
ನವದೆಹಲಿ: ಭಾರತದಲ್ಲಿ ಅತಿ ಹೆಚ್ಚು ಭೂಮಿ ಯಾರ ಬಳಿಯಲ್ಲಿದೆ ಎಂಬ ವಿಷಯ ನಿಮಗೆ ಗೊತ್ತಿದೆಯಾ? ಇಂದು ಭೂಮಿ ಅಂದ್ರೆ ಸಂಪತ್ತು, ಅಧಿಕಾರ ಮತ್ತು ಸ್ಥಾನಮಾನದ ಸಂಕೇತವಾಗಿ ಬದಲಾಗಿದೆ. ಭಾರತದಂತಹ ವಿಶಾಲ ದೇಶದಲ್ಲಿ (ಸುಮಾರು 32.9 ಲಕ್ಷ ಚದರ ಕಿಲೋಮೀಟರ್ ವಿಸ್ತೀರ್ಣ) ಭೂಮಿಯ ಮಹತ್ವ ಇನ್ನೂ ಹೆಚ್ಚಾಗಿದೆ. ಕೌರವರು ಸೂಜಿಯಷ್ಟು ಭೂಮಿ ಕೊಡಲ್ಲ ಅಂದಾಗ ಆಗಿದ್ದು ಮಹಾಭಾರತ ಯುದ್ದ. ಹಾಗಾಗಿ ಭೂಮಿಗೆ ಚಿನ್ನಕ್ಕಿಂತ ಹೆಚ್ಚು ಬೆಲೆ ಇದೆ. ನಗರ ಪ್ರದೇಶಗಳಲ್ಲಂತೂ ಭೂಮಿ ಬೆಲೆ ಗಗನಕ್ಕೇರುತ್ತಿದೆ. ಹಾಗಾದ್ರರೆ ಭಾರತದ ಅತಿ ದೊಡ್ಡ ಭೂಮಾಲೀಕ ಯಾರು ಮತ್ತು ಅವರ ಬಳಿ ಎಷ್ಟು ಭೂಮಿ ಇದೆ ಎಂಬ ಮಾಹಿತಿಯನ್ನು ಈ ಲೇಖನ ಒಳಗೊಂಡಿದೆ.
ಭಾರತದಲ್ಲಿ ಅತಿ ದೊಡ್ಡ ಭೂಮಾಲೀಕ ಸರ್ಕಾರ. ಸರ್ಕಾರದ ಒಡೆತನದಲ್ಲಿ ಅತಿ ಹೆಚ್ಚು ಭೂಮಿ ಇದೆ. ನಂತರದ ಸ್ಥಾನದಲ್ಲಿ ಕ್ಯಾಥೋಲಿಕ್ ಚರ್ಚ್ ಆಫ್ ಇಂಡಿಯಾ ಇದೆ. ಸರ್ಕಾರಿ ಭೂಮಿ ಮಾಹಿತಿ ವ್ಯವಸ್ಥೆ (GLIS) ವರದಿಯ ಪ್ರಕಾರ, ಫೆಬ್ರವರಿ 2021 ರ ವೇಳೆಗೆ ಭಾರತ ಸರ್ಕಾರದ ಬಳಿ ಸುಮಾರು 15,531 ಚದರ ಕಿಲೋಮೀಟರ್ ಭೂಮಿ ಇತ್ತು. ಈ ಭೂಮಿ 116 ಸಾರ್ವಜನಿಕ ಉದ್ದಿಮೆಗಳು ಮತ್ತು 51 ಕೇಂದ್ರ ಸಚಿವಾಲಯಗಳ ನಡುವೆ ಹಂಚಿಕೆಯಾಗಿದೆ.
ಭಾರತದಲ್ಲಿ ಕ್ಯಾಥೋಲಿಕ್ ಚರ್ಚ್ ಸುಮಾರು 7 ಕೋಟಿ ಹೆಕ್ಟೇರ್ (ಸುಮಾರು 17.29 ಕೋಟಿ ಎಕರೆ) ಭೂಮಿಯನ್ನು ಹೊಂದಿದೆ. ಈ ಭೂಮಿಯಲ್ಲಿ ಚರ್ಚ್‌ಗಳು, ಶಾಲೆಗಳು ಮತ್ತು ಇತರ ಸಂಸ್ಥೆಗಳಿವೆ. ಇದರ ಮೌಲ್ಯ 1 ಲಕ್ಷ ಕೋಟಿ ರೂಪಾಯಿಗಳಿಗಿಂತಲೂ ಹೆಚ್ಚು ಎಂದು ಅಂದಾಜಿಸಲಾಗಿದೆ.
