
ನವದೆಹಲಿ: ಓಲ್ಡ್ ಮಾಂಕ್ ತಯಾರಕ ಮೋಹನ್ ಮೀಕಿನ್ ಲಿಮಿಟೆಡ್‌ಗೆ (mohan meakin limited) ದೆಹಲಿ ಹೈಕೋರ್ಟ್‌ನಲ್ಲಿ ಹಿನ್ನಡೆ ಆಗಿದೆ. ಕೋರ್ಟ್, ಕಂಪನಿಯ iQ ಜಿನ್ ಅನ್ನು ಈಗಿರುವ ಬಾಟಲ್ ಮತ್ತು ಲೇಬಲ್ ವಿನ್ಯಾಸದಲ್ಲಿ ಮಾರಾಟ ಮಾಡುವುದಕ್ಕೆ ತಡೆ ನೀಡಿದೆ.iQ ಜಿನ್‌ನ ಪ್ಯಾಕೇಜಿಂಗ್, 'ಗ್ರೇಟರ್ ದ್ಯಾನ್' ಜಿನ್‌ನಂತೆಯೇ ಕಾಣುತ್ತಿದೆ. ಇದರಿಂದ ಗ್ರಾಹಕರಲ್ಲಿ ಗೊಂದಲ ಆಗಬಹುದು ಎಂದು ಕೋರ್ಟ್ ಹೇಳಿದೆ.
ನವೆಂಬರ್ 26 ರಂದು ಹೊರಡಿಸಿದ ಮಧ್ಯಂತರ ಆದೇಶದಲ್ಲಿ.. ನ್ಯಾಯಾಲಯವು ಕಂಪನಿಗೆ ತನ್ನ ಅಸ್ತಿತ್ವದಲ್ಲಿರುವ ಸ್ಟಾಕ್ ಮಾರಾಟ ಮಾಡಲು 30 ದಿನಗಳ ಕಾಲಾವಕಾಶ ನೀಡಿತು. ಹಳೆಯ ವಿನ್ಯಾಸದೊಂದಿಗೆ ಉಳಿದಿರುವ ಎಲ್ಲಾ ಬಾಟಲ್‌ಗಳನ್ನ ಸ್ಟಾಕ್‌ನಿಂದ ತೆಗೆದುಹಾಕಬೇಕು. ಕಂಪನಿಯು ತನ್ನ ಐಕ್ಯೂ ಬ್ರ್ಯಾಂಡ್ ಬಳಸಲು ಮತ್ತು ಬೇರೆ ವಿನ್ಯಾಸದಲ್ಲಿ ಜಿನ್ ಮಾರಾಟ ಮಾಡಲು ಅನುಮತಿಸಲಾಗಿದೆ.
ಗ್ರೇಟರ್ ದ್ಯಾನ್ ಜಿನ್ ತಯಾರಕರಾದ ನಾವೋ ಸ್ಪಿರಿಟ್ಸ್ ಮತ್ತು ಬೆವರೇಜಸ್ ಪ್ರೈವೇಟ್ ಲಿಮಿಟೆಡ್ ನೀಡಿದ ದೂರಿಗೆ ಸಂಬಂಧಿಸಿದ ಪ್ರಕರಣ ಇದು. ಕಂಪನಿಯು ತನ್ನ ಜಿನ್‌ನ ಬಾಟಲಿಯ ಆಕಾರ ಕಪ್ಪು ಮತ್ ವೈಟ್ ಕಲರ್ ಪ್ಲಾನ್, ಕಪ್ಪು ಕ್ಯಾಪ್ ಮತ್ತು ಲೇಬಲ್ ವಿನ್ಯಾಸವು ಐಕ್ಯೂ ಜಿನ್‌ನಂತೆಯೇ ಇದೆ ಎಂದು ಹೇಳಿಕೊಂಡಿದೆ. 'ಗ್ರೇಟರ್ ದ್ಯಾನ್' ಜಿನ್ ಭಾರತದಲ್ಲಿ 2016 ರಲ್ಲಿ ಪರಿಚಯಿಸಲಾಯಿತು. ಕಂಪನಿಯು ಈ ಪ್ಯಾಕೇಜಿಂಗ್ ಮೂಲಕ ಮಾರುಕಟ್ಟೆಯಲ್ಲಿ ತನ್ನ ಅಸ್ತಿತ್ವವನ್ನು ಸ್ಥಾಪಿಸಿದೆ. ಮೋಹನ್ ಮೀಕಿನ್ ಆಗಸ್ಟ್ 2023ರಲ್ಲಿ ಐಕ್ಯೂ ಜಿನ್ ಬಿಡುಗಡೆ ಆಗಿದೆ.
