ಬಿಸ್ಕತ್ ಅಂಕಲ್ ಆದ ಬಿಹಾರ ಸಿಎಂ ನಿತೀಶ್ ಕುಮಾರ್..!

By Suvarna NewsFirst Published Aug 7, 2020, 2:21 PM IST
Highlights

ಬಿಹಾರ ಸಿಎಂ ನಿತೀಶ್ ಕುಮಾರ್ ಸದ್ಯ ಮಕ್ಕಳ ಪಾಲಿನ ಬಿಸ್ಕತ್ ಅಂಕಲ್ ಆಗಿದ್ದಾರೆ. ತಟ್ಟೆಯಲ್ಲಿ ಬಿಸ್ಕತ್ ಹಿಡಿದು ಪುಟ್ಟ ಮಕ್ಕಳಿಗೆ ಹಂಚಿದ್ದಾರೆ. ಹೆಚ್ಚಿನ ವಿವರ ಇಲ್ಲಿ ಓದಿ

ಪಟ್ನಾ(ಆ.07): ಬಿಹಾರ ಸಿಎಂ ನಿತೀಶ್ ಕುಮಾರ್ ಸದ್ಯ ಮಕ್ಕಳ ಪಾಲಿನ ಬಿಸ್ಕತ್ ಅಂಕಲ್ ಆಗಿದ್ದಾರೆ. ತಟ್ಟೆಯಲ್ಲಿ ಬಿಸ್ಕತ್ ಹಿಡಿದು ಪುಟ್ಟ ಮಕ್ಕಳಿಗೆ ಹಂಚಿದ್ದಾರೆ. ಹಲವಾರು ಮಕ್ಕಳಿಗೆ ಆ ದಿನ ವಿಶೇಷವಾಗಿತ್ತು.

ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಸ್ವತಂ ಅವರೇ ತಟ್ಟೆಯಲ್ಲಿ ಬಿಸ್ಕತ್‌ ಪೊಟ್ಟಣ ಹಿಡಿದುಕೊಂಡು ಪುಟ್ಟ ಮಕ್ಕಳಿಗೆ ಹಂಚಿದ್ದಾರೆ. ಬಿಹಾರದ ದರ್ಭಾಂಗ ಜಿಲ್ಲೆಯಲ್ಲಿ ಸರ್ಕಾರಿ ಮಖ್ನಾನಿ ಪರಿಹಾರ ಶಿಬಿರಕ್ಕೆ ಭೇಟಿ ನೀಡಿದ ಸಿಎಂ ಜನರಿಗೆ ಸಾಂತ್ವನ ಹೇಳಿದ್ದಾರೆ.

ನಿತೀಶ್‌ಗೆ ಸೋಂಕು ಭೀತಿ: ಸಿಎಂ ಮನೆಯಲ್ಲೇ ಆಸ್ಪತ್ರೆ!

ಟ್ರೇ ಒಂದರಲ್ಲಿ ಕಲರ್‌ಫುಲ್ ಕವರ್‌ನಲ್ಲಿದ್ದ ಬಿಸ್ಕತ್‌ಗಳನ್ನು ಹಿಡಿದು ಬಗ್ಗಿ ನಿಂತು ಪುಟ್ಟ ಮಕ್ಕಳತ್ತ ಟ್ರೇ ಚಾಚಿ ನಿಮಗೆ ಬೇಕಾದಷ್ಟು ತೆಗೆದುಕೊಳ್ಳಿ ಎನ್ನುತ್ತಿರುವ ಸಿಎಂ ನಿತೀಶ್ ಕುಮಾರ್‌ ಫೋಟೋಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ಮಾಸ್ಕ್ ಧರಿಸಿ, ಫೇಸ್ ಶೀಲ್ಡ್ ಹಾಕಿಕೊಂಡಿದ್ದ ಸಿಎಂ ಅವರು ಹಿಡಿದ ಟ್ರೇಯನ್ನು ನೋಡಿದ ಮಕ್ಕಳು ಬಹಳಷ್ಟು ಜನ ಕೆಂಬಣ್ಣದ ರ್ಯಾಪರ್‌ನಲ್ಲಿದ್ದ ಬಿಸ್ಕತನ್ನೇ ಆರಿಸಿಕೊಂಡಿದ್ದಾರೆ.

