ಕಾರ್ಕಳದ ಕೆರೆಯಲ್ಲಿ ಮೈಮೇಲೆ ಅಣಬೆ ಇರುವ ಕಪ್ಪೆ ಪತ್ತೆ: ವಿಶ್ವದಲ್ಲಿ ಇಂಥ ಪ್ರಾಣಿ ಇದೇ ಮೊದಲು..!

By Kannadaprabha News  |  First Published Feb 15, 2024, 10:23 AM IST

ವಿಶ್ವ ವನ್ಯಜೀವಿ ನಿಧಿಯ ಸಂಶೋಧಕರು ಸ್ಥಳೀಯ ಯುವಕರ ತಂಡವೊಂದು ಪಕ್ಷಿಗಳನ್ನು ಅರಸಿ ಹೊರಟಿದ್ದ ವೇಳೆ ಆಕಸ್ಮಿಕವಾಗಿ ಈ ಹೊಸ ಕಪ್ಪೆಯ ಪ್ರಭೇಧ ಪತ್ತೆಯಾಗಿದೆ. ಜೀವಂತ ಉಭಯಚರಗಳ ಮೈಮೇಲೆ ಅಣಬೆ ಬೆಳೆದ ಪ್ರಸಂಗವೊಂದು ಎಲ್ಲೂ ದಾಖಲಾದ ಉದಾಹರಣೆ ಇಲ್ಲ ಎಂದು ವಿಜ್ಞಾನಿಗಳನ್ನು ಮಾತುಗಳನ್ನು ಉಲ್ಲೇಖಿಸಿದ ವರದಿಯೊಂದು ‘ರೆಪ್ಟೈಲ್ಸ್‌ ಆ್ಯಂಡ್‌ ಆ್ಯಂಫಿಬಿಯನ್ಸ್‌’ ಎಂಬ ವಿಜ್ಞಾನ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ನವದೆಹಲಿ(ಫೆ.15): ಮರಗಿಡಗಳ ಮೇಲೆ, ಕೊಳೆತ ವಸ್ತುಗಳಿರುವ ಪ್ರದೇಶಗಳಲ್ಲಿ ಅಣಬೆ ಬೆಳೆಯುವುದು ಗೊತ್ತು. ಆದರೆ ತನ್ನ ಮೈಮೇಲೆ ಅಣಬೆ ಬೆಳೆಯಲು ಅವಕಾಶ ನೀಡುವ ಅಪರೂಪದ ಕಪ್ಪೆ ಪ್ರಭೇದವೊಂದು ಕರ್ನಾಟಕದ ಉಡುಪಿ ಜಿಲ್ಲೆ ಕಾರ್ಕಳ ಸಮೀಪದ ಕೆರೆಯೊಂದರಲ್ಲಿ ಪತ್ತೆಯಾಗಿದ್ದು, ಸಂಶೋಧಕರು, ವಿಜ್ಞಾನಿಗಳನ್ನು ಮೂಕವಿಸ್ಮಿತ ಮಾಡಿದೆ.

ವಿಶ್ವ ವನ್ಯಜೀವಿ ನಿಧಿಯ ಸಂಶೋಧಕರು ಸ್ಥಳೀಯ ಯುವಕರ ತಂಡವೊಂದು ಪಕ್ಷಿಗಳನ್ನು ಅರಸಿ ಹೊರಟಿದ್ದ ವೇಳೆ ಆಕಸ್ಮಿಕವಾಗಿ ಈ ಹೊಸ ಕಪ್ಪೆಯ ಪ್ರಭೇಧ ಪತ್ತೆಯಾಗಿದೆ. ಜೀವಂತ ಉಭಯಚರಗಳ ಮೈಮೇಲೆ ಅಣಬೆ ಬೆಳೆದ ಪ್ರಸಂಗವೊಂದು ಎಲ್ಲೂ ದಾಖಲಾದ ಉದಾಹರಣೆ ಇಲ್ಲ ಎಂದು ವಿಜ್ಞಾನಿಗಳನ್ನು ಮಾತುಗಳನ್ನು ಉಲ್ಲೇಖಿಸಿದ ವರದಿಯೊಂದು ‘ರೆಪ್ಟೈಲ್ಸ್‌ ಆ್ಯಂಡ್‌ ಆ್ಯಂಫಿಬಿಯನ್ಸ್‌’ ಎಂಬ ವಿಜ್ಞಾನ ಪತ್ರಿಕೆಯಲ್ಲಿ ಪ್ರಕಟವಾಗಿದೆ.

