ಕಾಂಗ್ರೆಸ್‌ಗೆ ತೀವ್ರ ಮುಜುಗರ, ಅಗ್ನಿಪಥ ವಿರುದ್ಧದ ಪ್ರತಿಭಟನಾ ಪತ್ರಕ್ಕೆ ಸಹಿ ಹಾಕಲು ಮನೀಶ್ ತಿವಾರಿ ನಕಾರ!

By Suvarna News  |  First Published Jul 11, 2022, 5:22 PM IST
  • ಕೇಂದ್ರ ಸರ್ಕಾರದ ಸೇನಾ ನೇಮಕಾತಿ ಅಗ್ನಿಪಥ ವಿರುದ್ಧದ ಪ್ರತಿಭಟನೆ
  • ಸಂಸದೀಯ ಸಮಿತಿ ಮುಂದೆ ರಾಜನಾಥ್ ಸಿಂಗ್ ವಿವರಣೆಗೆ ಪ್ರತಿಭಟನೆ
  • ಪ್ರತಿಭಟನಾ ಪತ್ರಕ್ಕೆ ಸಹಿ ಹಾಕದೇ ಕಾಂಗ್ರೆಸ್‌ಗೆ ಮುಜುಗರ ತಂದಿಟ್ಟ ತಿವಾರಿ

ನವದೆಹಲಿ(ಜು.11):  ಕೇಂದ್ರ ಸರ್ಕಾರ ಜಾರಿಗೆ ತಂದ  ಅಗ್ನಿಪಥ ಸೇನಾ ನೇಮಕಾತಿ ಯೋಜನೆ ವಿರುದ್ಧ ದೇಶಾದ್ಯಂತ ಭಾರಿ ಪ್ರತಿಭಟನೆ ನಡೆದಿತ್ತು. ಕಾಂಗ್ರೆಸ್ ಪಕ್ಷ ಅಗ್ನಿಪಥ ಯೋಜನೆಗೆ ಭಾರಿ ವಿರೋಧ ವ್ಯಕ್ತಪಡಿಸಿತ್ತು. ಯೋಜನೆ ಹಿಂಪಡೆಯಲು ಆಗ್ರಹಿಸಿತ್ತು. ಆದರೆ ಇದೇ ಅಗ್ನಿಪಥ ಯೋಜನೆ ವಿಚಾರದಲ್ಲಿ ಕಾಂಗ್ರೆಸ್ ತೀವ್ರ ಮುಜುಗರಕ್ಕೆ ಒಳಗಾಗಿದೆ. ಅಗ್ನಿಪಥ ವಿರುದ್ಧ ಪ್ರತಿಭಟನಾ ಪತ್ರದಲ್ಲಿ ಸಹಿ ಹಾಕಲು ಕಾಂಗ್ರೆಸ್ ಪ್ರಮುಖ ನಾಯಕ ಮನೀಶ್ ತಿವಾರಿ ನಿರಾಕರಿಸಿದ್ದಾರೆ. ಇದು ಕಾಂಗ್ರೆಸ್ ನಡೆಸಿದ ಅಗ್ನಿಪಥ ಪ್ರತಿಭಟನಾ ಆಂದೋಲನಕ್ಕೆ ತೀವ್ರ ಹಿನ್ನಡೆ ತಂದಿದೆ.

ಸಂಸದೀಯ ಸಮಿತಿ ಮುಂದೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್(Defence Minister) ನೂತನ ಯೋಜನೆ ಕುರಿತು ಮಾಹಿತಿ ನೀಡಿದ್ದಾರೆ. ಈ ವೇಳೆ ಕಾಂಗ್ರೆಸ್ ಪ್ರತಿಭಟನೆ ನಡೆಸಿ ಸಮಿತಿಗೆ ಪತ್ರ ನೀಡಿದೆ. ಆದರೆ ಈ ಪತ್ರಕ್ಕೆ ಸಹಿ ಹಾಕಲು ಮನೀಶ್ ತಿವಾರಿ(Congress leader) ನಿರಾಕರಿಸಿದ ಘಟನೆ ನಡೆದಿದೆ.  ಈ ಮೂಲಕ ಕಾಂಗ್ರೆಸ್ ನಡೆಸುತ್ತಿರುವ ಅಗ್ನಿಪಥ ಯೋಜನೆ ವಿರುದ್ದ ಪ್ರತಿಭಟನೆಗೆ ತಮ್ಮ ಸಹಕಾರ ಇಲ್ಲ ಅನ್ನೋದನ್ನು ಪರೋಕ್ಷವಾಗಿ ಹೇಳಿದ್ದಾರೆ.

