ಭಾರತೀಯ ನೌಕಾಪಡೆಗೆ ಕುರ್ತಾ ಪೈಜಾಮ ಡ್ರೆಸ್ ಕೋಡ್, ಬ್ರಿಟಿಷ್ ವಸಾತುಶಾಹಿಗೆ ಸಂಪೂರ್ಣ ಬ್ರೇಕ್!

By Suvarna News  |  First Published Feb 15, 2024, 11:03 AM IST

ಬ್ರಿಟಿಷ್ ವಸಾತುಶಾಹಿಯನ್ನು ಸಂಪೂರ್ಣ ಕಿತ್ತು ಹಾಕುತ್ತಿರುವ ಮೋದಿ ಸರ್ಕಾರ, ಅಳಿದುಳದಿರುವ ಒಂದೊಂದೆ ಪದ್ಧತಿಯನ್ನು ಬದಲಿಸುತ್ತಿದೆ. ಇದೀಗ ನೌಕಾಸೇನೆ ಅಧಿಕಾರಿಗಳಿಗೆ ಭಾರತೀಯ ವಸ್ತ್ರನೀತಿ ಜಾರಿಗೆ ತಂದಿದೆ. ಇದೀಗ ನೌಕಾಸೇನೆ ಕುರ್ತಾ ಪೈಜಾಮ ಧರಿಸಲು ಅವಕಾಶ ನೀಡಿದೆ. 


ನವದೆಹಲಿ(ಫೆ.15) ಬ್ರಿಟಿಷರು ಸ್ಥಾಪಿಸಿದ, ಬಿಟ್ಟುಹೋದ ವಸಾತುಶಾಹಿ, ಗುಲಾಮಿ ಮನಸ್ಥಿತಿಯನ್ನು ತೊಡೆದು ಹಾಕಲು ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಈಗಾಗಲೇ ಹಲವು ಮಹತ್ವದ ಹೆಜ್ಜ ಇಟ್ಟಿದೆ. ಇದೀಗ ನೌಕಾಸೇನೆಗೆ ಭಾರತೀಯ ಸಂಪ್ರದಾಯ ಉಡುಪು ಪರಿಚಯಿಸಿದೆ. ನೌಕಾ ಸೇನಾ ಅಧಿಕಾರಿಗಳು ತಮ್ಮ ನೌಕಾ ಮೆಸ್‌ಗಳಲ್ಲಿ ಕುರ್ತಾ ಪೈಜಾಮಾ ಧರಿಸಲು ಅಧಿಕಾರ ನೀಡಲಾಗಿದೆ. ಈ ಮೂಲ ವಸಾತುಶಾಹಿ ತೊಡೆದು ಸ್ಥಳೀಯ ಸಂಪ್ರದಾಯಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ನೌಕಾಪಡೆ ಮೆಸ್ ಆವರಣದಲ್ಲಿ ಕುರ್ತಾ ಪೈಜಾಮ ಅದರ ಮೇಲೆ ತೋಳಿಲ್ಲದ ಜಾಕೆಟ್, ಫಾರ್ಮಲ್ ಶೂ ಅಥವಾ ಸ್ಯಾಂಡಲ್ಸ್ ಧರಿಸಲು ಅನುಮತಿ ನೀಡಲಾಗಿದೆ.

ಮಿಲಿಟರಿ ಸಂಪ್ರದಾಯಗಳಲ್ಲಿ ಭಾರತೀಯ ಸಂಪ್ರದಾಯ ತರುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಸ್ಥಳೀಯ ವಸ್ತ್ರ, ಸಂಪ್ರದಾಯ, ಪದ್ಧತಿಗಳಿಗೆ ಆದ್ಯತೆ ನೀಡಿ ಬ್ರಿಟಿಷರ ಪಳೆಯುಳಿಕೆಯನ್ನು ತೊಡೆದು ಹಾಕಲು ಸರ್ಕಾರ ನಿರ್ಧರಿಸಿದೆ. ನೌಕಾಪಡೆಯ ಕುರ್ತಾ ಪೈಜಾಮ ಡ್ರೇಸ್ ಕೋಡ್ ಕುರಿತು ಮಾರ್ಗಸೂಚಿ ನೀಡಿದೆ. ಎಲ್ಲಾ ಕಮಾಂಡರ್ ಹಾಗೂ ಇತರ ಅಧಿಕಾರಿಗಳು ಕುರ್ತಾ ಪೈಜಾಮ ಧರಿಸುವಾಗ ಕೆಲ ನಿಯಮಗಳನ್ನು ಪಾಲಿಸಬೇಕು. 

Latest Videos

undefined

ವಸಾಹತುಶಾಹಿ ವಿರುದ್ಧ ಮೋದಿ ದಿಟ್ಟ ಹೆಜ್ಜೆ, ನೌಕಾಪಡೆಯ ಸೇಂಟ್ ಜಾರ್ಜ್ ಕ್ರಾಸ್ ಕೈಬಿಟ್ಟ ಕೇಂದ್ರ!

