
ನವದೆಹಲಿ (ಫೆ.13): ಗಂಡನ ಅತಿಯಾದ ಮದ್ಯಪಾನದ ಚಟದಿಂದ ಬೇಸತ್ತಿದ್ದ ಪತ್ನಿ, ಆತನ ಸಾಲ ವಸೂಲಿಗೆ ಬರುತ್ತಿದ್ದ ಸಾಲ ವಸೂಲಾತಿ ಯುವಕನನ್ನೇ ಪ್ರೀತಿಸಿ ಮದುವೆಯಾಗಿರುವ ಘಟನೆ ನಡೆದಿದೆ. ಅತಿಯಾದ ಸಾಲ ಮಾಡಿ ಕೊಂಡಿದ್ದ ವ್ಯಕ್ತಿಯ ಹಣವನ್ನು ರಿಕವರಿ ಮಾಡಲು ಯುವಕ ಮನೆಗೆ ಬರುತ್ತಿದ್ದ ವೇಳೆ ಅವರಿಬ್ಬರ ನಡುವೆ ರಹಸ್ಯ ಸಂಬಂಧ ಬೆಳೆದಿದೆ. ತಿಂಗಳುಗಳ ಕಾಲ ಇದನ್ನು ರಹಸ್ಯವಾಗಿಯೇ ಇರಿಸಿಕೊಂಡಿದ್ದ ಜೋಡಿ ಮಂಗಳವಾರ ವೈವಾಹಿಕ ಜೀವನಕ್ಕೆ ಕಾಲಿಟ್ಟಿದೆ. ಇಂದ್ರಕುಮಾರಿ ಎನ್ನುವ ಯುವತಿ 2022ರಲ್ಲಿ ಜಮುಯಿ ಜಿಲ್ಲೆಯ ನಕುಲ್ ಶರ್ಮ ಹೆಸರಿನ ಯುವಕನೊಂದಿಗೆ ವಿವಾಹವಾಗಿದ್ದರು. ನಕುಲ್ ಶರ್ಮ ಅತಿಯಾಗಿ ಕುಡಿಯುತ್ತಿದ್ದ ಹಾಗೂ ಪ್ರತಿದಿನ ಪತ್ನಿಗೆ ಅಶ್ಲೀಲ ಶಬ್ದಗಳಲ್ಲಿ ನಿಂದಿಸುತ್ತಿದ್ದ. ಮಾನಸಿಕ ಹಾಗೂ ದೈಹಿಕವಾಗಿ ಆಗುತ್ತಿದ್ದ ನಿಂದನೆಗಳಿಂದ ಬೇಸತ್ತು, ಆಕೆ ಈ ಸಂಬಂಧವನ್ನೇ ಕೊನೆ ಮಾಡಲು ನಿರ್ಧಾರ ಮಾಡಿದ್ದಳು ಎನ್ನಲಾಗಿದೆ.
ಈ ನಡುವೆ ಇಂದ್ರ ಕುಮಾರಿಗೆ ಪವನ್ ಕುಮಾರ್ ಯಾದವ್ ಎನ್ನುವ ಯುವಕನ ಪರಿಚಯವಾಗಿದೆ. ಫೈನಾನ್ಸ್ ಕಂಪನಿಯಲ್ಲಿ ಆತ ಲೋನ್ ರಿಕವರಿ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದ. ಇಂದ್ರಕುಮಾರಿಯ ಮನೆಗೂ ಹಣವನ್ನು ವಸೂಲಿ ಮಾಡಲು ಬರುತ್ತಿದ್ದ. ಈ ವೇಳೆ ಇವರಿಬ್ಬರ ನಡುವೆ ಪ್ರೇಮಾಂಕುರವಾಗಿದೆ. ಆ ಬಳಿಕ ಇಬ್ಬರೂ ಒಂದು ಸ್ಥಳದಲ್ಲಿ ಭೇಟಿಯಾಗಿ ಸ್ನೇಯವನ್ನು ಅಧಿಕೃತಗೊಳಿಸಿದ್ದರು. ಬಳಿಕ ಈ ಸ್ನೇಹವೇ ಪ್ರೀತಿಯಾಗಿ ಬದಲಾಗಿತ್ತು.