ನಿತೀಶ್‌ಗೆ ಕೊರೋನಾ ಸೋಂಕು ಭೀತಿ: ಟೆಸ್ಟ್‌ಗೆ ಒಳಗಾದ ಬಿಹಾರ ಸಿಎಂ!

ಬಿಹಾರದ 16 ಜಿಲ್ಲೆಗಳಲ್ಲಿ ಪ್ರವಾಹ ಬಂದಿದ್ದು, ಸಿಎಂ ನಿತೀಶ್‌ ಕುಮಾರ್  ಹಾನಿಯಾದ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದಾರೆ. ಕೆಲವು ಪ್ರದೇಶಗಳಿಗೆ ಮುಖತಃ ಭೇಟಿ ನೀಡಿದ್ದರೆ ಇನ್ನು ಕೆಲವು ಪ್ರದೇಶಗಳ ಬಗ್ಗೆ ಕಾನ್ಫರೆನ್ಸ್‌ ಮೂಲಕ ಮಾಹಿತಿ ತಿಳಿಯುತ್ತಿದ್ದಾರೆ.

ಪ್ರವಾಹದಿಂದ ಬಚಾವಾಗಿ ಜನರು ಆಶ್ರಯ ಪಡೆದಿದ್ದ ಮಖ್ನಾನಿ ಪರಿಹಾರ ಕೇಂದ್ರಕ್ಕೆ ಬುಧವಾರ ಭೇಟಿ ನೀಡಿದ ಸಿಎಂ ವ್ಯವಸ್ಥೆಗಳನ್ನು ಪರಿಶೀಲಿಸಿದ್ದಾರೆ. ಅಡುಗೆ ಕೋಣೆಗೆ ಹೋದ ಸಿಎಂ ಅಲ್ಲಿನ ಆಹಾರವನ್ನೂ ತಿಂದು ನೋಡಿದ್ದಾರೆ.

ಈ ಒಂದು ಪದ ಬಳಕೆಗೆ ಬಿಹಾರ ಸಿಎಂ ನಿತೀಶ್ ಕುಮಾರ್ ಕೆಂಡಾಮಂಡಲ

ಅಲ್ಲಿ ನೀಡಲಾಗಿದ್ದ ವೈದ್ಯಕೀಯ ಸೌಲಭ್ಯಗಳನ್ನೂ ಪರಿಶೀಲಿಸಿದ ಸಿಎಂ, ಲಿವಿಂಗ್ ರೂಂಗಳನ್ನು ಪರಿಶೀಲಿಸಿದ್ದಾರೆ. ಸೊಳ್ಳೆ ಪರದೆಗಳ ಗುಣಮಟ್ಟದಿಂದ ತೊಡಗಿ ನಿರಾಶ್ರಿತರಿಗೆ ಒದಗಿಸಲಾದ ಬೆಡ್‌ಶೀಟ್‌ಗಳನ್ನು ಸಿಎಂ ಪರಿಶೀಲಿಸಿದ್ದಾರೆ.

ಈಗಾಗಲೇ ಬಿಹಾರದಲ್ಲಿ ಉಂಟಾಗಿರುವ ಪ್ರವಾಹದಿಂದ 12 ಸಾವಿರ ನೆರೆ ಸಂತ್ರಸ್ತರು ಸರ್ಕಾರಿ ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ. ರಾಜ್ಯದ ಕಮ್ಯುನಿಟಿ ಕಿಚನ್ 9.97 ಮಿಲಿಯನ್ ಜನರಿಗೆ ಆಹಾರ ಒದಗಿಸುತ್ತಿದೆ.

click me!