ನೌಕಾಪಡೆ ಅಡ್ಮಿರಲ್ ಆರ್ ಹರಿ ಕುಮಾರ್ ನೇತೃತ್ವದಲ್ಲಿ ನಡೆದ ಮಹತ್ವದ ಸಭೆಯಲ್ಲಿ ಈ ನಿರ್ಣಯ ತೆಗೆದುಕೊಳ್ಳಲಾಗಿದೆ. ನೂತನ ವಸ್ತ್ರ ಸಂಹಿತೆಯನ್ನು ನ್ಯಾಷನಲ್ ಸಿವಿಲ್ ಡ್ರೆಸ್ ಎಂದ ಅಂಗೀಕರಿಸಲಾಗಿದೆ. ಕುರ್ತಾ ಪೈಜಾಮ ಕಡು ಬಣ್ಣದಿಂದ ಕೂಡಿರಬೇಕು. ಮೊಣಕಾಲಿನ ವರೆಗೆ ಉದ್ದವಿರಬೇಕು. ಇದರ ಪೈಜಮಾ ಹೊಂದಿಕೆಯಾಗಬೇಕು. ತೋಳುಗಳಲ್ಲಿ ಕಫ್ ಇರಬೇಕು. ಪ್ಯಾಂಟ್‌ ಎಲಾಸ್ಟಿಕ್ ಒಳಗೊಂಡಿರಬೇಕು, ಜೊತೆಗೆ ಸೈಡು ಜೇಬುಗಳು ಇರಬೇಕು. ಇದಕ್ಕೆ ಹೊಂದಿಕೆಯಾಗುವ ನೇರ ಕಟ್ ವೇಸ್ಟ್ ಕೋಟ್ ಅಥವಾ ಜಾಕೆಟ್ ಬಳಸಬಹುದು ಎಂದು ಮಾರ್ಗಸೂಚಿ ಹೊರಡಿಸಲಾಗಿದೆ.  

ಈ ಡ್ರೆಸ್ ಕೋಡ್ ನೌಕಾ ಪಡೆ ಮೆಸ್, ಅನೌಪಚಾರಿಕ ಅಥವಾ ಸಾಂದರ್ಭಿಕ ಕೂಟಗಳಲ್ಲೆ ಹಾಗೂ ಸಂಸ್ಥೆಗಳಲ್ಲಿ ಮಾತ್ರ ಅನ್ವಯವಾಗಲಿದೆ. ಆದರೆ ಯುದ್ಧನೌಕೆ, ಜಲಾಂತರ್ಗಾಮಿ ನೌಕೆಯಲ್ಲಿ ಈ ವಸ್ತ್ರಸಂಹಿತೆ ಅನ್ವಯವಾಗುವುದಿಲ್ಲ ಎಂದು ನೌಕಾಪಡೆ ಸ್ಫಷ್ಪಪಡಿಸಿದೆ. ಬ್ರಿಟಿಷ್ ರೂಪಿಸಿದ ನಿಯಮದ ಪ್ರಾಕರ ನೌಕಾಪಡೆ ಮೆಸ್, ಭಾರತೀಯ ಸೇನೆ, ವಾಯುಸೇನೆ ಮೆಸ್‌ಗಳಲ್ಲೂ ಕುರ್ತಾ ಪೈಜಾಮ ಧರಿಸುವುದು ನಿಷೇಧಿಸಲಾಗಿತ್ತು. ಇದೀಗ ನೌಕಾಪಡೆಯಲ್ಲಿ ಮಹತ್ತರ ಬದಲಾವಣೆ ಮಾಡಲಾಗಿದೆ.  

ಸಾವಿನ ಕುಣಿಕೆಯಿಂದ 8 ಮಂದಿ ಪಾರಾಗಿದ್ದು ಹೇಗೆ, ಮೋದಿ-ಧೋವಲ್‌-ಜೈಶಂಕರ್‌ ರೆಡಿ ಮಾಡಿದ್ರು ಪ್ಲ್ಯಾನ್‌ A & B!

ಇದಕ್ಕೂ ಮೊದಲು 2022ರಲ್ಲಿ ಮೋದಿ ಸರ್ಕಾರ, ಭಾರತದ ನೌಕಾಪಡೆಯ ಧ್ವಜದಲ್ಲಿದ್ದ ಸೈಂಟ್ ಜಾರ್ಜ್ ಕ್ರಾಸ್ ಕಿತ್ತು ಹಾಕಲಾಗಿತ್ತು. ಬ್ರಿಟಿಷರು ನೀಡಿದ ಈ ಧ್ವಜದಲ್ಲಿ ಸೈಂಟ್ ಜಾರ್ಜ್ ಕ್ರಾಸ್ ಹಾಕಿದ್ದರು. ಇದು ಹಾಗೇ ಮುಂದುವರಿದಿತ್ತು. 2022ರಲ್ಲಿ ಛತ್ರಪತಿ ಶಿವಾಜಿ ಬಳಸುತ್ತಿದ್ದ ರಾಜಮುದ್ರೆಯಿಂದ ಪ್ರೇರಿತವಾದ ಹೊಸ ಭುಜಕೀರ್ತಿಯನ್ನು ನೌಕಾಪಡೆ ಅನಾವರಣಗೊಳಿಸಿತ್ತು.  ಈ ಹೊಸ ವಿನ್ಯಾಸವು ಭಾರತದ ನೌಕಾಪಡೆಯ ಪರಂಪರೆಯನ್ನು ಪ್ರತಿಬಿಂಬಿಸಲಿದೆ. ಅದರಲ್ಲಿ ಪ್ರಮುಖವಾಗಿ ಚಿನ್ನಲೇಪಿತ ನೌಕಾಪಡೆಯ ಗುಂಡಿ, ಅಷ್ಟಕೋನ, ಖಡ್ಗಗಳು ಮತ್ತು ದೂರದರ್ಶಕವನ್ನು ಹೊಂದಿದೆ. ಇವುಗಳು ನೌಕಾಪಡೆಯು ಹೊಸ ಸವಾಲುಗಳು ಮತ್ತು ಸಾಹಸಗಳಿಗೆ ತನ್ನನ್ನು ಅಣಿಗೊಳಿಸುತ್ತಿರುವುದನ್ನು ಸಂಕೇತಿಸುತ್ತದೆ ಎಂದು ಹೇಳಲಾಗಿದೆ. 
  

click me!