ಭಾರತ ಸರ್ಕಾರದ ಬಳಿ ಇರುವ ಭೂಮಿ ಅನೇಕ ದೇಶಗಳಿಗಿಂತಲೂ ದೊಡ್ಡದು. ಉದಾಹರಣೆಗೆ, ಇದು ಕತಾರ್ (11,586 ಚ.ಕಿ.ಮೀ), ಬಹಾಮಾಸ್ (13,943 ಚ.ಕಿ.ಮೀ), ಜಮೈಕಾ (10,991 ಚ.ಕಿ.ಮೀ), ಲೆಬನಾನ್ (10,452 ಚ.ಕಿ.ಮೀ), ಗ್ಯಾಂಬಿಯಾ (11,295 ಚ.ಕಿ.ಮೀ), ಸೈಪ್ರಸ್ (9,251 ಚ.ಕಿ.ಮೀ), ಬ್ರೂನೈ (5,765 ಚ.ಕಿ.ಮೀ), ಬಹ್ರೇನ್ (778 ಚ.ಕಿ.ಮೀ) ಮತ್ತು ಸಿಂಗಾಪುರ್ (726 ಚ.ಕಿ.ಮೀ) ದೇಶಗಳಿಗಿಂತಲೂ ದೊಡ್ಡದು.
ಇದನ್ನೂ ಓದಿ: ಬೆಂಗಳೂರಿನ ಹೊಸ ಏರಿಯಾದಲ್ಲಿ ಮನೆ ಹುಡುಕ್ತಿದ್ರೆ, ಒಮ್ಮೆ ಈ ಮ್ಯಾಪ್ ನೋಡ್ಕೊಂಡು ಬಿಡಿ
ಬ್ರಿಟಿಷ್ ಆಳ್ವಿಕೆಯ ಸಮಯದಲ್ಲಿ 1927 ರ ಇಂಡಿಯನ್ ಚರ್ಚ್ ಕಾಯ್ದೆಯಡಿಯಲ್ಲಿ ಕ್ಯಾಥೋಲಿಕ್ ಚರ್ಚ್‌ಗೆ ದೊಡ್ಡ ಪ್ರಮಾಣದಲ್ಲಿ ಭೂಮಿ ನೀಡಲಾಗಿತ್ತು. ಆ ಸಮಯದಲ್ಲಿ ಅನೇಕ ಕ್ರಿಶ್ಚಿಯನ್ ಸಂಸ್ಥೆಗಳಿಗೆ ಧರ್ಮ ಪ್ರಚಾರಕ್ಕಾಗಿ ಭೂಮಿಯನ್ನು ಕಡಿಮೆ ಬಾಡಿಗೆಗೆ ಗುತ್ತಿಗೆ ನೀಡಲಾಗುತ್ತಿತ್ತು. ಆದಾಗ್ಯೂ, 1965 ರಲ್ಲಿ ಭಾರತ ಸರ್ಕಾರವು ಒಂದು ಸುತ್ತೋಲೆಯನ್ನು ಹೊರಡಿಸಿ ಬ್ರಿಟಿಷ್ ಕಾಲದಲ್ಲಿ ನೀಡಲಾದ ಗುತ್ತಿಗೆಗಳು ಇನ್ನು ಮುಂದೆ ಮಾನ್ಯವಾಗಿರುವುದಿಲ್ಲ ಎಂದು ತಿಳಿಸಿತು. ಇಂದಿಗೂ ಚರ್ಚ್‌ನ ಕೆಲವು ಆಸ್ತಿಗಳ ಬಗ್ಗೆ ವಿವಾದಗಳಿವೆ.
ಇದನ್ನು ಓದಿ: ಬೆಂಗಳೂರು ಟ್ರಾಫಿಕ್‌ಗೆ ಸೆಡ್ಡು ಹೊಡೆದ SRWA; ಹಣ, ಇಂಧನ ಎಲ್ಲವೂ ಉಳಿತಾಯ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