ಬಿಹಾರ: ಬಿಜೆಪಿ ಅಭ್ಯರ್ಥಿ ಆಯ್ಕೆಗೆ ಅಮೆರಿಕ ಮಾದರಿ

Suvarna News   | Asianet News
Published : Sep 25, 2020, 10:09 AM IST
ಬಿಹಾರ: ಬಿಜೆಪಿ ಅಭ್ಯರ್ಥಿ ಆಯ್ಕೆಗೆ ಅಮೆರಿಕ ಮಾದರಿ

ಸಾರಾಂಶ

ಬಿಹಾರ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗಲು ಕ್ಷಣಗಣನೆ ಆರಂಭವಾಗಿದ್ದು, ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಈ ಬೆನ್ನಲ್ಲೇ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಬಿಜೆಪಿ ಅಮೆರಿಕ ಅಧ್ಯಕ್ಷೀಯ ಮಾದರಿಯನ್ನು ಆರಿಸಿಕೊಂಡಿದೆ.

ಪಟನಾ/ನವದೆಹಲಿ (ಸೆ.25) : ಮುಂಬರುವ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಅಮೆರಿಕ ಅಧ್ಯಕ್ಷೀಯ ಅಭ್ಯರ್ಥಿ ಆಯ್ಕೆ ಮಾದರಿ ಅನುಸರಿಸಲು ಬಿಜೆಪಿ ನಿರ್ಧರಿಸಿದೆ. ಅಂದರೆ ಅಭ್ಯರ್ಥಿಗಳನ್ನು ಹೈಕಮಾಂಡ್‌ ಬದಲು ಪಕ್ಷದ ಸ್ಥಳೀಯ ಕಾರ್ಯಕರ್ತರೇ ಆಯ್ಕೆ ಮಾಡಲಿದ್ದಾರೆ

ಪಕ್ಷದ ಹಿರಿಯ ನಾಯಕರೊಬ್ಬರ ಅನ್ವಯ, ಮೊದಲು ಪ್ರತಿ ಕ್ಷೇತ್ರಕ್ಕೂ ಮೂರು ಸಂಭವನೀಯ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಬಳಿಕ ಅವರಲ್ಲಿ ಯಾರು ಅಭ್ಯರ್ಥಿ ಆಗಬೇಕು ಎಂಬುದನ್ನು ಕ್ಷೇತ್ರದಲ್ಲಿ ಪಕ್ಷದ ನೊಂದಾಯಿತ ಸದಸ್ಯರು ಮತ ಹಾಕುವ ಮೂಲಕ ಆಯ್ಕೆ ಮಾಡಲಿದ್ದಾರೆ. ಇದಕ್ಕಾಗಿ ಈಗಾಗಲೇ ಬಿಹಾರ ರಾಜಧಾನಿ ಪಟನಾದಲ್ಲಿ 109 ಬ್ಯಾಂಕ್ವೆಟ್‌ ಹಾಲ್‌ಗಳನ್ನು ಕಾಯ್ದಿರಿಸಲಾಗಿದ್ದು, ಪಕ್ಷದ ಜಿಲ್ಲಾಧ್ಯಕ್ಷರ ಸಮ್ಮುಖದಲ್ಲಿ ಬ್ಯಾಲೆಟ್‌ ಪೇಪರ್‌ ಪೆಟ್ಟಿಗೆಗಳನ್ನು ತಿರುಚದಂತೆ ನಿಗಾ ವಹಿಸಲಾಗುತ್ತದೆ. ಕೊನೆಗೆ ಕೇಂದ್ರ ಮತ್ತು ರಾಜ್ಯ ಬಿಜೆಪಿ ನಾಯಕತ್ವದ ಸಮ್ಮುಖದಲ್ಲೇ ಮತ ಎಣಿಕೆ ಮಾಡಿ, ಫಲಿತಾಂಶ ಪ್ರಕಟಿಸಲಾಗುತ್ತದೆ.

ಕರ್ನಾಟಕ ಸಂಪುಟ ವಿಸ್ತರಣೆಗ ಬಿಹಾರ ಚುನಾವಣೆ ಅಡ್ಡಿ

ಇಂಥದ್ದೊಂದು ಆಯ್ಕೆ ಮೂಲಕ ಪಕ್ಷದ ಕಾರ್ಯಕರ್ತರ ಮಾತಿಗೆ ಬಿಜೆಪಿ ಹೆಚ್ಚು ಮಹತ್ವ ನೀಡಲಿದೆ ಎಂಬ ಸಂದೇಶ ರವಾನೆಗಾಗಿ ಬಿಜೆಪಿ ಈ ನಿರ್ಧಾರಕ್ಕೆ ಮುಂದಾಗಿದೆ ಎನ್ನಲಾಗಿದೆ. ಬಿಹಾರ ಚುನಾವಣೆಗೆ ಇಂದು ದಿನಾಂಕ ಘೋಷಣೆಯಾಗಲಿದೆ. 

