
ನವದೆಹಲಿ (ನ.11) ಬಿಹಾರ ವಿಧಾನಸಭೆ ಚುನಾವಣೆಯ ಮತಗಟ್ಟೆ ಸಮೀಕ್ಷೆಗಳು ಪ್ರಕಟಗೊಂಡಿದೆ. ಪ್ರಮುಖ ಎಜೆನ್ಸಿಗಳ ಸಮೀಕ್ಷೆ ಫಲಿತಾಂಶ ತೀವ್ರ ಕುತೂಹಲ ಕೆರಳಿಸಿದೆ. ಬಿಹಾರ ಜನತೆ ಮತ್ತೆ ಬಿಜೆಪಿ-ಜೆಡಿಯು ನೇತೃತ್ವದ ಸರ್ಕಾರ ಆಯ್ಕೆ ಮಾಡಿದ್ದಾರೆ ಎಂದು ಸಮೀಕ್ಷೆ ಹೇಳುತ್ತಿದೆ. ಇತ್ತ ತೇಜಸ್ವಿ ಯಾದವ್ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಿ ಚುನಾವಣೆ ಎದುರಿಸಿದ ಮಹಾಘಟಬಂದನ್ ಹಾಗೂ ಪ್ರಶಾಂಕ್ ಕಿಶೋರ್ ಜನ ಸೂರಾಜ್ ಪಕ್ಷವನ್ನು ಜನರು ತಿರಸ್ಕರಿಸಿದ್ದಾರೆ ಎಂದು ಸಮೀಕ್ಷಾ ಫಲಿತಾಂಶ ಹೇಳುತ್ತಿದೆ. 8ಕ್ಕೂ ಹೆಚ್ಚು ಸಮೀಕ್ಷಾ ವರದಿಯಲ್ಲಿ ಎನ್‌ಡಿಎ ಅಭೂತಪೂರ್ವ ಗೆಲುವು ಸಾಧಿಸಿದೆ. ಆದರೆ ಮಹಾಘಟನಬಂದನ್ 100ರ ಒಳಗೆ ತೃಪ್ತಿಪಟ್ಟುಕೊಂಡಿದೆ. ಇತ್ತ ಜನ ಸುರಾಜ್‌ಗೆ ಹಲವು ಸಮೀಕ್ಷೆ ಒಂದು ಸ್ಥಾನ ನೀಡಿಲ್ಲ.
ಬಿಹಾರದಲ್ಲಿ ಶೇಕಡಾ 65ರಷ್ಟು ಮಹಿಳಾ ಮತದಾರರು ಬಿಜೆಪಿ-ಜೆಡಿಯು ನೇತೃತ್ವದ ಎನ್‌ಡಿಎಂ ಬೆಂಬಲ ನೀಡಿದ್ದಾರೆ ಎಂದು ಮತಗಟ್ಟೆ ಸಮೀಕ್ಷೆ ಹೇಳುತ್ತಿದೆ. ಇನ್ನು ಮಹಾಘಟನಬಂದನ್‌ಗೆ ಶೇಕಡಾ 27ರಷ್ಟು ಮಹಿಳೆಯರು ಮತ ನೀಡಿದ್ದಾರೆ. ಪುರುಷ ಮತದಾರರ ಪೈಕಿ ಶೇಕಡಾ 52ರಷ್ಟು ಮಂದಿ ಎನ್‌ಡಿಎಗೆ ಮತ ನೀಡಿದ್ದರೆ, ಶೇಕಡಾ 36ರಷ್ಟು ಮಹಾಘಟನಬಂದನ್ ಬೆಂಬಲಿಸಿದ್ದಾರೆ.
ಮತಗಟ್ಟೆ ಸಮೀಕ್ಷೆಗಳು ಇತ್ತೀಚಿನ ದಿನಗಳಲ್ಲಿ ಸ್ಪಷ್ಟ ಅಥವಾ ಅಸುಪಾಸಿನ ಫಲಿತಾಂಶ ನೀಡುವಲ್ಲಿ ವಿಫಲಗೊಂಡ ಉದಾಹರಣೆಗಳೇ ಹೆಚ್ಚು. ಹೀಗಾಗಿ ಮಹಾಘಟನಬಂದನ್ ನಾಯಕರು ಮತಗಟ್ಟೆ ಸಮೀಕ್ಷೆಗಿಂತ ಗ್ರೌಂಡ್ ರಿಯಾಲಿಟಿ ಬೇರೆ ಇದೆ, ಗೆಲುವಿನ ವಿಶ್ವಾಸವಿದೆ ಎಂದಿದ್ದಾರೆ. ನವೆಂಬರ್ 14ರಂದು ಬಿಹಾರ ವಿಧಾನಸಭೆ ಚುನಾವಣೆ ಫಲಿತಾಂಶ ಹೊರಬೀಳಲಿದೆ. ಇದೀಗ ಎಲ್ಲರ ಕುತೂಹಲ ಫಲಿತಾಂಶದತ್ತ ನೆಟ್ಟಿದೆ.
ಪೀಪಲ್ಸ್ ಫಲ್ಸ್ ಮತಗಟ್ಟೆ ಸಮೀಕ್ಷೆ
ಟೈಮ್ಸ್ ನೌ ಮತಗಟ್ಟೆ ಸಮೀಕ್ಷೆ
ಮ್ಯಾಟ್ರಿಜ್ ಮತಗಟ್ಟೆ ಸಮೀಕ್ಷೆ
ದೈನಿಕ್ ಭಾಸ್ಕರ್ ಮತಗಟ್ಟೆ ಸೆಮೀಕ್ಷೆ
ಪೀಪಲ್ಸ್ ಇನ್‌ಸೈಟ್ ಮತಗಟ್ಟೆ ಸೆಮೀಕ್ಷೆ
ಪೋಲ್ ಆಫ್ ಫೋಲ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