
ಪಟನಾ (ನ.15): ಇತ್ತೀಚೆಗೆ ಮುಕ್ತಾಯಗೊಂಡ ಬಿಹಾರ ವಿಧಾನಸಭಾ ಚುನಾವಣೆಯಲ್ಲಿನ ಅಂಚೆ ಮತ ಎಣಿಕೆಯಲ್ಲಿ ಲೋಪವಾಗಿದೆ ಎಂದು ಆರೋಪಿಸುತ್ತಿರುವ ಆರ್‌ಜೆಡಿ, ಒಂದು ವೇಳೆ ಮರುಮತ ಎಣಿಕೆ ಕುರಿತ ತನ್ನ ಮನವಿಯನ್ನು ಚುನಾವಣೆ ಆಯೋಗ ಇನ್ನೊಮ್ಮೆ ತಿರಸ್ಕರಿಸಿದರೆ ಕೋರ್ಟ್ ಮೆಟ್ಟಿಲೇರುವುದಾಗಿ ಹೇಳಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಪಕ್ಷದ ವಕ್ತಾರ ಚಿತ್ತರಂಜನ್ ಗಗನ್, ಚುನಾವಣೆಯಲ್ಲಿ ಎರಡೂ ಮೈತ್ರಿಕೂಟದ ನಡುವಿನ ಮತಗಳ ವ್ಯತ್ಯಾಸ ಕೇವಲ 12270. ಹೀಗಿರುವಾಗ ಮತ ಎಣಿಕೆಯಲ್ಲಿನ ಸಣ್ಣ ಲೋಪ ಕೂಡ ಫಲಿತಾಂಶವನ್ನೇ ಬದಲಿಸಬಲ್ಲದು. ಅಂಚೆ ಮತ ಎಣಿಕೆಯಲ್ಲಿನ ಲೋಪದಿಂದಾಗಿ ಮಹಾಗಠಬಂಧನ್ 12ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಸೋಲು ಅನುಭವಿಸಿದೆ. ಉದಾಹರಣೆಗೆ ಹಿಲ್ಸಾ ಮತ್ತು ನಳಂದಾದಲ್ಲಿ ನಾವು ಕೇವಲ 12 ಮತಗಳಿಂದ ಸೋತಿದ್ದೇವೆ. ಬರ್‌ಬಿಘಾದಲ್ಲಿ ಮೈತ್ರಿಕೂಟದ ಅಭ್ಯರ್ಥಿಗೆ 113 ಮತಗಳ ಅಂತರದ ಸೋಲಾಗಿದೆ ಎಂದಿದ್ದಾರೆ.
Fact Check : ಆರ್‌ಜೆಡಿ ಕಚೇರಿಯಲ್ಲಿ ಸಿಹಿ ತಿನಿಸು ಕಸದ ಬುಟ್ಟಿಗೆ? ...
ಹಿಲ್ಸಾದಲ್ಲಿ ಚಲಾವಣೆಯಾದ 551 ಅಂಚೆ ಮತಗಳ ಪೈಕಿ 182 ಮತ ಅಸಿಂಧು ಎಂದು ಘೋಷಿಸಲಾಗಿದೆ. ಬರ್‌ಬಿಘಾದಲ್ಲಿ ಚಲಾವಣೆಯಾದ 1007 ಅಂಚೆ ಮತಗಳ ಪೈಕಿ 106 ಅನ್ನು ಅಸಿಂಧು ಎಂದು ಘೋಷಿಸಲಾಗಿದೆ. ಹೀಗೆ ಮತ ಎಣಿಕೆಯಲ್ಲಿನ ಲೋಪ ನಮಗೆ ಅನ್ಯಾಯ ಮಾಡಿದೆ. ಹೀಗಾಗಿ ಕೆಲ ಕ್ಷೇತ್ರಗಳಲ್ಲಿ ನಾವು ಮರು ಮತ ಎಣಿಕೆ ಕೋರಿದ್ದೇವೆ. ಈಗಲೂ ಅದನ್ನು ಆಯೋಗ ತಿರಸ್ಕರಿಸಿದರೆ ಕೋರ್ಟ್ ಮೆಟ್ಟಿಲೇರುವ ಅವಕಾಶಗಳನ್ನು ನಾವು ಮುಕ್ತವಾಗಿರಿಸಿಕೊಂಡಿದ್ದೇವೆ ಎಂದು ಚಿತ್ತರಂಜನ್ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