ಸಾಮಾನ್ಯವಾಗಿ ನೋಡಿದಾಗ ಐಕ್ಯೂ ಜಿನ್‌ನ ಪ್ರಸ್ತುತ ಪ್ಯಾಕೇಜಿಂಗ್ ಗ್ರಾಹಕರು ಎರಡು ಬ್ರಾಂಡ್‌ಗಳ ನಡುವಿನ ಸಂಪರ್ಕ ಅಥವಾ ಸಂಬಂಧವನ್ನು ಅನುಮಾನಿಸಲು ಕಾರಣವಾಗಬಹುದು ಎಂದು ನ್ಯಾಯಮೂರ್ತಿ ಪುರುಷೇಂದ್ರ ಕುಮಾರ್ ಕೌರವ್ ಹೇಳಿದ್ದಾರೆ. ನೌ ಸ್ಪಿರಿಟ್ಸ್ ತನ್ನ ಉತ್ಪನ್ನದ ಪ್ಯಾಕೇಜಿಂಗ್ ನಕಲು ಮಾಡಲಾಗಿದೆ ಅನ್ನೋ ವಾದವನ್ನು ಕೋರ್ಟ್ ಪುರಸ್ಕರಿಸಿದೆ.
ಆದರೆ ಮೋಹನ್ ಮೀಕಿನ್ 'ಐಕ್ಯೂ' ಹೆಸರು ಅಥವಾ ಟ್ರೇಡ್‌ಮಾರ್ಕ್ ಬಳಸುವುದನ್ನು ನಿಷೇಧಿಸಲಾಗಿಲ್ಲ. ಕಂಪನಿಯು ತನ್ನ ಜಿನ್ ಮಾರಾಟ ಮಾಡುವುದನ್ನು ಮುಂದುವರಿಸಬಹುದು. ಆದರೆ ಅದು 'ಗ್ರೇಟರ್ ದ್ಯಾನ್' ಹೋಲುವಂತಿಲ್ಲ. ಬದಲಾಗಿ ಬಾಟಲಿಯ ಆಕಾರ, ಲೇಬಲ್, ಕಲರ್ ಪ್ಲಾನ್ ಬದಲಾಯಿಸಬೇಕು ಎಂದಿದೆ.
ಕಂಪನಿಯ ಬಳಿ ಇರುವ ಐಕ್ಯೂ ಜಿನ್, ಪ್ಯಾಕೇಜಿಂಗ್‌ನಲ್ಲಿರುವ ಸ್ಟಾಕ್ ಎಷ್ಟು ಇದೆಯೋ, ವಿತರಕರ ಬಳಿ ಇದೆಯೋ ಅಥವಾ ಸಾಗಣೆಯಲ್ಲಿದೆಯೋ ಎಂಬುದನ್ನು ವಿವರಿಸುವ ಅಫಿಡವಿಟ್ ಎರಡು ವಾರಗಳಲ್ಲಿ ಸಲ್ಲಿಸುವಂತೆ ನ್ಯಾಯಾಲಯ ಮೋಹನ್ ಮೀಕಿನ್‌ಗೆ ನಿರ್ದೇಶಿಸಿದೆ. ಹಳೆಯ ಸ್ಟಾಕ್ ಅನ್ನು ವಿಲೇವಾರಿ ಮಾಡಲು ಕಂಪನಿಗೆ 30 ದಿನಗಳ ಕಾಲಾವಕಾಶ ನೀಡಲಾಗಿದೆ. ಈ ವಿನ್ಯಾಸದಲ್ಲಿ ಕಂಪನಿಯು ಉತ್ಪಾದಿಸುವುದು, ಬಾಟಲಿಂಗ್ ಮಾಡುವುದು ಅಥವಾ ಹೊಸ ಆದೇಶಗಳನ್ನು ನೀಡುವುದನ್ನು ಸಹ ನಿಷೇಧಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