ಬಿಹಾರ ಡಿಜಿಪಿ ಬಿಜೆಪಿ ಅಭ್ಯರ್ಥಿ!
ಸುಶಾಂತ ಸಿಂಗ್‌ರದು ಆತ್ಮಹತ್ಯೆ ಅಲ್ಲ ಹತ್ಯೆ ಎಂದು ಚೀರಿ ಹೇಳುತ್ತಿದ್ದ ಬಿಹಾರದ ಡಿಜಿಪಿ ಗುಪ್ತೇಶ್ವರ ಪಾಂಡೆ ಪೊಲೀಸ್‌ ಪದವಿಗೆ ರಾಜೀನಾಮೆ ನೀಡಿ ಬಕ್ಸರ್‌ನಿಂದ ಬಿಜೆಪಿ ಅಭ್ಯರ್ಥಿ ಆಗಲಿದ್ದಾರೆ. ಪಾಂಡೆ 2009ರಲ್ಲಿ ಕೂಡ ಒಮ್ಮೆ ಬಿಜೆಪಿ ಟಿಕೆಟ್‌ಗೆ ಪ್ರಯತ್ನ ಮಾಡಿದ್ದರು. ಆದರೆ ಟಿಕೆಟ್‌ ಸಿಕ್ಕಿರಲಿಲ್ಲ. ಅದೇಕೋ ಏನೋ ಪಾಂಡೆಯಿಂದ ಹಿಡಿದು ಅಣ್ಣಾಮಲೈವರೆಗೆ ಅನೇಕ ರಿಗೆ ಮಾಧ್ಯಮಗಳ ಪ್ರಚಾರ ಸಿಕ್ಕ ತಕ್ಷಣ ಚುನಾವಣೆಗೆ ಧುಮುಕಬೇಕು ಅನ್ನಿಸುತ್ತದೆ. ಅಥವಾ ಭವಿಷ್ಯದ ಚುನಾವಣೆ ತಯಾರಿಗಾಗಿಯೇ ಮಾಧ್ಯಮಗಳನ್ನು ಬಳಸುತ್ತಾರೋ ಏನೋ ಯಾರಿಗೆ ಗೊತ್ತು. ಅಂದಹಾಗೆ ಇದೆಲ್ಲ ಬೇಡವೋ ಬೇಡ ಎಂದು ರಾಮವಿಲಾಸ್‌ ಪಾಸ್ವಾನ್‌ ನೇರವಾಗಿ ಪತ್ರಕರ್ತರಿಗೆ ಟಿಕೆಟ್‌ ಕೊಟ್ಟು ಕಣಕ್ಕೆ ಇಳಿಸುತ್ತೇವೆ ಎಂದು ಹೇಳುತ್ತಿದ್ದಾರೆ.

ಕೇಂದ್ರದ ಭರ್ಜರಿ ಕೊಡುಗೆ ಘೋಷಣೆ

ಬಿಹಾರ ಚುನಾವಣೆ ಘೋಷಣೆಯಾಗುವ ಮುನ್ನವೇ ಪ್ರಧಾನಿ ಮೋದಿ ರಾಜ್ಯಕ್ಕೆ ಭರಪೂರ ಯೋಜನೆಗಳನ್ನು ಘೋಷಿಸಿದ್ದಲ್ಲದೇ ಸಾವಿರಾರು ಕೋಟಿ ಮೌಲ್ಯದ ಅನೇಕ ಕಾಮಗಾರಿಗಳಿಗೆ ಶಂಕು ಸ್ಥಾಪನೆ ನೆಪವೇರಿಸಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಗೃಹಸಚಿವರು ಏನು ಬೇಕಾದ್ರೂ ಮಾಡಬಹುದು, ಅವರ ಕಣ್ಣುಗಳನ್ನು ನೋಡಿದರೆ ನನಗೆ ಭಯವಾಗುತ್ತೆ: ಮಮತಾ ಬ್ಯಾನರ್ಜಿ
ಅಣ್ಣಾ ಹಜಾರೆ ಮತ್ತೆ ಉಪವಾಸ ಸತ್ಯಾಗ್ರಹ ಘೋಷಣೆ: ಸ್ಥಳ, ದಿನಾಂಕ ನಿಗದಿ, ಕಾರಣವೇನು ಗೊತ್ತಾ?