Tap to resize

Latest Videos

 

ಶಿಂಜೋ ಅಬೆ ಕೊಲೆಯನ್ನು ಅಗ್ನಿಪಥ್‌ ಯೋಜನೆಗೆ ಲಿಂಕ್ ಮಾಡಿದ ಕಾಂಗ್ರೆಸ್ ನಾಯಕ!

ಮನೀಶ್ ತಿವಾರಿ ನಡೆಗಳು ಈಗಾಗಲೇ ಕೆಲ ಸಂದರ್ಭದಲ್ಲಿ  ಕಾಂಗ್ರೆಸ್ ಪಕ್ಷವವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಇದೀಗ ಅಗ್ನಿಪಥ(New Scheme) ಯೋಜನೆ ಕುರಿತು ಮನೀಶ್ ತಿವಾರಿಯ ನಿರ್ಧಾರ ಕೂಡ ಕಾಂಗ್ರೆಸ್ ಪಕ್ಷವನ್ನು ಮುಜುಗರಕ್ಕೀಡುಮಾಡಿದೆ.  ಅಗ್ನಿಪಥ ಯೋಜನೆ ವಿರುದ್ಧ ಕಾಂಗ್ರೆಸ್ ನಾಯಕರಲ್ಲೇ ಅಪಸ್ವರವಿದೆ. ಹಲವು ನಾಯಕರು ಅಗ್ನಿಪಥ ಬೆಂಬಲಿಸಿದ್ದಾರೆ. ಇದು ವಿಶೇಷ ಸಂದರ್ಭಗಳಲ್ಲಿ ಬಯಲಾಗುತ್ತಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ.

ಕೇವಲ ಪ್ರಧಾನಿ, ಬಿಜೆಪಿ ಜಾರಿಗೆ ತಂದ ಕಾರಣಕ್ಕೆ ಕಾಂಗ್ರೆಸ್ ವಿರೋಧಿಸುತ್ತಿದೆ. ಜನರಿಗೆ ತಪ್ಪು ಮಾಹಿತಿ ನೀಡಿ ಯುವಕರನ್ನು ದಾರಿ ತಪ್ಪಿಸುತ್ತಿದೆ. ದೇಶದಲ್ಲಿ ಭಾರಿ ಪ್ರತಿಭಟನೆ ಆಯೋಜಿಸಿ ಸಾರ್ವಜನಿಕ ಆಸ್ತಿ ಪಾಸ್ತಿಗಳಿಗೆ ಹಾನಿ ಮಾಡಲಾಗಿದೆ ಅನ್ನೋ ಮಾತುಗಳು ಕೇಳಿಬಂದಿದೆ. 

 

ಅಗ್ನಿಪಥ್‌ ಬಗ್ಗೆ ಪ್ರತಿಭಟನೆ ಆರಂಭವಾದಷ್ಟೇ ವೇಗದಲ್ಲಿ ಕಾವು ಕಳೆದುಕೊಂಡಿದೆ: ವಾಯುಪಡೆ ಅಧಿಕಾರಿ

ಅಗ್ನಿಪಥ್‌ ಯೋಜನೆ ದೇಶದ ಯುವಕ-ಯುವತಿಯರಿಗೆ ಲಾಭಕ್ಕಿಂತ ನಷ್ಟವೇ ಹೆಚ್ಚು ಮಾಡುತ್ತದೆ. ನಾಲ್ಕು ವರ್ಷ ಸೇವೆ ಸಲ್ಲಿಸಿದ ಬಳಿಕ ಯುವಕ-ಯುವತಿಯರ ಮುಂದಿನ ಜೀವನ ದುಸ್ತರವಾಗಲಿದೆ. ಬಿಜೆಪಿ(BJP) ಸರ್ಕಾರ ಯುವಕರ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದೆ. ಯುವಕರು ಸರ್ಕಾರದ ಬಣ್ಣದ ಮಾತಿಗೆ ಮರುಳಾಗಿ ಭವಿಷ್ಯ ಹಾಳು ಮಾಡಿಕೊಳ್ಳಬಾರದು ಕಾಂಗ್ರೆಸ್ ಹೇಳಿತ್ತು.

