ನಿರಂತರ ಪರಿಶ್ರಮದಿಂದ ಸಾಧನೆ ಶಿಖರ/ ದಿನಗೂಲಿಯಿಂದ ಆರ್ಮಿ ಆಫಿಸರ್ ಆದ ಕತೆ/ ಮಗುವನ್ನು ಮೊದಲು ಸಾರಿ ಎತ್ತಿ ಮುದ್ದಾಡಿದ ಆಫಿಸರ್/ ಬಿಹಾರದ ಸಿಪಾಯಿ ಅಧಿಕಾರಿಯಾದ ಕತೆ
ಪಾಟ್ನಾ( ಡಿ. 13) ಇದೊಂದು ಸ್ಫೂರ್ತಿದಾಯಕ ಕತೆ. ಒರಿಸ್ಸಾದ ಕಾರ್ಖಾನೆಯೊಂದರಲ್ಲಿ ದಿನಕ್ಕೆ 50 ರೂ. ಕೂಲಿಗೆ ದುಡಿಯುತ್ತಿದ್ದ ವ್ಯಕ್ತಿ ಭಾರತೀಯ ಸೇನಾಧೀಕಾರಿಯಾದ ಕತೆ. ಭಾರತೀಯ ಮಿಲಿಟರಿ ಅಕಾಡೆಮಿಯಿಂದ ಪದವಿ ಪಡೆದ ನೈಜ ಕತೆ. ನಿರಂತರ ಪರಿಶ್ರಮ ಮತ್ತು ಛಲದ ಸಾಹಸಿ 28 ವರ್ಷದ ಬಿಹಾರ ಅರಾದ ಸುಂದರ್‌ಪುರ ಬಾರ್ಜಾ ಗ್ರಾಮದ ಬಾಲ್ಬಂಕಾ ತಿವಾರಿ ಅವರ ಜೀವನ ಕತೆ.
ಶನಿವಾರ ತಿವಾರಿ ಮಟ್ಟಿಗೆ ವಿಶೇಷ ದಿನ. 325 ಇತರ ಭಾರತೀಯ ಕೆಡೆಟ್‌ಗಳೊಂದಿಗೆ ಪರೇಡ್ ಮುಗಿಸಿ ತಮ್ಮ ಮೂರು ತಿಂಗಳ ಮಗಳನ್ನು ಮೊದಲ ಸಾರಿ ನೋಡುತ್ತಾರೆ.
undefined
ಸೇನಾ ಸಮವಸ್ತ್ರವನ್ನು ಹೆಮ್ಮೆಯಿಂದ ಧರಿಸಿ ಮಾತನಾಡಿದ ತಿವಾರಿ, ಇಂಥ ದಿನದ ಹಿಂದೆ ತುಂಬಾ ಕಷ್ಟವಿದೆ. ಕಾರ್ಖಾನೆ ಒಂದರಲ್ಲಿ ದಿನಗೂಲಿಯಾಗಿದ್ದೆ.. ಅಲ್ಲಿಂದ ಮಕ್ಕಳಿಗೆ ಟ್ಯೂಷನ್ ನೀಡಲು ಆರಂಭಿಸಿದೆ ಎಂದು ಹಳೆಯ ದಿನಗಳನ್ನು ಮೆಲುಕು ಹಾಕಿದರು.
ಸೇನೆಯ ಮೂರು ವಿಭಾಗದಲ್ಲೂ ಸೇವೆ ಸಲ್ಲಿಸಿದ ಯೋಧ
ನನ್ನ ಕುಟುಂಬದ ಆರ್ಥಿಕ ಸ್ಥಿತಿ ಅಷ್ಟೊಂದು ಉತ್ತಮವಾಗಿಲ್ಲ. ನನ್ನ ತಂದೆ ಒಬ್ಬ ಕೃಷಿಕರು. ನಾವು ಅವಿಭಕ್ತ. ಇಬ್ಬರು ಸಹೋದರಿಯರು ಮತ್ತು ನಾನೊಬ್ಬ ಮಗ. ನನಗೆ ಬೇರೆ ಆಯ್ಕೆಯೇ ಅಂದಿನ ದಿನದಲ್ಲಿ ಇರಲಿಲ್ಲ. ಹತ್ತನೆ ತರಗತಿ ನಂತರ ಕೆಲಸ ಮಾಡುವುದು ಅನಿವಾರ್ಯವಾಗಿತ್ತು.
