ಅಗ್ನಿವೀರ ಪಡೆಯನ್ನು ಹಿಜಡಾಗಳ ಸೇನೆ ಎಂದು ಕರೆದ ಬಿಹಾರ ಸಚಿವ

Published : Feb 24, 2023, 05:53 AM ISTUpdated : Feb 24, 2023, 05:54 AM IST
ಅಗ್ನಿವೀರ ಪಡೆಯನ್ನು ಹಿಜಡಾಗಳ ಸೇನೆ ಎಂದು ಕರೆದ ಬಿಹಾರ ಸಚಿವ

ಸಾರಾಂಶ

ಭಾರತ ಸೇನೆಗೆ ನೇಮಕ ಮಾಡಿಕೊಳ್ಳುತ್ತಿರುವ ಅಗ್ನಿವೀರರ ಪಡೆಯನ್ನು ಹಿಜಡಾಗಳ ಸೇನೆ ಎಂದು ಕರೆಯುವ ಮೂಲಕ ಬಿಹಾರ ಸಚಿವ, ಹಿರಿಯ ಆರ್‌ಜೆಡಿ ನಾಯಕ ಸುರೇಂದ್ರ ಪ್ರಸಾದ್‌ ಯಾದವ್‌ ವಿವಾದಕ್ಕೀಡಾಗಿದ್ದಾರೆ.

ಪಟನಾ: ಭಾರತ ಸೇನೆಗೆ ನೇಮಕ ಮಾಡಿಕೊಳ್ಳುತ್ತಿರುವ ಅಗ್ನಿವೀರರ ಪಡೆಯನ್ನು ಹಿಜಡಾಗಳ ಸೇನೆ ಎಂದು ಕರೆಯುವ ಮೂಲಕ ಬಿಹಾರ ಸಚಿವ, ಹಿರಿಯ ಆರ್‌ಜೆಡಿ ನಾಯಕ ಸುರೇಂದ್ರ ಪ್ರಸಾದ್‌ ಯಾದವ್‌ ವಿವಾದಕ್ಕೀಡಾಗಿದ್ದಾರೆ.

ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಸರಿಯಾಗಿ 8.5 ವರ್ಷಗಳ ಬಳಿಕ ಹಿಜಡಾಗಳ ಸೇನೆ ಹೊಂದಿದ ಪಟ್ಟಿಯಲ್ಲಿ ಭಾರತವನ್ನೂ ಸೇರಿಸಬೇಕಾಗುತ್ತದೆ. ಏಕೆಂದರೆ 8.5 ವರ್ಷಗಳ ಬಳಿಕ ದೇಶದಲ್ಲಿರುವ ಸೇನಾಧಿಕಾರಿಗಳು ನಿವೃತ್ತರಾಗುತ್ತಾರೆ. ಅಗ್ನಿವೀರರ ತರಬೇತಿ ಇನ್ನೂ ಮುಗಿದಿರುವುದಿಲ್ಲ. ಹಾಗಾಗಿ ಈ ಯೋಜನೆಯನ್ನು ಸೂಚಿಸಿದವರನ್ನು ನೇಣು ಹಾಕಬೇಕು ಎಂದು ಹೇಳಿದ್ದಾರೆ.

ಅಗ್ನಿಪಥ್ ಕುರಿತಾಗಿ ಅಜಿತ್ ದೋವಲ್ ಹೇಳಿದ ಬೆಂಕಿಯಂಥ ಮಾತುಗಳು!

ಕಳೆದ ವರ್ಷ ಜೂ.14ರಂದು ಅಗ್ನಿಪಥ ಯೋಜನೆಯನ್ನು ಘೋಷಿಸಲಾಗಿತ್ತು. 17ರಿಂದ 21 ವರ್ಷದ ಯುವಕರನ್ನು 4 ವರ್ಷಗಳ ಅವಧಿಗೆ ಸೇನೆಗೆ ಸೇರಿಸಿಕೊಳ್ಳುವ ಯೋಜನೆ ಇದಾಗಿದೆ. ಈ ಯೋಧರಿಗೆ ಅಗ್ನಿವೀರರು ಎನ್ನುತ್ತಾರೆ.

ಸೇನಾ ಯೋಧರಿಗಿಂತ ಎಷ್ಟು ಭಿನ್ನ ಅಗ್ನಿವೀರರು?

