
ಪಾಟ್ನಾ( ನ. 09) ಇಡೀ ದೇಶದ ಕುತೂಹಲ ನೆಟ್ಟಿರುವುದು ಬಿಹಾರ ಚುನಾವಣಾ ಫಲಿತಾಂಶದ ಮೇಲೆ. ಒಂದು ಕಡೆ ಸಮೀಕ್ಷೆಗಳು ಮಹಾಘಟ್ ಬಂಧನ್‌ಗೆ ಮುನ್ನಡೆ ಎಂದು ಹೇಳಿದ್ದರೂ ಇಲ್ಲಿ ಒಂದಿಷ್ಟು ವಿಚಾರಗಳನ್ನು ಗಮನಕ್ಕೆ ಇಟ್ಟುಕೊಳ್ಳಲೇಬೇಕು.
ಯಾದವರ ನಾಡಿಗೆ ಯಾರು ಬಾಸ್? ವೈ ವೈ ಎಂ (ಯುವಕರು, ಯಾದವರು ಹಾಗು ಮುಸ್ಲಿಂ) ಸೂತ್ರದಾರಿ ತೇಜಸ್ವಿಯಾದವ್ ಅಥವಾ ಎಂಜಿನಿಯರ್ ಪದವೀಧರ, ಹಾಲಿ ಸಿಎಂ ನಿತೇಶ್ ಕುಮಾರಾ?
ಬಿಹಾರದಲ್ಲಿ ಚುನಾವಣೆ ಭರ್ಜರಿ ಪ್ರಚಾರಕ್ಕೂ ವೇದಿಕೆಯಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಎನ್‌ಡಿಎ ಪರವಾಗಿ ಅಖಾಡಕ್ಕೆ ಇಳಿದಿದ್ದರು. ಕರ್ನಾಟಕದಲ್ಲಿ ದೋಸ್ತಿ ಸರ್ಕಾರಕ್ಕೆ ಅಧಿಕಾರಕ್ಕೆ ಏರಿದ ವೇಳೆಯೂ ಮಹಾಘಟಬಂಧನ್ ದ ನಾಯಕರು ವೇದಿಕೆ ಹಂಚಿಕೊಂಡಿದ್ದರು.
ಆರ್ ಆರ್ ನಗರ, ಶಿರಾ ಬಿಗ್ ಬ್ಯಾಟಲ್.. ಕೊನೆ ಕ್ಷಣದ ಮಾಹಿತಿ
ಮಂಗಳವಾರ ನಿರ್ಧಾರವಾಗಲಿದೆ ಬಿಹಾರದ ಮುಂದಿನ 5 ವರ್ಷಗಳ ಭವಿಷ್ಯ. ಮೂರು ಹಂತಗಳಲ್ಲಿ ನಡೆದಿದ್ದ ಚುನಾವಣೆಯ ಫಲಿತಾಂಶ ನಾಳೆ ಪ್ರಕಟವಾಗಲಿದೆ. 243 ವಿಧಾನಸಭಾ ಸದಸ್ಯರ ಸ್ಥಾನಕ್ಕೆ 3,755 ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದರು.
38 ಜಿಲ್ಲೆಗಳಲ್ಲಿ 55 ಮತದಾನ ಕೇಂದ್ರಗಳಲ್ಲಿ ಮತ ಎಣಿಕೆ ನಡೆಯಲಿದೆ. ಮತ ಎಣಿಕೆಗೆ 414 ಮತ ಎಣಿಕೆ ಹಾಲ್ ಗಳು ಸಿದ್ದಪಡಿಸಿರುವ ಚುನಾವಣಾ ಆಯೋಗ ಕೊರೋನಾ ನಿಯಮ ಪಾಲನೆ ಮಾಡಿಕೊಂಡು ಮತ ಎಣಿಕೆ ನಡೆಸಲಿದೆ.
ಕೇಂದ್ರ ಸರ್ಕಾರದ ಯೋಜನೆಗಳ ಂಏಲೆ ಜನರಿಗೆ ಯಾವ ಅಭಿಪ್ರಾಯ ಇದೆ? ಬಿಹಾರದಲ್ಲಿ ನೀತೀಶ್ ಕುಮಾರ್ ಯೋಜಜನೆಗಳೂ ಬಲ ಕೊಟ್ಟಿವೆಯೇ? ಲಾಲೂ ಪ್ರಸಾದ್ ಯಾದವ್ ಪುತ್ರರ ರಾಜಕಾರಣದ ಭವಿಷ್ಯ ಏನು? ಎಲ್ಲದಕ್ಕೂ ಮಂಗಳವಾರ ಉತ್ತರ ಸಿಗಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