
ನವದೆಹಲಿ (ನ.11) ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಾರು ಸ್ಫೋಟ ಪ್ರಕರಣ ತೀವ್ರ ಆತಂಕದ ವಾತವಾರಣ ನಿರ್ಮಾಣ ಮಾಡಿದೆ. ಬೆಂಗಳೂರು ಸೇರಿದಂತೆ ದೇಶಾದ್ಯಂತ ಹೈ ಅಲರ್ಟ್ ಘೋಷಿಸಲಾಗಿದೆ. ಇದರ ಬೆನ್ನಲ್ಲೇ ಇದೀಗ ಶಾಲಾ ಮಕ್ಕಳಿಗೆ ಸರ್ಕಾರ ಹೈಬ್ರಿಡ್ ಮಾಡೆಲ್ ತರಗತಿ ಘೋಷಿಸಿದೆ. ಐದನೇ ತರಗತಿವರೆಗಿನ ಮಕ್ಕಳಿಗೆ ಆನ್‌ಲೈನ್ ಹಾಗೂ ಆಫ್ ಲೈನ್ ಕ್ಲಾಸ್ ನಡೆಸಲು ಸರ್ಕಾರ ಸೂಚಿಸಿದೆ. ಈ ಆದೇಶ ನೀಡಿರುವುದು ದೆಹಲಿ ಸರ್ಕಾರ. ದೆಹಲಿ ಶಾಲೆಗಳಿಗೆ ಮಾತ್ರ ಅನ್ವಯ. ಸರ್ಕಾರದ ನಿರ್ಧಾರದ ಹಿಂದೆ ಇದೆ ಪ್ರಮುಖ ಕಾರಣ.
ದೆಹಲಿಯಲ್ಲಿ ಕಳೆದ ಕೆಲ ದಿನಗಳಿಂದ ವಾಯು ಮಾಲಿನ್ಯ ವಿಪರೀತವಾಗುತ್ತಿದೆ. ಉಸಿರಾಡುವ ಗಾಳಿ ಕೂಡ ವಿಷಪೂರಿತವಾಗುತ್ತಿದೆ. ಸರ್ಕಾರದ ಹಲವು ಪ್ರಯತ್ನಗಳಲ್ಲಿ ವಾಯು ಮಾಲಿನ್ಯ ನಿಯಂತ್ರಣಕ್ಕೆ ಬಂದಿಲ್ಲ. ಹೀಗಾಗಿ ವಾಹನಗಳ ಓಡಾಟ ಕಡಿಮೆ ಮಾಡಲು ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ಉದ್ಯೋಗಿಗಳಿಗೆ ಮನೆಯಿಂದ ಕೆಲಸ ಮಾಡಲು ಸೂಚಿಸಿದೆ. ಇದರ ಬೆನ್ನಲ್ಲೇ ಐದನೇ ತರಗತಿವರೆಗಿನ ಮಕ್ಕಳಿಗೆ ಹೈಬ್ರಿಡ್ ಮಾಡೆಲ್ ತರಗತಿ ಮಾಡಲು ಸೂಚಿಸಿದೆ. ಮಕ್ಕಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿರುವ ಕಾರಣ ಮಕ್ಕಳು ಸುರಕ್ಷಿತವಾಗಿ ಮನೆಯಿಂದಲೇ ತರಗತಿಗೆ ಹಾಜರಾಗುವಂತೆ ಆನ್‌ಲೈನ್ ಕ್ಲಾಸ್ ಮಾಡಲು ಸೂಚನೆ ನೀಡಿದೆ. ಹಂತ ಹಂತವಾಗಿ ದೆಹಲಿಯಲ್ಲಿ ವಾಹನ ಓಟಾಡ ಕಡಿಮೆ ಮಾಡುವ ಮೂಲಕ ಮಾಲಿನ್ಯ ತಗ್ಗಿಸಲು ಪ್ರಯತ್ನಗಳು ನಡೆಯುತ್ತಿದೆ. ದೆಹಲಿಯಲ್ಲಿ GRAP-3 ನಿರ್ಬಂಧ ಹೇರಲಾಗಿದೆ.
ಅಂಗನವಾಡಿ, ಮಾಂಟೆಸರಿ, ಪ್ರಿಕೆಜಿ,ಎಲ್‌ಕೆಜಿ-ಯುಕೆಜಿ ಸೇರಿದಂತೆ ಐದನೇ ತರಗತಿವರೆಗೆ ಎಲ್ಲಾ ಮಕ್ಕಳಿಗೆ ಆನ್‌ಲೈನ್ ಹಾಗೂ ಆಫ್ ಲೈನ ಕ್ಲಾಸ್‌ಗೆ ಸೂಚಿಸಲಾಗಿದೆ. ಹಲವು ಮಕ್ಕಳು ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆ ದಾಖಲಾಗುತ್ತಿರುವುದು ಪತ್ತೆಯಾಗಿದೆ. ಇಷ್ಟೇ ಅಲ್ಲ ಆರೋಗ್ಯ ಸಮಸ್ಯೆಯಿಂದ ಹಲವು ಮಕ್ಕಳು ಸುದೀರ್ಘ ರಜೆ ಪಡೆಯುತ್ತಿರುವುದು ಪತ್ತೆಯಾಗಿದೆ. ಮಕ್ಕಳ ಆರೋಗ್ಯ ದೃಷ್ಟಿಯಿಂದ ಆಫ್‌ಲೈನ್ ಹಾಗೂ ಆನ್‌ಲೈನ್ ಕ್ಲಾಸ್ ಮಾಡುವಂತೆ ಸೂಚಿಸಿದೆ.
GRAP-3 ನಿರ್ಬಂಧ ಮೂಲಕ ಮಾಲಿನ್ಯ ಪ್ರಮಾಣ ತಗ್ಗಿಸುವ ಪ್ರಯತ್ನ ನಡೆಯುತ್ತಿದೆ. GRAP-3 ನಿರ್ಬಂಧದ ಅಡಿಯಲ್ಲಿ ಕಟ್ಟಡ ನಿರ್ಮಾಣ, ಕಟ್ಟಡ ಅಥವಾ ಮನೆ ಕೆಡುವುದು ನಿರ್ಬಂಧಿಸಲಾಗಿದೆ. ಡೀಸೆಲ್ ಜನರೇಟರ್ ಬಳಕೆ ನಿಷೇಧಿಸಲಾಗಿದೆ. ವಾಹನಗಳ ಎಮಿಶನ್ ಪರೀಕ್ಷೆ ಕಠಿಣ ಮಾಡಲಾಗಿದೆ. ಇಷ್ಟಾದರೂ ದೆಹಲಿಯಲ್ಲಿ ವಾಯು ಮಾಲಿನ್ಯ ಕಡಿಮೆಯಾಗಿಲ್ಲ. ಖಾಸಗಿ ಕಂಪನಿಗಳಿಗೆ ಮನೆಯಿಂದ ಕೆಲಸ ಮಾಡುವಂತೆ ಸೂಚಿಸಿದೆ. ಇತ್ತ ಸರ್ಕಾರಿ ಕಚೇರಿಗಳ ಸಮಯವನ್ನೂ ಬದಲಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