ನಿರುದ್ಯೋಗ ಸಮಸ್ಯೆ ಇನ್ನಷ್ಟುಉಲ್ಬಣಿಸಲಿದೆ. ಈಗಿರುವ ಸಮಸ್ಯೆಗಳನ್ನೆ ಪರಿಹರಿಸಲಾಗದ ಸರಕಾರವು ಜನರ ಜೀವನದೊಂದಿಗೆ ಚಲ್ಲಾಟವಾಡುತ್ತಿದೆ. ಇವರ ನೀತಿಗೆ ಜನರು ರೋಸಿಹೊಗಿದ್ದಾರೆ ಸರಕಾರದ ದ್ವೇಷದ ರಾಜಕಾರಣ, ಜಾತಿಗಳ ಮಧ್ಯೆ ವಿಷಬೀಜ ಬಿತ್ತುವುದರಿಂದ ದೇಶದಲ್ಲಿ ಗಲಭೆಗಳು ಸೃಷ್ಟಿಯಾಗುತ್ತಿವೆ. ಜನ ಗಮನಿಸುತ್ತಿದ್ದಾರೆ. ಬಿಜೆಪಿಗೆ ತಕ್ಕ ಪಾಠ ಕಲಿಸುವ ಕಾಲ ದೂರವಿಲ್ಲ ಎಂದು ಕಾಂಗ್ರೆಸ್ ಎಲ್ಲಾ ರಾಜ್ಯಗಳಲ್ಲಿ ಪ್ರತಿಭಟನೆ ನಡೆಸಿತ್ತು.

ಅಗ್ನಿಪಥ್‌ ಹಿಂದೆ ಆರ್‌ಎಸ್‌ಎಸ್‌ ಅಜೆಂಡಾ:ಆರೋಪ
ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಅಗ್ನಿಪಥ್‌ ಯೋಜನೆ ನಿರುದ್ಯೋಗಿ ಯುವಕರಿಗೆ ಕಂಟಕವಾಗಲಿದೆ. ಇದು ಕಾರ್ಪೋರೇಟ್‌ ಹಾಗೂ ಆರ್‌ಎಸ್‌ಎಸ್‌ ಅಜೆಂಡಾ ಜಾರಿಗೊಳಿಸುವ ಹುನ್ನಾರ ಎಂದು ಕಾಂಗ್ರೆಸ್‌ ಮುಖಂಡ ಜಿ. ಶ್ರೀನಾಥ್‌ ಬಾಬು ಆರೋಪಿಸಿದ್ದಾರೆ. ಪ್ರಸ್ತುತ ಸೇನೆ ನೇಮಕಾತಿ ವ್ಯವಸ್ಥೆ ಸರಿಯಾಗಿ ಹಾಗೂ ಪಾರದರ್ಶಕವಾಗಿದೆ. ಅಗ್ನಿಪಥ್‌ ಯೋಜನೆ ಯಾಕೆ ಜಾರಿಗೊಳಿಸಲು ಮುಂದಾಗಿದೆ? ನೇಮಕಾತಿಯಲ್ಲಿ ಸಮಸ್ಯೆ ಹಾಗೂ ಏನಾದರೂ ನ್ಯೂನತೆ ಇದ್ದರೆ ಸ್ಪಷ್ಟಪಡಿಸಲಿ. ಅಗ್ನಿಪಥ ಯೋಜನೆ ಮೂಲಕ ಕೇಂದ್ರ ಸರ್ಕಾರ 4 ವರ್ಷ ಸೇವೆ ಸೀಮಿತಗೊಳಿಸಲಾಗಿದೆ. ಇದರಿಂದ ಉನ್ನತ ಶಿಕ್ಷಣ ಹಾಗೂ ಉದ್ಯೋಗದಿಂದಲೂ ವಂಚಿತರಾಗಿ ಅತಂತ್ರ ಸ್ಥಿತಿ ನಿರ್ಮಾಣವಾಗುತ್ತದೆ ಎಂದು ದೂರಿದ್ದಾರೆ.

click me!