ಆರಂಭದಲ್ಲಿ ಇಬ್ಬರೂ ತಮ್ಮ ಸಂಬಂಧವನ್ನು ಗೌಪ್ಯವಾಗಿಯೇ ಇರಿಸಿಕೊಂಡಿದ್ದರು. ಬಳಿಕ ಪಶ್ಚಿಮ ಬಂಗಾಳದ ಅಸಾನೋಲ್‌ಗೆ ತೆರಳಿ ಕೆಲಸ ಸಮಯ ಒಟ್ಟಿಗೆ ಕಳೆದಿದ್ದರು. ಕೆಲವು ದಿನಗಳ ಕಾಲಿ ಅಲ್ಲಿಯೇ ಇದ್ದ ಜೋಡಿ ಬಳಿಕ ಜಮುಯಿಗೆ ಆಗಮಿಸಿತ್ತು. ಫೆ.11 ರಂದು ದೇವಸ್ಥಾನದಲ್ಲಿ ಇವರಿಬ್ಬರ ವಿವಾಹ ನೆರವೇರಿದ್ದು, ವಿವಾಹ ಕಾರ್ಯಕ್ರಮಕ್ಕೆ ಹಲವರು ಆಗಮಿಸಿದ್ದರು.
ಸೀರಿಯಲ್‌ನಲ್ಲಿ ಅತ್ತೆ-ಅಳಿಯ, ನಿಜ ಜೀವನದಲ್ಲಿ ಗಂಡ-ಹೆಂಡ್ತಿ, ಮಕ್ಕಳಿಲ್ಲ ಅನ್ನೋದೇ ಕೊರಗು!
ಪವನ್ ಕುಮಾರ್ ಯಾದವ್ ಅವರ ಕುಟುಂಬ ಈ ಮದುವೆಯನ್ನು ಒಪ್ಪಿಕೊಂಡಿದ್ದರೆ, ಇಂದ್ರಕುಮಾರಿ ಅವರ ಕುಟುಂಬ ಇದಕ್ಕೆ ವಿರೋಧ ವ್ಯಕ್ತಪಡಿಸಿದೆ. ಹಾಗಾಗಿ ಪವನ್ ಕುಮಾರ್ ಯಾದವ್ ವಿರುದ್ಧ ಎಫ್‌ಐಆರ್ ದಾಖಲು ಮಾಡಿದ್ದಾರೆ. ಆದರೆ, ಪೊಲೀಸರ ಎದುರು ಇಂದ್ರಕುಮಾರಿ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದು, ತನ್ನ ಸ್ವ ಇಚ್ಛೆಯಿಂದಲೇ ಯಾದವ್‌ನನ್ನು ವಿವಾಹವಾಗಿರುವುದಾಗಿ ತಿಳಿಸಿದ್ದಾರೆ. ಇಂದ್ರಕುಮಾರಿ ಅವರ ಕುಟುಂಬ ಪವನ್ ಕುಮಾರ್ ಯಾದವ್‌ಗೆ ಜೀವ ಬೆದರಿಕೆ ಹಾಕಿತ್ತು ಎನ್ನಲಾಗಿದೆ. ಇದಕ್ಕಾಗಿ ಅವರು ಪೊಲೀಸ್ ರಕ್ಷಣೆಯನ್ನೂ ಕೋರಿದ್ದರು.
ಜನ್ಮತಾಳಿದ ಬಳಿಕ ಮತ್ತೆ ಎಂದಾದರೂ 'ಅದನ್ನ' ನೋಡಿದ್ದೀಯಾ ಎಂದಿದ್ದ ಅಪೂರ್ವ ಮಖೀಜಾಗೂ ಪೊಲೀಸ್ ಕ್ಲಾಸ್!
ಅವರ ವಿವಾಹದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ದಂಪತಿಗಳು ವಿವಾಹ ವಿಧಿವಿಧಾನಗಳನ್ನು ನಿರ್ವಹಿಸುತ್ತಿರುವುದನ್ನು ಸೆರೆಹಿಡಿದಿದ್ದ ಆ ವಿಡಿಯೋ ತ್ವರಿತವಾಗಿ ವೈರಲ್ ಆಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