ಇದು ಮೋದಿ ನೀಡಿದ ಹಣ ಎಂದು ತಪ್ಪಾಗಿ ಜಮೆ ಆದ 5.5 ಲಕ್ಷ ರೂ ಹಿಂದಿರುಗಿಸಲು ನಿರಾಕರಿಸಿದ ವ್ಯಕ್ತಿ ಅರೆಸ್ಟ್!

By Suvarna NewsFirst Published Sep 14, 2021, 9:23 PM IST
Highlights
  • ಸುಮ್ಮನೆ ಕುಳಿತಿದ್ದ ವ್ಯಕ್ತಿ ಖಾತೆಗೆ 5.5 ಲಕ್ಷ ರೂಪಾಯಿ ಜಮೆ
  • ಹಣ ಸಿಕ್ಕ ಖುಷಿಯಲ್ಲಿ ಬಿಂದಾಸ್ ಖರ್ಚು
  • ಹಣ ಖಾಲಿಯಾದಾಗ ಸಮಸ್ಯೆ ಡಬಲ್, ಮನಗೆ ಪೊಲೀಸರ ಆಗಮನ
  • ಸಿನಿಮಾ ಕತೆಯಂತಿರುವ ರೋಚಕ ಘಟನೆ ವಿವರ ಇಲ್ಲಿವೆ

ಬಿಹಾರ(ಸೆ.14) ಕೊರೋನಾ ಕಾರಣ ಕೆಲಸವಿಲ್ಲ, ಖಾತೆಯಲ್ಲಿ ಹಣವಿಲ್ಲ. ದಿಢೀರ್ 5.5 ಲಕ್ಷ ರೂಪಾಯಿ ಖಾತೆಗೆ ಜಮೆ ಆಗಿರುವುದಾಗಿ ಬಂತು ಮೇಸೇಜ್. ಇನ್ನೇನು ಬೇಕು ಹೇಳಿ? ಸ್ವರ್ಗಕ್ಕೆ ಮೂರೇ ಗೇಣು. ಬಿಂದಾಸ್ ಖರ್ಚು ಆರಂಭಗೊಂಡಿತು. ಇದರ ನಡುವೆ ಹಲವು ನೊಟೀಸ್ ಮನೆಗೆ ಬಂದರೂ ಬರೋಬ್ಬರಿ 5.5 ಲಕ್ಷ ರೂಪಾಯಿ ಮುಂದೆ ಅದ್ಯಾವುದು ಗೊತ್ತೆ ಆಗಲಿಲ್ಲ. ಯಾವಾಗ ಹಣ ಖಾಲಿ ಆಯಿತೂ ಸಮಸ್ಯೆಯೂ ಹೆಚ್ಚಾಯ್ತು. ಪೊಲೀಸರು ಮನೆಗೆ ಬಂದು, ಅಷ್ಟೇ ಪ್ರೀತಿಯಿಂದ ಠಾಣೆಗೆ ಕರೆದೊಯ್ದು ಅತಿಥಿಯಾಗಿ ಕೂರಿಸಿದರು. ಇದು ಕಟ್ಟು ಕತೆಯಲ್ಲ. ನಡೆದ ಘಟನೆ.

ಮೃತಪಟ್ಟವರ ಖಾತೆಗೂ ಕೂಡ ನರೇಗಾ ಹಣ ಪಾವತಿ!

ಈ ರೋಚಕ ಘಟನೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹೆಸರು ಕೂಡ ಬಂದು ಹೋಗಿದೆ. ಇದು ಬಿಹಾರದ ಖಗಾರಿಯಾ ಜಿಲ್ಲೆಯ ಭಕ್ತಿಯಾರ್‌ಪುರ್ ಗ್ರಾಮದಲ್ಲಿ ನಡೆದಿದೆ. ಇಲ್ಲಿ ಕಥಾ ನಾಯಕ ಹಾಗೂ ವಿಲನ್ ರಂಜಿತ್ ದಾಸ್.  ಕಳೆದ ಮಾರ್ಚ್‌ನಿಂದ ಆರಂಭಗೊಂಡ ಈ ನೈಜ ಘಟನೆ ಇದೀಗ ಅಂತಿಮ ಹಂತ ತಲುಪಿದೆ. ಹೆಚ್ಚಿನ ವಿವರ ಈ ಕೆಳಗಿದೆ.

ಘಟನೆ ವಿವರ:
ಖಗಾರಿಯಾ ಗ್ರಾಮೀಣ ಬ್ಯಾಂಕ್  5.5 ಲಕ್ಷ ರೂಪಾಯಿ ಹಣವನ್ನು ವರ್ಗಾಯಿಸಿದೆ. ಆದರೆ ವರ್ಗಾವಣೆಯಲ್ಲಿ ಆದ ತಪ್ಪಿನಿಂದ ಈ ಹಣ ನೇರವಾಗಿ ರಂಜಿತ್ ದಾಸ್ ಖಾತೆಗೆ ಬಂದಿದೆ. ಮಾರ್ಚ್ ತಿಂಗಳಲ್ಲಿ ಕೊರೋನಾ ಹೊಡೆತದಿಂದ ಕೂತಿದ್ದ ರಂಜಿತ್ ದಾಸ್‌ಗೆ ಜಾಕ್ ಪಾಟ್ ಹೊಡೆದಂತಾಗಿದೆ. 

ಖಗಾರಿಯಾ ಗ್ರಾಮೀಣ ಬ್ಯಾಂಕ್ ರಂಜಿತ್ ದಾಸ್ ವಿಳಾಸಕ್ಕೆ ಹಲವು ನೊಟೀಸ್ ಕಳುಹಿಸಿದ್ದಾರೆ. ಆದರೆ 5.5 ಲಕ್ಷ ರೂಪಾಯಿ ಪಡೆದ ರಂಜಿತ್ ದಾಸ್ ಬಿಂದಾಸ್ ಆಗಿ ಖರ್ಚು ಮಾಡಲು ಆರಂಭಿಸಿದ್ದಾರೆ. ಸತತ ನೋಟಿಸ್‌ಗೆ ಉತ್ತರ ನೀಡಿದ ರಂಜಿತ್ ದಾಸ್ ವಿರುದ್ದ ಖಗಾರಿಯಾ ಗ್ರಾಮೀಣ ಬ್ಯಾಂಕ್ ಪೊಲೀಸರ ನೆರವು ಕೇಳಿದೆ.

ಆನ್‌ಲೈನಲ್ಲಿ ಗೋಣಿಚೀಲ ಖರೀದಿಸಲು ಯತ್ನಿಸಿದ ಶಿಕ್ಷಕಿಗೆ 1 ಲಕ್ಷ ಟೋಪಿ

ಖಾತೆಯಲ್ಲಿ ಹಣ ಖಾಲಿಯಾಗುತ್ತಿದ್ದಂತೆ ಪೊಲೀಸರು ಮನಗೆ ಬಂದು ರಂಜಿತ್ ದಾಸ್ ವಶಕ್ಕೆ ಪಡೆದಿದ್ದಾರೆ. ಈ ವೇಳೆ ಪೊಲೀಸರು ನೋಟೀಸ್ ಪಡೆದರೂ ಹಣ ಹಿಂದಿರುಗಿಸಿಲ್ಲ ಯಾಕೆ ಎಂದು ಪೊಲೀಸರು ಪ್ರಶ್ನಿಸಿದ್ದಾರೆ. ಈ ವೇಳೆ ರಂಜಿತ್ ದಾಸ್ ಉತ್ತರಕ್ಕೆ ಪೊಲೀಸರು ನಗಬೇಕು ಅಥವಾ ಕ್ರಮ ಕೈಗೊಳ್ಳಬೇಕು ಅನ್ನೋದೇ ತೋಚಲಿಲ್ಲ.

ಮೋದಿ ನೀಡಿದ ಮೊದಲ ಕಂತು:
5.5 ಲಕ್ಷ ರೂಪಾಯಿ ನನಗೆ ಪ್ರಧಾನಿ ನರೇಂದ್ರ ಮೋದಿ ನೀಡಿದ ಹಣ. ಪೊಲೀಸ್ ಸಾಹೇಬರೆ, ನಿಮಗೆ ಗೊತ್ತಲ್ವಾ? ಮೋದಿ ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂಪಾಯಿ ಹಣ ಹಾಕುವುದಾಗಿ ಹೇಳಿದ್ದಾರೆ. ವಿದೇಶದಲ್ಲಿರುವ ಕಪ್ಪು ಹಣ ಭಾರತಕ್ಕೆ ತಂದು ಪ್ರತಿಯೊಬ್ಬರ ಖಾತೆಗೆ ಹಾಕುವುದಾಗಿ ಹೇಳಿದ್ದಾರೆ. ಇದರ ಮೊದಲ ಕಂತನ್ನು ಮೋದಿ ನನ್ನ ಖಾತೆಗೆ ಹಾಕಿದ್ದಾರೆ. ಹೀಗಾಗಿ ಈ ಹಣವನ್ನು ನಾನು ಖರ್ಚು ಮಾಡಿದ್ದೇನೆ ಎಂದು ಪೊಲೀಸರ ಬಳಿ ರಂಜಿತ್ ದಾಸ್ ಹೇಳಿದ್ದಾರೆ.

ನನ್ನ ಖಾತೆಯಲ್ಲಿ ಹಣವಿಲ್ಲ. ನಾನು ಹೇಗೆ ಹಿಂದಿರುಗಿಸಲಿ ಎಂದು ರಂಜಿತ್ ದಾಸ್ ಪೊಲೀಸರನ್ನೇ ಪ್ರಶ್ನೆ ಮಾಡಿದ್ದಾನೆ. ಬ್ಯಾಂಕ್ ಮ್ಯಾನೇಜರ್ ದೂರಿನ ಆಧಾರದಲ್ಲಿ ರಂಜಿತ್ ದಾಸ್‌ನನ್ನು ಬಂಧಿಸಲಾಗಿದೆ. ತನಿಖೆ ನಡೆಸಲು ಮುಂದಾಗಿರುವ ಪೊಲೀಸರು ರಂಜಿತ್ ದಾಸ್ ಖಾತೆ ದಾಖಲೆಗಳನ್ನು ತರಿಸಿಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ.

click me!