ಹತ್ತನೆ ತರಗತಿ ನಂತರ ನಾನು 2008 ರಲ್ಲಿ ಒಡಿಶಾದ ರೂರ್ಕೆಲಾಕ್ಕೆ ಹೋದೆ. ಅಲ್ಲಿ, ನಾನು ಮೊದಲು ಕಬ್ಬಿಣದ ಫಿಟ್ಟಿಂಗ್ ಕಾರ್ಖಾನೆಯಲ್ಲಿ ಕೆಲವು ತಿಂಗಳು ಕೆಲಸ ಮಾಡಿದ್ದೇನೆ, ನಂತರ ಫ್ಯಾಕ್ಟರಿ ಒಂದರಲ್ಲಿ ದಿನಕ್ಕೆ 50 ರೂ ಸಂಪಾದಿಸುತ್ತ 12ನೇ ತರಗತಿ ಮುಗಿಸಿದೆ.
ನನ್ನ ಹೈಸ್ಕೂಲ್ ದಿನಗಳು ಕಳೆದ ನಂತರ ಒಂದು ಕಡೆ ಟ್ಯೂಷನ್ ಕ್ಲಾಸ್ ಸಹ ಶುರುಮಾಡಿಕೊಂಡಿದ್ದೆ. ನನ್ನ ಕುಟುಂಬಕ್ಕೂ ಹಣ ಕಳಿಸಬೇಕಾದ ಜವಾಬ್ದಾರಿ ಇತ್ತು. ಇದರ ನಡುವೆ ಸೇನಾ ನೇಮಕಾತಿ ವಿಚಾರವನ್ನು ನನ್ನ ಚಿಕ್ಕಪ್ಪ ತಿಳಿಸಿದ್ದರು.
ನನ್ನ ಚಿಕ್ಕಪ್ಪ ಸೇನೆಯಲ್ಲಿ ಯೋಧರಾಗಿದ್ದವರು. ದೇಶ ಸೇವೆ ಮಾಡಬೇಕು ಮತ್ತು ಸಮಾಜದಲ್ಲಿ ಒಂದು ಉತ್ತಮ ಸ್ಥಾನ ಗಳಿಸಬೇಕು ಎಂಬ ಉದ್ದೇಶಕ್ಕೆ ಸೇನೆ ಸೇರುವ ನಿರ್ಧಾರ ಮಾಡಿದ್ದೆ. ಎರಡನೇ ಸಾರಿಯ ಪರೀಕ್ಷೆಯಲ್ಲಿ ನಾನು ಉತ್ತೀರ್ಣನಾಗಿ ಸೇನೆಗೆ ಸಿಪಾಯಿಯಾಗಿ ಸೇರಿದೆ. ಭೋಪಾಲ್ ನಲ್ಲಿ(2012) ನನಗೆ ಪೋಸ್ಟಿಂಗ್ ನೀಡಲಾಯಿತು.
ಸೇನೆಯಲ್ಲಿ ಇದ್ದುಕೊಂಡೆ ಮೇಲಿನ ಹುದ್ದೆ ಸಂಪಾದಿಸಬಹುದು ಎಂಬುದು ಗೊತ್ತಾಯಿತು. ಆರ್ಮಿ ಕ್ರೆಡಿಟ್ ಕಾಲೇಜು(2017) ಸೇರಿಕೊಂಡು ಅಲ್ಲಿಯೂ ಉತ್ತೀರ್ಣನಾದೆ. ಒಂದಾದ ಮೇಲೊಂದರಂತೆ ಸವಾಲು ಎದುರಿಸಿ ಇಂದು ಆರ್ಮಿ ಆಫಿಸರ್ ಆಗಿ ನಿಂತಿದ್ದೇನೆ.
ತಿವಾರಿಯವರ ಸಂಭ್ರಮವನ್ನು ಹೆಚ್ಚು ಮಾಡಿದ್ದು ಅವರ ಪುಟ್ಟ ಕಂದ. ಸೇನೆ ಮತ್ತೆ ಸೇರುವ ಮುನ್ನ ಕೆಲ ಕಾಲ ಇವರೊಂದಿಗೆ ಕಳಿಯುವನಿದ್ದೇನೆ ಎಂದು ಸಂತಸ ಹಂಚಿಕೊಂಡರು.
ಕೊರೋನಾ ಕಾರಣಕ್ಕೆ ಕುಟುಂಬದ ಎರಡು ಜನರಿಗೆ ಮಾತ್ರ ಪರೇಡ್ ನೋಡಲು ಅವಕಾಶ ಮಾಡಿಕೊಡಲಾಗಿತ್ತು. ಒಟ್ಟಿನಲ್ಲಿ ಸಾಧನೆಯ ಶಿಖರದತ್ತ ಸಾಗುತ್ತಿರುವ ತಿವಾರಿ ಅವರಿಗೆ ನಮ್ಮ ಕಡೆಯಿಂದಲೂ ಗುಡ್ ಲಕ್!