ಸಂಬಳ: ಆರ್ಮಿ VS ಅಗ್ನಿವೀರ್

ಅಗ್ನಿವೀರರು ಪಡೆಯುವ ಸಂಬಳದ ಬಗ್ಗೆ ಹೇಳುವುದಾದರೆ, ಅವರು ಸೇರ್ಪಡೆಗೊಂಡಾಗ 30 ಸಾವಿರ ರೂಪಾಯಿ ಸಂಬಳ ಪಡೆಯುತ್ತಾರೆ. ಆದರೆ ಇದರಲ್ಲಿ ಶೇ.30ರಷ್ಟು ವೇತನವನ್ನು ಸರ್ಕಾರ ಕಡಿತಗೊಳಿಸಿ ಅಗ್ನಿವೀರನ ಹೆಸರಿನಲ್ಲಿ ಮಾಡಿರುವ ಸೇವಾ ನಿಧಿಗೆ ಜಮಾ ಮಾಡುತ್ತದೆ. ಅದೇನೆಂದರೆ, ಅಗ್ನಿವೀರ್ ಕೈಗೆ ಮೊದಲ ವರ್ಷ 21 ಸಾವಿರ ರೂಪಾಯಿ ನಗದು ಸಿಗಲಿದೆ. ಮತ್ತು ಇದು ಇಡೀ ವರ್ಷಕ್ಕೆ ಅನ್ವಯಿಸುತ್ತದೆ. ವಿಶೇಷವೆಂದರೆ ಅಗ್ನಿವೀರನ ಸಂಬಳದಲ್ಲಿ ಎಷ್ಟು ಹಣವನ್ನು ಸರ್ಕಾರ ಕಡಿತಗೊಳಿಸುತ್ತದೋ ಅಷ್ಟೇ ಮೊತ್ತವನ್ನು ತನ್ನ ಪರವಾಗಿ ಅವನ ನಿಧಿಗೆ ಠೇವಣಿ ಇಡುತ್ತದೆ.

ಸೇವಾ ಅವಧಿ

ಅಗ್ನಿವೀರ್‌ಗಳಿಗೆ 4 ವರ್ಷಗಳವರೆಗೆ ಉದ್ಯೋಗವಿರುತ್ತದೆ, ಆದರೆ ಸೇನಾ ಸಿಬ್ಬಂದಿ ಕನಿಷ್ಠ 15 ವರ್ಷಗಳ ಕಾಲ ಸೇವೆ ಸಲ್ಲಿಸಿದರೆ ಮಾತ್ರ ಪಿಂಚಣಿ ಮತ್ತು ನಿವೃತ್ತಿ ಸೌಲಭ್ಯಗಳಿಗೆ ಅರ್ಹರಾಗಿರುತ್ತಾರೆ.

ಜಾತಿ, ಧರ್ಮದ ಪ್ರಮಾಣಪತ್ರ ಹಿಂದೆಯೂ ಕೇಳಿದ್ದೆವು, ಅಗ್ನಿಪಥ್‌ ಬಗ್ಗೆ ಸೇನೆಯ ಸ್ಪಷ್ಟನೆ!

ಪಿಂಚಣಿ ಮತ್ತು ನಿವೃತ್ತಿ ಪ್ರಯೋಜನಗಳು

ಸೇನಾ ಸೈನಿಕರು 15 ವರ್ಷಗಳ ಸೇವೆಯ ನಂತರ ನಿವೃತ್ತರಾದಾಗ ಪಿಂಚಣಿ ಮತ್ತು ಗ್ರಾಚ್ಯುಟಿಯ ಪ್ರಯೋಜನವನ್ನು ಪಡೆಯುತ್ತಾರೆ. ಆದರೆ ಅಗ್ನಿವೀರರು 4 ವರ್ಷಗಳ ನಂತರ ಪಿಂಚಣಿ-ಗ್ರಾಚ್ಯುಟಿಯಂತಹ ಯಾವುದೇ ಪ್ರಯೋಜನವನ್ನು ಪಡೆಯುವುದಿಲ್ಲ

ರಜಾದಿನಗಳಲ್ಲಿ ಕಡಿತ

ಅಗ್ನಿವೀರರಿಗೆ ವರ್ಷದಲ್ಲಿ 30 ರಜೆಗಳನ್ನು ನೀಡುವುದಾಗಿ ಸರ್ಕಾರ ಘೋಷಿಸಿದೆ. ಮತ್ತು ಅಗತ್ಯಕ್ಕೆ ಅನುಗುಣವಾಗಿ, ಅವರಿಗೆ ವೈದ್ಯಕೀಯ ರಜೆ ನೀಡಲಾಗುತ್ತದೆ. ಆದರೆ ಸೇನೆಯ ನಿಯಮಿತ ಸೇವೆಯಲ್ಲಿ ಕೆಲಸ ಮಾಡುವವರಿಗೆ ವರ್ಷದಲ್ಲಿ 90 ರಜೆಗಳು ಸಿಗುತ್ತವೆ.

ಬ್ಯಾಡ್ಜ್‌ಗಳು ವಿಭಿನ್ನವಾಗಿರುತ್ತವೆ

ಅಗ್ನಿವೀರರಿಗೆ ವಿಭಿನ್ನ ಗುರುತು ಸಿಗಲಿದೆ ಎಂದು ಸೇನೆ ಹೇಳಿದೆ. 'ಅಗ್ನಿವೀರ್' ತನ್ನ ಸೇವಾ ಅವಧಿಯಲ್ಲಿ ತನ್ನ ಸಮವಸ್ತ್ರದ ಮೇಲೆ "ವಿಶಿಷ್ಟ ಚಿಹ್ನೆ" ಯನ್ನು ಧರಿಸುತ್ತಾನೆ. ಈ ಕುರಿತು ವಿವರವಾದ ಸೂಚನೆಗಳನ್ನು ಪ್ರತ್ಯೇಕವಾಗಿ ನೀಡಲಾಗುವುದು. ಅಂದರೆ, ಅಗ್ನಿವೀರರ ಬ್ಯಾಡ್ಜ್ ಆರ್ಮಿ, ನೌಕಾಪಡೆ, ಏರ್ ಮೆನ್ ಗಳಿಗಿಂತ ಭಿನ್ನವಾಗಿರುತ್ತದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!