ಮೋದಿ ಭೇಟಿಯಾಗ್ತಾರೆ ನಿತೀಶ್: ಕೇಂದ್ರ ಮಂತ್ರಿಮಂಡಲಕ್ಕೆ ಜೆಡಿಯು?

By Suvarna NewsFirst Published Jun 22, 2021, 5:18 PM IST
Highlights

* ಮೋದಿ ಸಚಿವ ಸಂಪುಟ ವಿಸ್ತರಣೆ ಮಾತು

* ದೆಹಲಿಯತ್ತ ಬಿಹಾರ ಸಿಎಂ ನಿತೀಶ್ ಕುಮಾರ್ ಪ್ರವಾಸ

* ಜೆಡಿಯು ಪಕ್ಷದ ನಾಯಕರಿಗೂ ಸಂಪುಟದಲ್ಲಿ ಸ್ಥಾನ ನಿಡಲು ಬೇಡಿಕೆ?

ನವದೆಹಲಿ(ಜೂ.22): ಮೋದಿ ಸಚಿವ ಸಂಪುಟ ವಿಸ್ತರಣೆ ಮಾತುಗಳ ಮಧ್ಯೆ ಬಿಹಾರ ಸಿಎಂ ನಿತೀಶ್ ಕುಮಾರ್ ಇಂದು ದೆಹಲಿ ಪ್ರವಾಸ ಕೈಗೊಂಡಿದ್ದಾರೆ. ಪಿಎಂ ಮೋದಿಯನ್ನು ಭೇಟಿಯಾಗಲಿರುವ ನಿತೀಶ್ ಕುಮಾರ್ ಕೇಂದ್ರ ಮಂತ್ರಿ ಮಂಡಲದಲ್ಲಿ ಜೆಡಿಯು ಸೇರ್ಪಡೆಗೊಳಿಸಲು ಮನವಿ ಮಾಡುತ್ತಾರೆನ್ನಲಾಗಿದೆ. ಇದು ಮುಖ್ಯಮಂತ್ರಿ ನಿತೀಶ್ ಕುಮಾರ್‌ರವರ ಖಾಸಗಿ ಪ್ರವಾಸ, ರಾಜಕೀಯ ವಿಚಾರಕ್ಕಾಗಿ ಇದನ್ನು ಕೈಗೊಮಡಿಲ್ಲ ಎಂದು ಜೆಡಿಯು ಹೇಳಿದೆ. ಹೀಗಿದ್ದರೂ ಮೋದಿ, ನಿತೀಶ್ ಮಧ್ಯೆ ಸಂಪುಟ ವಿಸ್ತರಣೆ ಬಗ್ಗೆ ಮಾತುಕತೆ ನಡೆಯಬಹುದೆಂದು ಅಂದಾಜಿಸಲಾಗಿದೆ.

ವರದಿಗಳನ್ವಯ ನಿತೀಶ್ ಕುಮಾರ್ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೊರತುಪಡಿಸಿ ಬಿಜೆಪಿ ಅಧ್ಯಕ್ಷ ಜೆ. ಪಿ. ನಡ್ಡಾರನ್ನೂ ಭೇಟಿಯಾಗುತ್ತಾರೆನ್ನಲಾಗಿದೆ. ಪಿಎಂ ಮೋದಿಯವರ ಎರಡನೇ ಆಡಳಿತ ಅವಧಿಯಲ್ಲಿ ಜೆಡಿಎಸ್‌ ನಾಯಕರಿಗೆ ಸಂಪುಟದಲ್ಲಿ ಸ್ಥಾನ ಸಿಕ್ಕಿರಲಿಲ್ಲ. ಇತ್ತೀಚೆಗಷ್ಟೇ ಜೆಡಿಯುವ ಹಿರಿಯ ನಾಯಕರೊಬ್ಬರು ಮಾತನಾಡುತ್ತಾ ಪಕ್ಷಕ್ಕೆ ಬಿಜೆಪಿಯ ಓರ್ವ ಮಹತ್ವಪೂರ್ಣ ಸಹಯೋಗಿ ಪಕ್ಷವಾಗಿ ಮಂತ್ರಿಮನಂಡಲದಲ್ಲಿ ಸ್ಥಾನ ನೀಡಬೇಕು ಎಂದಿದ್ದರು. ಇನ್ನು 2019ರಲ್ಲಿ ಮೋದಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಜೆಡಿಯುಗೆ ಕೇಂದ್ರ ಮಂತತ್ರಿಮಂಡಲದಲ್ಲಿ ಭಾಗಿಯಾಗಲು ಆಮಂತ್ರಣ ನೀಡಲಾಘಿತ್ತು. ಆದರೆ ಒಂದೇ ಸ್ಥಾನ ಸಿಕ್ಕ ಕಾರಣ ಜೆಡಿಯು, ಬಿಜೆಪಿಯ ಈ ಪ್ರಸ್ತಾವನೆಯನ್ನು ತಳ್ಳಿ ಹಾಕಿತ್ತು. 

ರಾಷ್ಟ್ರೀಯ ಅಧ್ಯಕ್ಷ ಹೇಳಿದ್ದೇನು? 

ಜೆಡಿಯು ರಾಷ್ಟ್ರೀಯ ಅಧ್ಯಕ್ಷ ಆರ್‌ಸಿಪಿ ಸಿಂಗ್ ಮಾತನಾಡುತ್ತಾ 'ನಾಣು ಈ ಹಿಂದೆಯೂ ಹೇಳಿದ್ದೇನೆ. ಯಾವಾಗೆಲ್ಲಾ ಮಂತ್ರಿಮಂಡಲ ವಿಸ್ತರಿಸಲಾಗುತ್ತದೋ ಜೆಡಿಯು ಕೂಡಾ ಇದರ ಭಾಗವಾಗುತ್ತದೆ ಎಂಬುವುದು ಖಚಿತ. ಯಾಕರೆಂದರೆ ಇದು ಎನ್‌ಡಿಎ ಕೂಟದಲ್ಲಿದೆ. ಇದರಲ್ಲಿ ಯಾವುದೇ ಅನುಮಾನವಿಲ್ಲ ಎಂದಿದ್ದಾರೆ.

ನಿತೀಶ್ ಪಕ್ಷದ ಸಂಸದರೆಷ್ಟು?

ಲೋಕಸಭೆಯಲ್ಲಿ ಜೆಡಿಯುನ 16 ಸಂಸದರಿದ್ದಾರೆ. ಅಲ್ಲದೇ ಬಿಹಾರದಲ್ಲಿ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿದರೂ ಕೇಂದ್ರ ಮಂತ್ರಿಮಂಡಲದಲ್ಲಿ ಈವರೆಗೂ ಜೆಡಿಯುನ ನಾಯಕರಿಗೆ ಸ್ಥಾನ ಸಿಕ್ಕಿಲ್ಲ ಎಂಬುವುದು ಉಲ್ಲೇಖನೀಯ. 
 

click me!