Tap to resize

Latest Videos

undefined

ಹಾಸ್ಟೆಲ್‌ ಆಹಾರದಲ್ಲಿ ಸತ್ತ ಕಪ್ಪೆ ಪತ್ತೆ: ಐಐಟಿಯಲ್ಲೇ ಹೀಗಾದ್ರೆ ಹೇಗೆ?

ವರದಿಯಲ್ಲಿ ಪ್ರಕಟವಾಗಿರುವ ಚಿತ್ರದಲ್ಲಿ ಕಪ್ಪೆಯ ಒಂದು ಬದಿಯಲ್ಲಿ ಸಣ್ಣದೊಂದು ಅಣಬೆ ಬೆಳೆದಿರುವುದು ಕಂಡುಬಂದಿದೆ. ಮಳೆಗಾಲದಲ್ಲಿ ಮಾತ್ರ ನೀರು ತುಂಬಿರುವ ರಸ್ತೆ ಬದಿಯ ಸಣ್ಣದೊಂದು ಕೆರೆಯೊಂದರಲ್ಲಿ ಇಂಥ 40 ಕಪ್ಪೆಗಳು ಪತ್ತೆಯಾಗಿದ್ದವು. ಮೇಲ್ನೋಟಕ್ಕೆ ಸಾಮಾನ್ಯ ಕಪ್ಪೆಯಂತೆ ಕಂಡುಬಂದಿದ್ದರೂ ಸೂಕ್ಷ್ಮವಾಗಿ ಅವಲೋಕಿಸಿದಾಗ ಅವುಗಳ ಮೇಲೆ ಅಣಬೆ ಬೆಳೆದಿರುವುದು ಕಂಡುಬಂದಿದೆ.

ಇದು ನಮ್ಮ ಜೀವ ಪರಿಸರ ಎಷ್ಟು ವೈವಿಧ್ಯ ಎಂಬುದನ್ನು ತೋರಿಸಿದೆ. ಜೊತೆಗೆ ನೈಸರ್ಗಿಕ ಪರಿಸರದಲ್ಲಿ ಉಭಯಚರಗಳು ಮತ್ತು ಫಂಗಸ್‌ಗಳ ನಡುವಿನ ಸಂಬಂಧದ ಕುರಿತೂ ಬೆಳಕು ಚೆಲ್ಲಿದೆ. ಪಶ್ಚಿಮ ಘಟ್ಟಪ್ರದೇಶದ ಈ ಸ್ಥಳೀಯ ಜೀವವೈವಿಧ್ಯ ಹಾಗೆಯೇ ಉಳಿಯಲು ಇಂಥ ಜೀವಿಗಳ ರಕ್ಷಣೆ ಅಗತ್ಯ ಎಂದು ವರದಿ ಹೇಳಿದೆ.

ಕಪ್ಪೆಗಳ ಮೇಲೆ ಹೀಗೆ ಕಂಡುಬಂದ ಅಣಬೆಯನ್ನು ಬೊನೆಟ್‌ ಮಶ್ರೂಮ್‌ ಎಂದು ಗುರುತಿಸಲಾಗಿದೆ. ಇವು ಸಾಮಾನ್ಯವಾಗಿ ಕೊಳೆತ ಮರಗಳ ಮೇಲೆ ಕಂಡುಬರುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

click me!