ಬಿಹಾರದಲ್ಲಿ ಎನ್‌ಡಿಎಗೆ ಭಾರಿ ಬಹುಮತ: 10ಕ್ಕೆ 10 ಎಕ್ಸಿಟ್‌ ಪೋಲಲ್ಲೂ ಕಮಲಕ್ಕೇ ಜಯ

Published : Nov 12, 2025, 05:30 AM IST
BJP Flag

ಸಾರಾಂಶ

ಕಳೆದೊಂದು ತಿಂಗಳಿನಿಂದ ದೇಶದ ಗಮನವನ್ನು ತನ್ನತ್ತ ಸೆಳೆದುಕೊಂಡಿರುವ ಬಿಹಾರ ವಿಧಾನಸಭೆ ಚುನಾವಣೆಯ ಅಂತಿಮ ಚರಣ ಮಂಗಳವಾರ ಮುಕ್ತಾಯ ಕಂಡಿದ್ದು, ಚುನಾವಣೋತ್ತರ ಸಮೀಕ್ಷೆಗಳು ಪ್ರಕಟವಾಗಿವೆ.

ಪಟನಾ (ನ.12): ಕಳೆದೊಂದು ತಿಂಗಳಿನಿಂದ ದೇಶದ ಗಮನವನ್ನು ತನ್ನತ್ತ ಸೆಳೆದುಕೊಂಡಿರುವ ಬಿಹಾರ ವಿಧಾನಸಭೆ ಚುನಾವಣೆಯ ಅಂತಿಮ ಚರಣ ಮಂಗಳವಾರ ಮುಕ್ತಾಯ ಕಂಡಿದ್ದು, ಚುನಾವಣೋತ್ತರ ಸಮೀಕ್ಷೆಗಳು ಪ್ರಕಟವಾಗಿವೆ. ಎಲ್ಲ ಸಮೀಕ್ಷೆಗಳು, ‘ಮತ್ತೊಮ್ಮೆ ಎನ್‌ಡಿಎ ಬಿಹಾರದಲ್ಲಿ ಭಾರಿ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ. ತೇಜಸ್ವಿ ಯಾದವ್‌ ನೇತೃತ್ವದ ಮಹಾಮೈತ್ರಿಕೂಟಕ್ಕೆ ಪುನಃ ನಿರಾಶೆಯಾಗಲಿದೆ’ ಎಂದು ಭವಿಷ್ಯ ನುಡಿದಿವೆ. ಮತ ಎಣಿಕೆ ನ.14ರಂದು ನಡೆಯಲಿದ್ದು, ಅಂದು ಈ ಸಮೀಕ್ಷೆಗಳು ನಿಜವಾಗಲಿವೆಯೇ ಎಂದು ಗೊತ್ತಾಗಲಿದೆ.

ಎನ್‌ಡಿಎಗೆ 10ಕ್ಕೆ 10: 10 ಸಂಸ್ಥೆಗಳು ಚುನಾವಣೋತ್ತರ ಸಮೀಕ್ಷೆ ನಡೆಸಿದ್ದು, ಎಲ್ಲ ಸಮೀಕ್ಷೆಗಳು ಎನ್‌ಡಿಎಗೆ ಜಯ ಎಂದಿವೆ. ಎಲ್ಲ ಹತ್ತೂ ಸಮೀಕ್ಷೆಗಳನ್ನು ಒಟ್ಟುಗೂಡಿ ಪೋಲ್‌ ಆಫ್ ಪೋಲ್ಸ್‌ ನಡೆಸಿದಾಗ ಎನ್‌ಡಿಎಗೆ 147, ಆರ್‌ಜೆಡಿ-ಕಾಂಗ್ರೆಸ್‌-ಎಡರಂಗದ ಮಹಾಮೈತ್ರಿಕೂಟಕ್ಕೆ 90 ಸ್ಥಾನ ಬರಲಿವೆ. ರಾಜಕೀಯ ರಣನೀತಿ ತಂತ್ರಜ್ಞ ಪ್ರಶಾಂತ್‌ ಕಿಶೋರ್‌ರ ಜನ್‌ ಸುರಾಜ್‌ 1-2 ಸ್ಥಾನ ಗಳಿಸಿ ಖಾತೆ ತೆರೆಯಬಹುದು. ಇತರರು 5-6 ಸ್ಥಾನ ಪಡೆಯಬಹುದು ಎಂದು ಅವು ಹೇಳಿವೆ.

ಚಾಣಕ್ಯ ಹಾಗೂ ಪೀಪಲ್ಸ್‌ ಇನ್‌ಸೈಟ್‌ ಸಂಸ್ಥೆಗಳ ಸಮೀಕ್ಷೆಗಳಷ್ಟೇ ಮಹಾಮೈತ್ರಿಕೂಟ 100ರ ಗಡಿ ದಾಟಲಿವೆ ಎಂದಿವೆ. ಇನ್ನು ದೈನಿಕ್‌ ಭಾಸ್ಕರ್‌ (145-160), ಮ್ಯಾಟ್ರಿಜ್‌ (147-167), ಪಿ-ಮಾರ್ಕ್‌ (142-162), ಟಿಐಎಫ್‌ ರೀಸರ್ಚ್‌ (145-163) ಎನ್‌ಡಿಎಗೆ 3ನೇ 2ರಷ್ಟು ಬಹುಮತ ನೀಡಿವೆ.

ಬಿಹಾರದಲ್ಲಿ ಈ ಬಾರಿ ಶೇ.67 ಮತದಾನ: ಇತಿಹಾಸದಲ್ಲೇ ಹೆಚ್ಚು

ಬಿಹಾರ ವಿಧಾನಸಭೆ ಚುನಾವಣೆಯ ಎರಡೂ ಹಂತಗಳಲ್ಲಿ ಶೇ.66.91ರಷ್ಟು ಮತದಾನವಾಗಿದೆ. 1951ರಲ್ಲಿ ದೇಶದಲ್ಲಿ ಚುನಾವಣೆ ಆರಂಭವಾದ ಬಳಿಕ ಬಿಹಾರದಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಮತದಾನ ನಡೆದಿದ್ದು ಇದೇ ಮೊದಲು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರತನ್ ಟಾಟಾ ಮಲತಾಯಿ, ಲ್ಯಾಕ್‌ಮೆ ಫ್ಯಾಶನ್ ಸಂಸ್ಥಾಪಕಿ ಸೈಮನ್ ಟಾಟಾ ನಿಧನ
ಭಾರತದ 2 ಬಿಲಿಯನ್ ಡಾಲರ್ ಪರಮಾಣು ಜಲಾಂತರ್ಗಾಮಿ ಒಪ್ಪಂದ ಅಂತಿಮಗೊಳಿಸಿದ ಪುಟಿನ್ ಭೇಟಿ