ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ನಾಲ್ವರ ಬಂಧನ: ಒಬ್ಬರಿಗೆ ಇಷ್ಟು ಚಾರ್ಜ್ ಮಾಡ್ತಿದ್ದ ಮಾಸ್ಟರ್‌ಮೈಂಡ್

By Mahmad RafikFirst Published Jun 20, 2024, 1:54 PM IST
Highlights

ಒಂದು ದಿನ ಮುಂಚಿತವಾಗಿಯೇ ಎಲ್ಲಾ ನಾಲ್ವರು ಆರೋಪಿಗಳಿಗೆ ಒಂದು ದಿನ ಮುಂಚಿತವಾಗಿ ಪ್ರಶ್ನೆ ಹಾಗೂ ಉತ್ತರ ಪತ್ರಿಕೆ ಸಿಕ್ಕಿದೆ. ಉತ್ತರಗಳನ್ನು ನೆನಪಿನಲ್ಲಿಟ್ಟುಕೊಳ್ಳಲು ಪ್ರಯತ್ನಿಸಿದ್ದಾರೆ.

ಪಾಟನಾ: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರದಲ್ಲಿ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಬಂಧಿತರಲ್ಲಿ ಮೂವರು ಅಭ್ಯರ್ಥಿಗಳಾಗಿದ್ದು, ಓರ್ವ ದಾನಪುರದ ಪುರಸಭೆಯ ಜೂನಿಯರ್ ಇಂಜಿನೀಯರ್ ಎಂದು ವರದಿಯಾಗಿದೆ. ಅನುರಾಗ್ ಯಾದವ್ , ನಿತೀಶ್ ಕುಮಾರ್, ಅಮಿತ್ ಆನಂದ್ ಇವರು ಅಭ್ಯರ್ಥಿಗಳಾಗಿದ್ರೆ, ಸಿಕಂದರ್ ಯದುವೇಂದು ಪುರಸಭೆಯ ನೌಕರನಾಗಿದ್ದಾನೆ. ಪೊಲೀಸರ ಮುಂದೆ ಬಂಧಿತರು ತಪ್ಪನ್ನು ಒಪ್ಪಿಕೊಂಡಿದ್ದ, ಅಮಿತ್ ಆನಂದ್ ಈ ಪ್ರಕರಣದ ಮಾಸ್ಟರ್‌ ಮೈಂಡ್. ಎಬಿಪಿ ಲೈವ್ ವರದಿ ಪ್ರಕಾರ, ಮಾಸ್ಟರ್‌ಮೈಂಡ್ ಅಮಿತ್ ಆನಂದ್, ಲೀಕ್ ಮಾಡಿರುವ ಪ್ರಶ್ನೆ ಪತ್ರಿಕೆ ಮತ್ತು ಉತ್ತರಗಳನ್ನು ನೀಡಲು 30 ರಿಂದ 32 ಲಕ್ಷ ರೂಪಾಯಿ ಚಾರ್ಜ್ ಮಾಡಿದ್ದನು. ಅಮಿತ್ ಆನಂದ್ ತಪ್ಪೊಪ್ಪಿಗೆ ಬೆನ್ನಲ್ಲೇ ದೇಶಾದ್ಯಂತ ಅಭ್ಯರ್ಥಿಗಳ ಆಕ್ರೋಶ ವ್ಯಕ್ತವಾಗಿದ್ದು, ಈ ಬಾರಿ ನೀಟ್ ಪರೀಕ್ಷೆ ರದ್ದುಗೊಳಿಸಬೇಕು ಎಂಬ ಕೂಗು ಕೇಳಿ ಬಂದಿದೆ.

ತಪ್ಪೊಪ್ಪಿಗೆ ಬಳಿಕ ಅಮಿತ್ ಆನಂದ್ ನಿವಾಸದ ಮೇಲೆ ದಾಳಿ ನಡೆಸಿದಾಗ, ಆತನ ಮನೆಯಲ್ಲಿ ಸುಟ್ಟ ನೀಟ್ ಪ್ರಶ್ನೆ ಮತ್ತು ಉತ್ತರ ಪತ್ರಿಕೆಗಳು ಲಭ್ಯವಾಗಿವೆ. ಆರೋಪಿ ಈ ಹಿಂದೆಯೂ ಪ್ರಶ್ನೆ ಪತ್ರಿಕೆ ಸೋರಿಕೆಯಲ್ಲಿ ತೊಡಗಿಕೊಂಡಿರೋದಾಗಿ ಒಪ್ಪಿಕೊಂಡಿದ್ದಾನೆ. ಈ ಹಿನ್ನೆಲೆ ಪೊಲೀಸರು ಇಡೀ ಪರೀಕ್ಷಾ ವ್ಯವಸ್ಥೆ ಮತ್ತು ಅಲ್ಲಿಯ ಭ್ರಷ್ಟಾಚಾರದ ಕುರಿತು ತನಿಖೆ ಆರಂಭಿಸಿದ್ದಾರೆ.

Latest Videos

ಗ್ರೇಸ್‌ ಅಂಕ ರದ್ದು ಬಳಿಕ 6 ನೀಟ್‌ ಟಾಪರ್‌ಗಳಿಗೆ ಸಂಕಷ್ಟ

ಲೀಕ್ ಪ್ರಶ್ನೆಪತ್ರಿಕೆ ಸಂಪೂರ್ಣ ಮ್ಯಾಚ್

ಬಂಧಿತ ಮತ್ತೋರ್ವ ಆರೋಪಿ ಅನುರಾಗ್ ಯಾದವ್, ಫಲಿತಾಂಶ ಅಕ್ರಮಗಳಲ್ಲಿ ಭಾಗಿಯಾಗಿದ್ದನು. ಲೀಕ್ ಆದ ಪ್ರಶ್ನೆಪತ್ರಿಕೆಯನ್ನು ವ್ಯಾಪಕವಾಗಿ ಹಂಚುವ ಪ್ರಕ್ರಿಯೆಯಲ್ಲಿ ಭಾಗಿಯಾಗಿರೋದಾಗಿ ಒಪ್ಪಿಕೊಂಡಿದ್ದಾನೆ. ಸೋರಿಕೆಯಾದ ಮತ್ತು ಪರೀಕ್ಷೆಗಳಲ್ಲಿ ನೀಡಲಾಗಿದ್ದ ಪ್ರಶ್ನೆಪತ್ರಿಕೆ ಸಂಪೂರ್ಣವಾಗಿ ಮ್ಯಾಚ್ ಆಗಿದೆ ಎಂಬ ಆಘಾತಕಾರಿ ಮಾಹಿತಿಯನ್ನು ಆರೋಪಿ ಬಿಚ್ಚಿಟ್ಟಿದ್ದಾನೆ. ಆರೋಪಿ ಹೇಳಿಕೆಯಿಂದ ಪರೀಕ್ಷಾ ಪ್ರಾಧಿಕಾರವನ್ನು ಅನುಮಾನದಿಂದ ನೋಡುವಂತಾಗಿದೆ.

ಒಂದು ದಿನ ಮುಂಚಿತವಾಗಿಯೇ ಎಲ್ಲಾ ನಾಲ್ವರು ಆರೋಪಿಗಳಿಗೆ ಒಂದು ದಿನ ಮುಂಚಿತವಾಗಿ ಪ್ರಶ್ನೆ ಹಾಗೂ ಉತ್ತರ ಪತ್ರಿಕೆ ಸಿಕ್ಕಿದೆ. ಉತ್ತರಗಳನ್ನು ನೆನಪಿನಲ್ಲಿಟ್ಟುಕೊಳ್ಳಲು ಪ್ರಯತ್ನಿಸಿದ್ದಾರೆ. ಮರುದಿನ ತಾವು ನೆನಪಿನಲ್ಲಿಟ್ಟುಕೊಂಡ ಪ್ರಶ್ನೆಗಳಿಗೆ ಮೊದಲು ಉತ್ತರಿಸಿದ್ದಾರೆ ಎಂದು ಪೊಲೀಸರು ಮುಂದೆ ಹೇಳಿಕೆಯನ್ನು ದಾಖಲಿಸಿದ್ದಾರೆ. 

ನೀಟ್‌ ಹಗರಣದಲ್ಲಿ ಬಿಹಾರ ಸಚಿವ ಭಾಗಿ? ಆರೋಪಿ ವಿದ್ಯಾರ್ಥಿಗೆ ಮಿನಿಸ್ಟರ್ ನೆರವಿನ ಸುಳಿವು ಪತ್ತೆ

ಬಿಹಾರ ಪೊಲೀಸರಿಂದ ವರದಿ ಕೇಳಿದ ಕೇಂದ್ರ ಶಿಕ್ಷಣ ಸಚಿವಾಲಯ

ಕೇಂದ್ರ ಶಿಕ್ಷಣ ಸಚಿವಾಲಯ ನೀಟ್ ಪರೀಕ್ಷೆಯಲ್ಲಿ ಅಕ್ರಮಗಳ ಸಂಬಂಧ ವಿವರವಾದ ವರದಿಯನ್ನು ನೀಡುವಂತೆ ಬಿಹಾರ ಪೊಲೀಸರಿಗೆ ನಿರ್ದೇಶನ ನೀಡಿದೆ.ಪರೀಕ್ಷೆಗಳ ಪಾವಿತ್ರ್ಯತೆ ಮತ್ತು ವಿದ್ಯಾರ್ಥಿಗಳ ಹಿತಾಸಕ್ತಿ ಕಾಪಾಡಲು ಬದ್ಧರಾಗಿದ್ದೇವೆ ಎಂದು ಸರ್ಕಾರ ಭರವಸೆ ನೀಡಿದೆ. ಮೇ 5,2024ರಂದು ನಡೆದ ನೀಟ್-ಯುಜಿ ಪರೀಕ್ಷೆಗೆ ಸುಮಾರು 24 ಲಕ್ಷ ಅಭ್ಯರ್ಥಿಗಳು ಹಾಜರಾಗಿದ್ದರು. ಜೂನ್ 14ರಂದು ಫಲಿತಾಂಶ ಪ್ರಕಟವಾಗಲಿದೆ ಎಂದು ದಿನಾಂಕ ನಿಗದಿಯಾಗಿತ್ತು. ಆದ್ರೆ ಜೂನ್ 4ರಂದೇ ಫಲಿತಾಂಶ ಪ್ರಕಟಿಸಲಾಗಿದೆ. ಮೌಲ್ಯಮಾಪನ ಬೇಗ ಮುಗಿದಿರುವ ಕಾರಣ ಮಂಚಿತವಾಗಿ ಫಲಿತಾಂಶ ಪ್ರಕಟಿಸಲಾಗಿದೆ ಎಂದು ಪರೀಕ್ಷಾ ಪ್ರಾಧಿಕಾರ ಹೇಳಿಕೊಂಡಿದೆ.

click me!