ಬಾನು ಪ್ರಕರಣದ 11 ಅಪರಾಧಿಗಳಿಗೆ ಕ್ಷಮಾದಾನ ನೀಡಿರುವ ಕುರಿತ ದಾಖಲೆ ಒದಗಿಸುವಂತೆ ಸೂಚಿಸಿರುವ ಸುಪ್ರೀಂ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗುವುದು ಎಂದು ಗುಜರಾತ್‌ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ತಿಳಿಸಿವೆ. ಆದರೆ ಈ ನಡೆಯನ್ನು ನ್ಯಾ. ಕೆ.ಎಂ ಜೋಸೆಫ್‌ ಹಾಗೂ ನ್ಯಾ ಬಿ.ವಿ ನಾಗರತ್ನ ಅವರ ಪೀಠವು ತೀವ್ರವಾಗಿ ಖಂಡಿಸಿದೆ.

ಇದೊಂದು ಗಂಭೀರ ಪ್ರಕರಣ. ಓರ್ವ ಗರ್ಭಿಣಿ ಮೇಲೆ ಸಾಮೂಹಿಕ ಆತ್ಯಾಚಾರ ಎಸಗಿದ್ದಲ್ಲದೇ ಆಕೆಯ 7 ಜನ ಕುಟುಂಬಸ್ಥರನ್ನು ಹತ್ಯೆ ಮಾಡಲಾಗಿದೆ. ಇದನ್ನು ಸಾಮಾನ್ಯ ಕೊಲೆ ಪ್ರಕರಣ ರೀತಿ ಪರಿಗಣಿಸಬೇಡಿ. ಅದೊಂದು ಹತ್ಯಾಕಾಂಡ. ಇಂದು ಬಿಲ್ಕಿಸ್‌, ನಾಳೆ ನೀವು, ನಾವು ಅಥವಾ ಯಾರೇ ಆಗಿರಬಹುದು. ಈ ಅಪರಾಧಿಗಳಿಗೆ ಕ್ಷಮಾದಾನ ನೀಡಿರುವ ಕಾರಣಗಳ ಎಲ್ಲ ದಾಖಲೆಗಳನ್ನು ಒದಗಿಸದೇ ಇದ್ದಲ್ಲಿ ನಾವು ನಮ್ಮದೇ ಆದ ತೀರ್ಮಾನವನ್ನು ತೆಗೆದುಕೊಳ್ಳುತ್ತೇವೆ’ ಎಂದು ಸರ್ಕಾರಗಳನ್ನು ಎಚ್ಚರಿಸಿದೆ.

Gujarat Riots: ಬಿಲ್ಕಿಸ್‌ ಬಾನೋ ಅರ್ಜಿ ವಜಾ ಮಾಡಿದ ಸುಪ್ರೀಂ ಕೋರ್ಟ್‌

ಅಪರಾಧಿಗಳಿಗೆ ಕ್ಷಮಾದಾನ (amnesty) ಏಕೆ ನೀಡಲಾಗಿದೆ ಹಾಗೂ ಯಾವ ಕ್ರಮಗಳನ್ನು, ಮಾನದಂಡಗಳನ್ನು ಅನುಸರಿಸಲಾಗಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಮಗೆ ಒದಗಿಸುವಂತೆ ಸರ್ಕಾರಗಳಿಗೆ ಮಾ.27 ರಂದು ಸುಪ್ರೀಂ ಸೂಚಿಸಿತ್ತು. ಆದರೆ ತಮಗೆ ಕ್ಷಮಾದಾನ ನೀಡುವ ಅಧಿಕಾರವಿದೆಯಾದ್ದರಿಂದ ಯಾವುದೇ ದಾಖಲೆಗಳನ್ನು ಒದಗಿಸಲ್ಲ ಹಾಗೂ ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುತ್ತೇವೆ ಎಂದು ಸರ್ಕಾರಗಳು ತಿಳಿಸಿವೆ. ಹೀಗಾಗಿ ಸರ್ಕಾರಗಳನ್ನು ಸುಪ್ರೀಂ (Supreme court) ತೀವ್ರ ತರಾಟೆ ತೆಗೆದುಕೊಂಡಿದೆ.

ಗೋಧ್ರಾ ಹತ್ಯಾಕಾಂಡದ (Godhra massacre) ಬಳಿಕ ನಡೆದ ಗಲಭೆಯಲ್ಲಿ 5 ತಿಂಗಳ ಗರ್ಭಿಣಿಯಾಗಿದ್ದ ಬಿಲ್ಕಿಸ್‌ ಬಾನು ಮೇಲೆ ಅತ್ಯಾಚಾರ ಎಸಗಿ ಆಕೆಯ 3 ವರ್ಷದ ಮಗಳು ಸೇರಿದಂತೆ 7 ಕುಟುಂಬ ಸದಸ್ಯರನ್ನು ಹತ್ಯೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಜೈಲು ಸೇರಿದ್ದ 11 ಜನ ಅಪರಾಧಿಗಳಿಗೆ ಸರ್ಕಾರಗಳು ಕ್ಷಮಾದಾನ ನೀಡಿ, ಶಿಕ್ಷೆಯನ್ನು ರದ್ದುಗೊಳಿಸಿ ಜೈಲಿನಿಂದ ಬಿಡುಗಡೆ ಮಾಡಿದ್ದವು. ಆದರೆ ಅಕಾಲಿಕ ಬಿಡುಗಡೆಯ ಸರ್ಕಾರದ ಕ್ರಮ ಪ್ರಶ್ನಿಸಿ ಬಿಲ್ಕಿಸ್‌ (Bilkis Banu) ಸುಪ್ರೀಂ ಮೆಟ್ಟಿಲೇರಿದ್ದಳು.

"ಅವರು ಅತ್ಯಾಚಾರಿಗಳ ಜೊತೆಗಿದ್ದಾರೆ": Bilkis Bano ಅತ್ಯಾಚಾರಿಗಳ ಬಿಡುಗಡೆ, ಮೋದಿ ಟೀಕಿಸಿದ ರಾಹುಲ್‌

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮೆಹಬೂಬಾ...ಹಾಡಿಗೆ ನೃತ್ಯದ ವೇಳೆ ಗೋವಾ ಪಬ್‌ ದುರಂತ!
₹500 ಕೋಟಿ ಕೊಟ್ರೆ ಕಾಂಗ್ರೆಸ್‌ನಲ್ಲಿ ಸಿಎಂ ಕುರ್ಚಿ : ಸಿಧು ಪತ್ನಿ ಆರೋಪ