
ನವದಹಲಿ: ಬಿಹಾರದ ಅನರ್ಹ ಮತದಾರರ ಪತ್ತೆಗೆ ಚುನಾವಣಾ ಆಯೋಗ ಕೈಗೊಂಡಿರುವ ವಿಶೇಷ ಮತಪಟ್ಟಿ ಪರಿಷ್ಕರಣೆಯ ಮೊದಲ ಹಂತ ಮುಕ್ತಾಯವಾಗಿದ್ದು, 65.2 ಲಕ್ಷ ಮತದಾರರನ್ನು ಅನಹ ಎಂದು ಗುರುತಿಸಲಾಗಿದೆ. ಇವರನ್ನು ಪಟ್ಟಿಯಿಂದ ಕೈಬಿಡುವ ಸಾಧ್ಯತೆಯಿದೆ.
ಮತದಾರರ ಲೆಕ್ಕಾಚಾರ ಅರ್ಜಿ ಸಲ್ಲಿಕೆಗೆ ಶುಕ್ರವಾರ ಕೊನೆ ದಿನವಾಗಿದ್ದು, ಪ್ರಕ್ರಿಯೆ ಮುಕ್ತಾಯದ ನಂತರ ಆಯೋಗವು ಅಂಕಿಅಂಶಗಳನ್ನು ಬಹಿರಂಗಪಡಿಸಿದೆ.
ಇದರ ಪ್ರಕಾರ, 22 ಲಕ್ಷ ಜನ ಮೃತಪಟ್ಟಿದ್ದು, 35 ಲಕ್ಷ ಜನ ಶಾಶ್ವತವಾಗಿ ಬಿಹಾರ ತೊರೆದು ಬೇರೆಡೆ ನೆಲೆಸಿದ್ದಾರೆ. 7 ಲಕ್ಷ ಮಂದಿ ಒಂದಕ್ಕಿಂತ ಹೆಚ್ಚು ಬಾರಿ ನೋಂದಣಿಯಾಗಿದ್ದರು. 1.2 ಲಕ್ಷ ಜನ ಇನ್ನೂ ಫಾರಂಗಳನ್ನು ಮರಳಿಸಿಲ್ಲ. ಹೀಗೆ ಒಟ್ಟು 65.2 ಲಕ್ಷ ಹೆಸರುಗಳು ಮತದಾರರನ್ನು ಅರ್ಹ ಎಂದು ಗುರುತಿಸಲಾಗಿದೆ.
ಶೀಘ್ರ ಇವರನ್ನು ಕೈಬಿಡುವ ನಿರ್ಣಯ ಕೈಗೊಳ್ಳುವ ಸಾಧ್ಯತೆ ಇದೆ.ಈಗಾಗಲೇ ಶೇ.99.8ರಷ್ಟು ಜನರು ಪರಿಶೀಲನೆಗೆ ಒಳಪಟ್ಟಿದ್ದಾರೆ. ಮತದಾರರ ಪಟ್ಟಿಗೆ ಇನ್ನೂ ಸೇರ್ಪಡೆಯಾಗದವರು, ಆ.1ರಿಂದ ಸೆ.1ರ ವರೆಗೆ ನಡೆಯುವ 2ನೇ ಹಂತದ ಪರಿಷ್ಕರಣೆ ವೇಳೆ ನೋಂದಣಿ ಮಾಡಿಕೊಳ್ಳಬಹುದು ಎಂದು ಆಯೋಗ ಸೂಚಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